ETV Bharat / bharat

40 ವರ್ಷಗಳ ನಂತರ ಭಾರತ - ಶ್ರೀಲಂಕಾ ನಡುವೆ ಪ್ರಯಾಣಿಕರ ಹೈಸ್ಪೀಡ್ ದೋಣಿ ಶುರು - ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ

40 ವರ್ಷಗಳ ನಂತರ ತಮಿಳುನಾಡಿನ ನಾಗಪಟ್ಟಣಂ ಹಾಗೂ ಶ್ರೀಲಂಕಾದ ಕಂಕಸಂತುರೈ ನಡುವೆ ಹೈಸ್ಪೀಡ್ ಪ್ರಯಾಣಿಕರ ದೋಣಿ ಸೇವೆ ಶುರುವಾಗಿದೆ.

High speed passenger ferry service between India Lanka resumes after 4 decades
40 ವರ್ಷಗಳ ನಂತರ ಭಾರತ - ಶ್ರೀಲಂಕಾ ನಡುವೆ ಹೈಸ್ಪೀಡ್ ಪ್ರಯಾಣಿಕರ ದೋಣಿ ಶುರು
author img

By ETV Bharat Karnataka Team

Published : Oct 14, 2023, 4:32 PM IST

ಚೆನ್ನೈ (ತಮಿಳುನಾಡು): ತಮಿಳುನಾಡಿನ ನಾಗಪಟ್ಟಣಂ ಹಾಗೂ ಶ್ರೀಲಂಕಾದ ಕಂಕಸಂತುರೈ ನಡುವಿನ ಪ್ರಯಾಣಿಕರ ಹೈಸ್ಪೀಡ್ ದೋಣಿ ಸೇವೆ 40 ವರ್ಷಗಳ ನಂತರ ಪುನರಾರಂಭಗೊಂಡಿದೆ. ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೊವಾಲ್, ತಮಿಳುನಾಡು ಲೋಕೋಪಯೋಗಿ ಮತ್ತು ಬಂದರು ಸಚಿವ ಇ.ವಿ. ವೇಲು ಶನಿವಾರ ನಾಗಪಟ್ಟಣಂ ಬಂದರಿನಿಂದ ದೋಣಿ ಸೇವೆಗೆ ಚಾಲನೆ ನೀಡಿದರು.

ತಮಿಳುನಾಡು ಮತ್ತು ಶ್ರೀಲಂಕಾದ ಉತ್ತರ ಪ್ರಾಂತ್ಯದ ನಡುವಿನ ಸಾಂಸ್ಕೃತಿಕ ಬಾಂಧವ್ಯವನ್ನು ಈ ದೋಣಿ ಸೇವೆಯ ಕಾರ್ಯಾಚರಣೆ ಹೆಚ್ಚಿಸುತ್ತದೆ. ಅಲ್ಲದೇ, ನಾಗಪಟ್ಟಣಂ ಸಮೀಪದಲ್ಲಿರುವ ತಿರುವನಲ್ಲೂರು, ನಾಗೂರ್ ಮತ್ತು ವೆಲಂಕಣಿಯಂತಹ ಧಾರ್ಮಿಕ ಕೇಂದ್ರಗಳಿಗೆ ಶ್ರೀಲಂಕಾದಿಂದ ಹಲವಾರು ಯಾತ್ರಾರ್ಥಿಗಳು ಭೇಟಿ ನೀಡಲು ಅನುಕೂಲವಾಗಲಿದೆ ಎಂದು ಸರ್ಬಾನಂದ ಸೋನೊವಾಲ್ ತಮ್ಮ ಉದ್ಘಾಟನಾ ಭಾಷಣದಲ್ಲಿ ಹೇಳಿದರು.

ಮತ್ತೊಂದೆಡೆ, ಉಭಯ ರಾಷ್ಟ್ರಗಳ ನಡುವಿನ ಹೈಸ್ಪೀಡ್ ದೋಣಿ ಸೇವೆ ಆರಂಭದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ ವಿಡಿಯೋ ಸಂದೇಶಗಳ ಮೂಲಕ ಶ್ಲಾಘಿಸಿದ್ದಾರೆ. ಈ ದೋಣಿ ಸೇವೆಯು ಭಾರತ ಹಾಗೂ ಶ್ರೀಲಂಕಾ ನಡುವಿನ ಸಾಂಸ್ಕೃತಿಕ, ವಾಣಿಜ್ಯ ಮತ್ತು ರಾಜತಾಂತ್ರಿಕ ಸಂಬಂಧಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಈ ಸಂಪರ್ಕವು ಭಾರತ ಹಾಗೂ ಶ್ರೀಲಂಕಾ ಆರ್ಥಿಕ ಪಾಲುದಾರಿಕೆಯ ಜಂಟಿ ದೃಷ್ಟಿಯ ಕೇಂದ್ರ ವಿಷಯವಾಗಿದೆ. ನಾವು ರಾಮೇಶ್ವರಂ ಮತ್ತು ತಲೈಮನ್ನಾರ್ ನಡುವೆ ದೋಣಿ ಸೇವೆಯನ್ನು ಪುನಾರಂಭಿಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

  • Ferry services between India and Sri Lanka will enhance connectivity, promote trade and reinforce the longstanding bonds between our nations. https://t.co/VH6O0Bc4sa

    — Narendra Modi (@narendramodi) October 14, 2023 " class="align-text-top noRightClick twitterSection" data=" ">

ಉಭಯ ದೇಶಗಳ ನಡುವೆ ಸಂಪರ್ಕ ಸುಧಾರಿಸುವಲ್ಲಿ ದೋಣಿ ಸೇವೆಯು ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಶ್ರೀಲಂಕಾದ ಪ್ರಧಾನಿ ರನಿಲ್ ವಿಕ್ರಮಸಿಂಘೆ ಹೇಳಿದ್ದಾರೆ. ಶ್ರೀಲಂಕಾದಲ್ಲಿ ನಡೆದ ಅಂತರ್​ಯುದ್ಧದ (1983) ಕಾರಣದಿಂದಾಗಿ ಈ ಹಿಂದೆ ದೋಣಿ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಹೈಸ್ಪೀಡ್ ಪ್ರಯಾಣಿಕರ ದೋಣಿ 'ಚೆರಿಯಪಾಣಿ'ಯಲ್ಲಿ 50 ಪ್ರಯಾಣಿಕರು, ಕ್ಯಾಪ್ಟನ್ ಬಿಜು ಜಾರ್ಜ್ ಹಾಗೂ 12 ಸಿಬ್ಬಂದಿ ಇದ್ದರು. ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ನಿರ್ವಹಿಸುತ್ತಿರುವ ಈ ದೋಣಿ ಸೇವೆಯ ಟಿಕೆಟ್‌ಗಳನ್ನು ಖಾಸಗಿ ಏಜೆನ್ಸಿ ಮಾರಾಟ ಮಾಡಲಿದೆ. ಅಂದಾಜು 150 ಪ್ರಯಾಣಿಕರು ದೋಣಿಯಲ್ಲಿ ಪ್ರಯಾಣಿಸಬಹುದಾಗಿದೆ.

ನಾಗಪಟ್ಟಣಂನಿಂದ ಬೆಳಗ್ಗೆ 7 ಗಂಟೆಗೆ ಪ್ರಾರಂಭವಾಗಿ ಕಂಕಸಂತುರೈಗೆ 11 ಗಂಟೆಗೆ ತಲುಪುತ್ತದೆ. ಅಲ್ಲಿಂದ ಮಧ್ಯಾಹ್ನ 1.30ಕ್ಕೆ ಹಿಂತಿರುಗಿ ಸಂಜೆ 5.30ಕ್ಕೆ ನಾಗಪಟ್ಟಣಂ ತಲುಪುತ್ತದೆ. ಈಶಾನ್ಯ ಮಾನ್ಸೂನ್​ನಲ್ಲಿ ಅ.23ರ ವರೆಗೆ ದೋಣಿ ಸೇವೆ ಇರಲಿದೆ. 2024ರ ಜನವರಿಯಲ್ಲಿ ಮತ್ತೆ ಸೇವೆ ಪುನರಾರಂಭವಾಗಲಿದೆ ಎಂದು ರಾಜ್ಯ ಬಂದರು ಅಧಿಕಾರಿ ಅನ್ಬಳಗನ್ ಮಾಹಿತಿ ನೀಡಿದ್ದಾರೆ. (ಐಎಎನ್‌ಎಸ್)

ಇದನ್ನೂ ಓದಿ: ಪಾರ್ವತಿ ಕುಂಡ್, ಜಾಗೇಶ್ವರ ದೇವಾಲಯಗಳಿಗೆ ಮೋದಿ ಭೇಟಿ ನೀಡಿದ್ದೇಕೆ ಗೊತ್ತಾ? ಈ ಬಗ್ಗೆ ಅವರು ಹೇಳಿದ್ದೇನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.