ನವದೆಹಲಿ: ಮೇ 3ರಂದು ಅಕ್ಷಯ ತೃತೀಯವನ್ನು ಆಚರಿಸಲಾಗುತ್ತಿದ್ದು, ಈ ದಿನದಂದು ಚಿನ್ನ ಖರೀದಿಯಿಂದ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ಸಂಪ್ರದಾಯದ ಪ್ರಕಾರ, ಈ ದಿನ ಚಿನ್ನ ಖರೀದಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಮುಂದೆ ಮದುವೆ ಆಗಲಿರುವ ಮನೆಯವರು ಮುಂಚಿತವಾಗಿ ಈ ದಿನವೇ ಚಿನ್ನ ಖರೀದಿಸುವ ಸಂಪ್ರದಾಯ ಮುಂದುವರಿದುಕೊಂಡು ಬಂದಿದೆ. ಹಾಗಾಗಿ ಅಕ್ಷಯ ತೃತೀಯದಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆ ಸಾಮಾನ್ಯವಾಗಿರುತ್ತದೆ.
ಆದರೆ, ಈ ಬಾರಿ ಅಕ್ಷಯ ತೃತೀಯ ಸಂದರ್ಭದಲ್ಲಿ ದೇಶದ ಪ್ರಮುಖ ಆಭರಣ ಬ್ರ್ಯಾಂಡ್‌ಗಳು ರಿಯಾಯಿತಿ, ಉಡುಗೊರೆ ಮತ್ತು ಕ್ಯಾಶ್‌ಬ್ಯಾಕ್‌ಗಳನ್ನು ನೀಡುತ್ತಿವೆ. ಇದಲ್ಲದೆ, ದೊಡ್ಡ ಬ್ರ್ಯಾಂಡ್‌ಗಳು ಮೇಕಿಂಗ್ ಚಾರ್ಜ್‌ಗಳಲ್ಲಿ ಶೇಕಡಾ 50 ರಷ್ಟು ರಿಯಾಯಿತಿ ನೀಡುತ್ತಿವೆ. ಏಪ್ರಿಲ್ 30 ರಂದು ಪ್ರತಿ ಹತ್ತು ಗ್ರಾಂಗೆ 24 ಕ್ಯಾರೆಟ್ ಚಿನ್ನದ ಬೆಲೆ 52,960 ರೂ., 22 ಕ್ಯಾರೆಟ್ ಚಿನ್ನದ ಬೆಲೆ ಹತ್ತು ಗ್ರಾಂಗೆ 48,550 ರೂ. ಇದೆ.
ತಜ್ಞರ ಪ್ರಕಾರ ಅಕ್ಷಯ ತೃತೀಯ ತನಕ ಚಿನ್ನದ ದರ ಈ ದರಗಳ ಸುತ್ತಲೇ ಏರಿಳಿಕೆಯಾಗುತ್ತಿರುತ್ತದೆ. ಮದುವೆ ಸೀಸನ್ ಆರಂಭವಾಗಿರುವುದರಿಂದ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಕಡಿಮೆ. ಇದಲ್ಲದೇ ಷೇರುಪೇಟೆಯಲ್ಲಿನ ಏರಿಳಿತದಿಂದ ಜನರು ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದು, ಅದರ ಪರಿಣಾಮ ಚಿನ್ನದ ಬೆಲೆಯ ಮೇಲೂ ಬೀರಲಿದೆ.
ಆಭರಣ ಕಂಪನಿಗಳ ವಿಶೇಷ ಕೊಡುಗೆಗಳು: ತನಿಷ್ಕ್ ಬ್ರ್ಯಾಂಡ್ ಮೇಕಿಂಗ್ ಶುಲ್ಕಗಳಲ್ಲಿ 20% ರಿಯಾಯಿತಿಯನ್ನು ನೀಡುತ್ತಿದೆ. ಈ ಕೊಡುಗೆಯು ಮೇ 4 ರವರೆಗೆ ಇರುತ್ತದೆ. ಆನ್‌ಲೈನ್ ಜ್ಯುವೆಲ್ಲರಿ ರಿಟೈಲರ್ ಕ್ಯಾರಟ್‌ಲೇನ್ ವಜ್ರದ ಆಭರಣಗಳ ಮೇಲೆ 20% ವರೆಗೆ ರಿಯಾಯಿತಿಯನ್ನು ನೀಡುತ್ತಿದೆ. ಮಲಬಾರ್ ಗೋಲ್ಡ್ 25,000 ರೂ.ಗಿಂತ ಹೆಚ್ಚಿನ ಖರೀದಿಗೆ ಉಚಿತ ಚಿನ್ನದ ನಾಣ್ಯವನ್ನು ನೀಡುತ್ತಿದೆ.
ಕ್ರೆಡಿಟ್ ಕಾರ್ಡ್ ಖರೀದಿಯ ಮೇಲೆ 5% ರಿಯಾಯಿತಿಯನ್ನು ಸಹ ನೀಡಲಾಗುತ್ತದೆ. ಪಿಸಿ ಜ್ಯುವೆಲರ್ಸ್ ಬೆಳ್ಳಿ ಆಭರಣಗಳ ತಯಾರಿಕೆಯಲ್ಲಿ ಶೇಕಡಾ 40 ರಷ್ಟು ರಿಯಾಯಿತಿಯನ್ನು ಘೋಷಿಸಿದೆ. ಕಂಪನಿಯು ವಜ್ರದ ಆಭರಣಗಳ ಮೇಲೆ ಶೇಕಡಾ 30 ರಷ್ಟು ರಿಯಾಯಿತಿಯನ್ನು ನೀಡುತ್ತಿದೆ. ಸೆಂಕೋ ಗೋಲ್ಡ್ ಪ್ರತಿ ಗ್ರಾಂ ಚಿನ್ನದ ಮೇಲೆ 224 ರೂ.ಗಳ ರಿಯಾಯಿತಿಯನ್ನು ಘೋಷಿಸಿದ್ದು, ಮೇಕಿಂಗ್ ಚಾರ್ಜ್‌ಗಳಲ್ಲಿ ಶೇಕಡಾ 50 ರಷ್ಟು ರಿಯಾಯಿತಿಯನ್ನು ನೀಡುತ್ತಿದೆ.
ಮೇಕಿಂಗ್ ಚಾರ್ಜ್‌ನಲ್ಲಿ ರಿಯಾಯಿತಿ: ಕಲ್ಯಾಣ್ ಜ್ಯುವೆಲರ್ಸ್ ಚಿನ್ನಾಭರಣ ಖರೀದಿಯ ಮೇಕಿಂಗ್ ಚಾರ್ಜ್‌ಗಳಲ್ಲಿ 60% ವರೆಗೆ ರಿಯಾಯಿತಿ ನೀಡುತ್ತಿದೆ. ಜೋಯಾಲುಕ್ಕಾಸ್ನಿಂದ ಅಕ್ಷಯ ತೃತೀಯ ದಿನದಂದು 50 ಸಾವಿರದ ವಜ್ರಾಭರಣ ಖರೀದಿಸಿದರೆ ಒಂದು ಗ್ರಾಂ ಚಿನ್ನ ಉಚಿತವಾಗಿ ದೊರೆಯಲಿದೆ. ಖಿಮ್ಜಿ ಜ್ಯುವೆಲರ್ಸ್ ದಿ ಗ್ರೇಟ್ ಅಕ್ಷಯ ತೃತೀಯ ಮಾರಾಟವನ್ನು ಪ್ರಾರಂಭಿಸಿದೆ. ಕಂಪನಿಯು ಚಿನ್ನದ ಆಭರಣಗಳ ಒಟ್ಟು ಮೌಲ್ಯದ ಮೇಲೆ ಶೇಕಡಾ 5.4 ರಷ್ಟು ರಿಯಾಯಿತಿಯನ್ನು ಘೋಷಿಸಿದೆ.
ವಜ್ರದ ಆಭರಣಗಳ ಮೇಲೆ ಫ್ಲಾಟ್ 20% ರಿಯಾಯಿತಿ ಮತ್ತು ಬೆಳ್ಳಿ ವಸ್ತುಗಳ ಮೇಕಿಂಗ್ ಶುಲ್ಕದ ಮೇಲೆ 30% ರಿಯಾಯಿತಿ. ಈ ಆಫರ್ ಮೇ 8 ರಂದು ಕೊನೆಗೊಳ್ಳುತ್ತದೆ. TBZ ಚಿನ್ನಾಭರಣ ಮಳಿಗೆ ಈ ಅಕ್ಷಯ ತೃತೀಯದಲ್ಲಿ ಚಿನ್ನ ಮತ್ತು ವಜ್ರದ ಆಭರಣಗಳ ಮೇಕಿಂಗ್ ಶುಲ್ಕದ ಮೇಲೆ 50% ವರೆಗೆ ರಿಯಾಯಿತಿಯನ್ನು ನೀಡುತ್ತಿದೆ. ಕಂಪನಿಯು ಹಳೆಯ ಚಿನ್ನದ ವಿನಿಮಯದ ಮೇಲೆ 100% ಲಾಭವನ್ನು ನೀಡುತ್ತಿದೆ. ಈ ಕೊಡುಗೆಯು ಮೇ 3 ರವರೆಗೆ ಮಾನ್ಯವಾಗಿರುತ್ತದೆ.
ಇದಲ್ಲದೆ, ಡಿಜಿಟಲ್ ಪಾವತಿ ಕಂಪನಿ ಫೋನ್‌ಪೇ 24 ಕ್ಯಾರೆಟ್ ಚಿನ್ನದ ಖರೀದಿಯ ಮೇಲೆ ಕ್ಯಾಶ್‌ಬ್ಯಾಕ್ ಕೊಡುಗೆಯನ್ನು ಸಹ ಘೋಷಿಸಿದೆ. PhonePe ಚಿನ್ನದ ನಾಣ್ಯಗಳು ಮತ್ತು ಬಾರ್‌ಗಳ ಖರೀದಿಯ ಮೇಲೆ ರೂ.2,500 ವರೆಗೆ ಕ್ಯಾಶ್‌ಬ್ಯಾಕ್ ನೀಡುತ್ತಿದೆ. ಕಂಪನಿಯು ಬೆಳ್ಳಿ ನಾಣ್ಯಗಳು ಅಥವಾ ಬಾರ್‌ಗಳನ್ನು ಖರೀದಿಸುವವರಿಗೆ ರೂ 250 ವರೆಗೆ ಕ್ಯಾಶ್‌ಬ್ಯಾಕ್ ನೀಡುತ್ತಿದೆ.
ಇದನ್ನೂ ಓದಿ: ಚಿನ್ನ, ಬೆಳ್ಳಿ ದರ: ರಾಜ್ಯದ ಯಾವ ನಗರದಲ್ಲಿ ಎಷ್ಟು?