ಔರಂಗಾಬಾದ್(ಮಹಾರಾಷ್ಟ್ರ): ನೈರುತ್ಯ ಮುಂಗಾರು ದೇಶದ ಹಲವು ರಾಜ್ಯಗಳಲ್ಲಿ ಚುರುಕಾಗಿದೆ. ದಕ್ಷಿಣದ ಹಲವು ರಾಜ್ಯಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.
ಈಗಾಗಲೇ ಮಹಾರಾಷ್ಟ್ರದ ಔರಂಗಾಬಾದ್ನಲ್ಲಿ ಮಳೆಯ ಆರ್ಭಟ ಆರಂಭವಾಗಿದ್ದು, ನಗರದ ಹಲವು ಪ್ರದೇಶಗಳು ಮುಳುಗಡೆಯಾಗಿವೆ. ಜನಜೀವನ ಅಸ್ತವ್ಯಸ್ತಗೊಂಡಿದ್ದು, ಕೆಲವು ಮನೆಗಳಿಗೂ ನೀರು ನುಗ್ಗಿದೆ. ಸಾಕು ಪ್ರಾಣಿಗಳು ಮತ್ತು ಅಗತ್ಯವಸ್ತುಗಳೊಂದಿಗೆ ಜನರು ಬೇರೆಡೆಗೆ ಸ್ಥಳಾಂತರವಾಗುತ್ತಿರುವ ದೃಶ್ಯಗಳು ಕಂಡುಬಂದಿವೆ.
ಇನ್ನು ದಕ್ಷಿಣ ಭಾರತ ಮಾತ್ರವಲ್ಲದೇ ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ, ಪಶ್ಚಿಮ ಭಾರತದ ದಕ್ಷಿಣ ಒಡಿಶಾ, ತೆಲಂಗಾಣ, ವಿದರ್ಭ ಹಾಗೂ ಛತ್ತೀಸ್‌ಗಡದಲ್ಲೂ ಮಳೆಯ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮನೆದೇವರ ಜಾತ್ರೆಗೆ ಹೊರಟವರ ಕ್ರೂಸರ್ಗೆ ಬಸ್ ಡಿಕ್ಕಿ: ಬಾಲಕ ಸಾವು, ಐವರಿಗೆ ಗಾಯ