ETV Bharat / bharat

ತಾಯಿಗೆ ನಿಂದನೆ : ಹಿರಿಯ ವಿದ್ಯಾರ್ಥಿಯನ್ನ ಇರಿದು ಕೊಂದ ಕಿರಿಯ ವಿದ್ಯಾರ್ಥಿ - ನವದೆಹಲಿ ಕ್ರೈಂ ನ್ಯೂಸ್​

ಮೃತ ಹಿರಿಯ ವಿದ್ಯಾರ್ಥಿ ಕಿರಿಯ ವಿದ್ಯಾರ್ಥಿಯ ತಾಯಿಯನ್ನ ನಿಂದಿಸಿದ್ದನಂತೆ. ಇದಕ್ಕೆ ಸಂಬಂಧಿಸಿದಂತೆ ಕ್ಷಮೆ ಕೇಳಲು ನಿರಾಕರಣೆ ಮಾಡಿದ್ದರಿಂದ ಚಾಕುವಿನಿಂದ ಇರಿಯಲಾಗಿದೆ. ಈಗಾಗಲೇ ವಿದ್ಯಾರ್ಥಿಯನ್ನ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ..

class 11  student murder
class 11 student murder
author img

By

Published : Oct 2, 2021, 9:17 PM IST

ನವದೆಹಲಿ : 10ನೇ ತರಗತಿಯಲ್ಲಿ ವ್ಯಾಸಂಗ ಮಾಡ್ತಿದ್ದ ವಿದ್ಯಾರ್ಥಿಯೋರ್ವ ಅದೇ ಶಾಲೆಯ 11ನೇ ತರಗತಿಯಲ್ಲಿ ವ್ಯಾಸಂಗ ಮಾಡ್ತಿದ್ದ ವಿದ್ಯಾರ್ಥಿಯನ್ನ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ. ದೆಹಲಿಯ ಒಕ್ಲಾ ಪ್ರದೇಶದಲ್ಲಿರುವ ಸರ್ಕಾರಿ ಶಾಲೆಯ ಮುಂಭಾಗದಲ್ಲಿ ಈ ಘಟನೆ ನಡೆದಿರುವುದಾಗಿ ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.

ತಾಯಿಯನ್ನ ನಿಂದಿಸಿದ್ದಕ್ಕಾಗಿ ಕೊಲೆ

ಮೃತ ಹಿರಿಯ ವಿದ್ಯಾರ್ಥಿ ಕಿರಿಯ ವಿದ್ಯಾರ್ಥಿಯ ತಾಯಿಯನ್ನ ನಿಂದಿಸಿದ್ದನಂತೆ. ಇದಕ್ಕೆ ಸಂಬಂಧಿಸಿದಂತೆ ಕ್ಷಮೆ ಕೇಳಲು ನಿರಾಕರಣೆ ಮಾಡಿದ್ದರಿಂದ ಚಾಕುವಿನಿಂದ ಇರಿಯಲಾಗಿದೆ. ಈಗಾಗಲೇ ವಿದ್ಯಾರ್ಥಿಯನ್ನ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿರಿ: ಸಿಎಂ ಸ್ಥಾನದಿಂದ ಅಮರೀಂದರ್​ ಸಿಂಗ್‌ರನ್ನ ಕೆಳಗಿಳಿಸಿದ್ದು ಸೋನಿಯಾ ಅಲ್ಲ, 78 ಶಾಸಕರು : ಸುರ್ಜೇವಾಲಾ

ಘಟನೆ ನಡೆದಾಗ ಇಬ್ಬರು ವಿದ್ಯಾರ್ಥಿಗಳು ಸಮವಸ್ತ್ರದಲ್ಲಿದ್ದರು. ಇರಿತಕ್ಕೊಳಗಾದ ವಿದ್ಯಾರ್ಥಿಯನ್ನ ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಆತ ಸಾವನ್ನಪ್ಪಿದ್ದಾನೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.