ಗುವಾಹಟಿ (ಅಸ್ಸೋಂ): ಅಸ್ಸೋಂ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಸುಮಾರು 8 ಕೋಟಿ ರೂಪಾಯಿ ಮೌಲ್ಯದ ಹೆರಾಯಿನ್ಅನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೇ, ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಕರ್ಬಿ ಆಂಗ್ಲಾಂಗ್ ಜಿಲ್ಲೆಯ ಬೊಕಜಾನ್ ಪ್ರದೇಶದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಈ ಪ್ರದೇಶದಲ್ಲಿ ಪೆಡ್ಲರ್‌ಗಳ ಚಟುವಟಿಕೆಯ ಬಗ್ಗೆ ಪೊಲೀಸರು ನಿಖರ ಮಾಹಿತಿಯನ್ನು ಹೊಂದಿದ್ದರು. ಹೀಗಾಗಿಯೇ ಬೊಕಾಜಾನ್‌ನ ಖಟ್‌ಖಾತಿ ಎಂಬಲ್ಲಿ ವಾಹನವೊಂದನ್ನು ತಡೆದು ತಪಾಸಣೆ ನಡೆಸಿದ್ದರು. ಈ ವೇಳೆ 966 ಗ್ರಾಂ ಹೆರಾಯಿನ್ನ ಸುಮಾರು 75 ಬಾಕ್ಸ್‌ಗಳು ಪತ್ತೆಯಾಗಿವೆ.
ಜೊತೆಗೆ ವಾಹನದಲ್ಲಿ ಸೋಲೆಮನ್ ತುಯೆರ್ ಮತ್ತು ಸಿಮಾನ್ ತುಯೆರ್ ಎಂಬುವವರಿದ್ದು, ಇವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಇವರಿಬ್ಬರೂ ದಿಮಾಪುರ್‌ನಿಂದ ಹೆರಾಯಿನ್ ಸಾಗಿಸುತ್ತಿದ್ದರು. ಗುವಾಹಟಿ ಕಡೆಗೆ ಹೋಗುವ ಯೋಜನೆ ಹಾಕಿಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.
ಇತ್ತೀಚಿನ ದಿನಗಳಲ್ಲಿ ಕರ್ಬಿ ಆಂಗ್ಲಾಂಗ್ ಮತ್ತು ದಿಮಾ ಹಸಾವೊ ಜಿಲ್ಲೆಗಳಲ್ಲಿ ಮಾದಕ ದ್ರವ್ಯ ದಂಧೆ ಹೆಚ್ಚಾಗಿದೆ. ಆದಾಗ್ಯೂ, ಡ್ರಗ್ಸ್ ಹಾವಳಿಗೆ ಕಡಿವಾಣ ಮತ್ತು ಈ ದಂಧೆಯಲ್ಲಿ ತೊಡಗಿರುವವರನ್ನು ಬಂಧಿಸಲು ನಿರಂತರವಾಗಿ ಶ್ರಮಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ಕೆಲವು ತಿಂಗಳಿಂದ ವಶಪಡಿಸಿಕೊಂಡಿದ್ದ ಸುಮಾರು 2 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಡ್ರಗ್ಸ್ನ್ನು ಅಸ್ಸೋಂ ಪೊಲೀಸರು ಶನಿವಾರ ಸುಟ್ಟು ಹಾಕಿದ್ದಾರೆ.
ಇದನ್ನೂ ಓದಿ: ವಿಡಿಯೋ: ₹1,920 ಕೋಟಿ ಮೌಲ್ಯದ ಮಾದಕ ವಸ್ತು ನಾಶಪಡಿಸಿದ ಅಸ್ಸಾಂ ಪೊಲೀಸರು