ಹೈದರಾಬಾದ್(ತೆಲಂಗಾಣ): ಮುತ್ತಿನ ನಗರಿ ಹೈದರಾಬಾದ್ನಲ್ಲಿ ನಿನ್ನೆ ರಾತ್ರಿ ಸುರಿದ ರಣಭೀಕರ ಮಳೆಗೆ ಎಲ್ಲವೂ ಅಲ್ಲೋಲ - ಕಲ್ಲೋಲವಾಗಿದ್ದು, ನೂರಾರು ಜನರು ಇನ್ನಿಲ್ಲದ ಸಮಸ್ಯೆಗೊಳಗಾಗಿದ್ದು, ಅನೇಕ ವಾಹನ ನೀರಿನ ರಭಸಕ್ಕೆ ತೇಲಿ ಹೋಗಿವೆ.
ಮಳೆಯಿಂದಾಗಿ ತೆಲಂಗಾಣದ ಬಹುತೇಕ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಅನೇಕ ಮನೆ, ಕಟ್ಟಡಗಳಲ್ಲಿ ನೀರು ನುಗ್ಗಿದೆ. ಮ್ಯಾನ್ ಹೋಲ್, ಚರಂಡಿಗಳು ತುಂಬಿ ಹರಿದ ಕಾರಣ ಅನೇಕ ರೆಸ್ಟೋರೆಂಟ್ಗಳಲ್ಲಿ ನೀರು ನುಗ್ಗಿ, ಇನ್ನಿಲ್ಲದ ಅನಾಹುತಕ್ಕೆ ಕಾರಣವಾಗಿದೆ. ರಸ್ತೆಗಳು ಸಂಪೂರ್ಣವಾಗಿ ನೀರು ತುಂಬಿಕೊಂಡ ಕಾರಣ ಸಂಚಾರ ಅಸ್ತವ್ಯಸ್ತವಾಯಿತು.
-
#WATCH | Telangana: Lanes, roads submerged following incessant rainfall in Hyderabad. Visuals from the Old city. (08.10) pic.twitter.com/5XCGtsmIwt
— ANI (@ANI) October 8, 2021 " class="align-text-top noRightClick twitterSection" data="
">#WATCH | Telangana: Lanes, roads submerged following incessant rainfall in Hyderabad. Visuals from the Old city. (08.10) pic.twitter.com/5XCGtsmIwt
— ANI (@ANI) October 8, 2021#WATCH | Telangana: Lanes, roads submerged following incessant rainfall in Hyderabad. Visuals from the Old city. (08.10) pic.twitter.com/5XCGtsmIwt
— ANI (@ANI) October 8, 2021
ಇದನ್ನೂ ಓದಿರಿ: ಡ್ರಗ್ಸ್ ಕೇಸ್ನಲ್ಲಿ ಪುತ್ರ ಆರ್ಯನ್ ಬಂಧನ.. ಶಾರುಖ್ ಖಾನ್ ಜಾಹೀರಾತು ಸ್ಥಗಿತಗೊಳಿಸಿದ ಕಂಪನಿ
ಹೈದರಾಬಾದ್- ಬೆಂಗಳೂರು ಹೆದ್ದಾರಿಯಲ್ಲಿ ನೂತನವಾಗಿ ನಿರ್ಮಾಣ ಮಾಡಿದ್ದ ಸೇತುವೆ ಮೇಲೆ ಲಾರಿ ಬಿದ್ದ ಕಾರಣ, ಸಂಚಾರದಲ್ಲಿ ಕೆಲಹೊತ್ತು ತೊಂದರೆಯಾಯಿತು. ಹೀಗಾಗಿ ಸುಮಾರು 3 ಕಿಲೋ ಮೀಟರ್ ದೂರ ವಾಹನಗಳು ನಿಲ್ಲುವಂತಾಯಿತು.
ಪ್ರಮುಖವಾಗಿ ಹಯತ್ನಗರ, ವನಸ್ಥಲಿಪುರಂ, ಎಲ್ಬಿ ನಗರ, ಮನ್ಸುರಾಬಾದ್, ನಾಗೋಲ್, ಮೀರಪೇಟ್ ಸೇರಿದಂತೆ ಅನೇಕ ಕಡೆ ಅನಾಹುತಗಳು ಸಂಭವಿಸಿವೆ. ರೆಸ್ಟೋರೆಂಟ್ವೊಂದರಲ್ಲಿ ಮಳೆ ನೀರು ನುಗ್ಗಿದ ಕಾರಣ, ಗ್ರಾಹಕರು ಕೆಲಹೊತ್ತು ತೊಂದರೆ ಅನುಭವಿಸಿದ್ದರು.