ಅಮೃತಸರ (ಪಂಜಾಬ್): ನಗರದಲ್ಲಿ ಪೊಲೀಸರ ದಾಳಿ ವೇಳೆ ದೊಡ್ಡ ಡ್ರಾಮಾವೊಂದು ಜರುಗಿದೆ. ಆರೋಪಿ ಬಂಧಿಸಲು ಪೊಲೀಸರು ಬಂದಾಗ ಆರೋಪಿ ಪರಾರಿಯಾಗಲು ಯತ್ನಿಸಿದ್ದಾನೆ. ಅಷ್ಟರಲ್ಲಿ ಕೊಟ್ಟಿಗೆಯೊಂದರ ಕಟ್ಟಡದಿಂದ ಜಿಗಿದ ಕಾರಣ ಕಾಲು ಮುರಿದುಕೊಂಡಿದ್ದಾನೆ
ಈ ಪ್ರಕರಣವು ಅಮೃತಸರದ ಗ್ರಾಸ್ ಮಂಡಿ ಪ್ರದೇಶದಿಂದ ವರದಿಯಾಗಿದೆ. ಅಲ್ಲಿ ಎಸ್‌ಟಿಎಫ್ ಪೊಲೀಸರು ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ಇಬ್ಬರು ಅನುಮಾನಾಸ್ಪದ ಯುವಕರನ್ನು ಬಂಧಿಸಲಾಗಿದೆ. ಪೊಲೀಸರನ್ನು ಕಂಡ ತಕ್ಷಣ ರೋಹಿತ್ ಮತ್ತು ಅವರ ಜೊತೆಗಾರ ಓಡಿಹೋಗಲು ಯತ್ನಿಸಿದ್ದಾರೆ. ಹಾಗೆ ಕಂಟ್ರಿ ಪಿಸ್ತೂಲ್‌ನೊಂದಿಗೆ ರೋಹಿತ್ ಕಟ್ಟಡವೊಂದನ್ನು ಹತ್ತಿದ್ದಾನೆ . ತಪ್ಪಿಸಿಕೊಳ್ಳುವ ಭರದಲ್ಲಿ ಕೊಟ್ಟಿಗೆಯಿಂದ ಜಿಗಿದು ಕಾಲು ಮುರಿದುಕೊಂಡು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಡಿಎಸ್ಪಿ ಯೋಗೇಶ್ ಶರ್ಮಾ ಅವರು ಅಮೃತಸರದ ಗ್ರಾಸ್ ಮಂಡಿ ಚೌಕ್‌ನಲ್ಲಿ ಅನುಮಾನಾಸ್ಪದ ಯುವಕರ ಬಗ್ಗೆ ತನಿಖೆ ನಡೆಸುತ್ತಿರುವಾಗ ಇವರಿಬ್ಬರೂ ಈ ರೀತಿ ಮಾಡಿದ್ದಾರೆ. ಘಟನೆ ಸಂಬಂಧ ಪೊಲೀಸರು ಹೆಚ್ಚಿನ ತನಿಖೆಗೆ ಮುಂದಾಗಿದ್ದಾರೆ.
ಇದನ್ನೂ ಓದಿ: ಕಿವಿ ಸಮಸ್ಯೆಗೆ ಹೋದವಳು ಕೈ ಕಳೆದುಕೊಂಡಳು: ಜೀವನವೇ ಸರ್ವನಾಶವಾಯಿತಾ ?