ETV Bharat / bharat

ಪುನೀತ್​ ಆತ್ಮಕ್ಕೆ ಸದ್ಗತಿ ಕೋರಿ ರಾಯಚೂರು ಅಭಿಮಾನಿಗಳಿಂದ ಶ್ರೀಶೈಲಕ್ಕೆ ಪಾದಯಾತ್ರೆ - Hero Puneeth Fans rally to Srisailam

ಪುನೀತ್​ ರಾಜ್‌ಕುಮಾರ್​ ಅವರ ಆತ್ಮಕ್ಕೆ ಸದ್ಗತಿ ಸಿಗಲೆಂದು ಪ್ರಾರ್ಥಿಸಿ ರಾಯಚೂರು ಜಿಲ್ಲೆಯ ಅಪ್ಪು ಅಭಿಮಾನಿಗಳು ಶ್ರೀಶೈಲಕ್ಕೆ ಆಂಧ್ರಪ್ರದೇಶದ ಮೂಲಕ ಪಾದಯಾತ್ರೆ ಹೊರಟಿದ್ದಾರೆ.

puneeth
ಪುನೀತ್
author img

By

Published : Mar 21, 2022, 10:10 PM IST

ಆಂಧ್ರಪ್ರದೇಶ: ಯುವರತ್ನ ಪುನೀತ್​ ರಾಜ್‌ಕುಮಾರ್​ ಸಾವು ಅಭಿಮಾನಿಗಳ ಪ್ರೀತಿಯಿಂದ ಮರೆಯಾಗಲು ಸಾಧ್ಯವಾಗಿಲ್ಲ.​ ಶ್ರೀಶೈಲಕ್ಕೆ ಪಾದಯಾತ್ರೆ ಹೊರಟಿರುವ ಗುಂಪೊಂದು ಅಪ್ಪು ಫೋಟೋ ಹಿಡಿದು ಘೋಷಣೆ ಕೂಗುತ್ತಾ, ನೆಚ್ಚಿನ ನಟನಿಗೆ ಸದ್ಗತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಪಾಗಡದಿನ್ನಿ ಗ್ರಾಮದ 13 ಯುವಕರು ಪುನೀತ್​ ರಾಜ್‌ಕುಮಾರ್​ ಫೋಟೋ ಹಿಡಿದುಕೊಂಡು ಶ್ರೀಶೈಲಕ್ಕೆ ಪಾದಯಾತ್ರೆ ಮಾಡುತ್ತಿದ್ದಾರೆ. ಈ ಗುಂಪು ಆಂಧ್ರಪ್ರದೇಶದ ಕೊಡುಮೂರು ನಗರದಲ್ಲಿ ಹಾದು ಹೋಗುತ್ತಿರುವಾಗ ಮಾಧ್ಯಮಗಳ ಕಣ್ಣಿಗೆ ಬಿದ್ದಿದೆ.

ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಪಾದಯಾತ್ರಿಗಳು, ನಾವು ನಟ ಪುನೀತ್​ ರಾಜ್‌ಕುಮಾರ್​ ಅವರ ಅಪ್ಪಟ ಅಭಿಮಾನಿಗಳು. ಅಪ್ಪು ಅವರ ಆತ್ಮಕ್ಕೆ ಶಾಂತಿ ಸಿಗಬೇಕು ಎಂದು ಶ್ರೀಶೈಲಕ್ಕೆ ಪಾದಯಾತ್ರೆ ಮಾಡುತ್ತಿದ್ದೇವೆ. 4 ದಿನಗಳಿಂದ ಈ ಯಾತ್ರೆ ಮುಂದುವರಿದಿದೆ. ಶ್ರೀಶೈಲಕ್ಕೆ ತಲುಪಿದ ಬಳಿಕ ಅಪ್ಪು ಹೆಸರಲ್ಲಿ ಪೂಜೆ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

ರಾಯಚೂರು ಜಿಲ್ಲೆಯ ಈ ಪಾದಯಾತ್ರಿಗಳ ಗುಂಪು ಈವರೆಗೂ 200 ಕಿಮೀ ನಡೆದುಕೊಂಡು ಬಂದಿದ್ದಾರೆ.

ಇದನ್ನೂ ಓದಿ: ಹಿಜಾಬ್ ತೀರ್ಪು ವಿರೋಧಿಸಿ ಪರೀಕ್ಷೆ ಬಹಿಷ್ಕಾರ: ಮರು ಪರೀಕ್ಷೆ ಸಾಧ್ಯವಿಲ್ಲ- ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.