ಚೆನ್ನೈ(ತಮಿಳುನಾಡು): ನೈಋತ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ತಮಿಳುನಾಡಿನ ಹಲವು ಪ್ರದೇಶಗಳಲ್ಲಿ ಭಾರೀ ಅಕಾಲಿಕ ಮಳೆ ಸುರಿಯುತ್ತಿದೆ. ಹೀಗಾಗಿ ಮೈಲಾಡುತುರೈ ನಾಗಪಟ್ಟಣಂ ಜಿಲ್ಲೆಗಳಲ್ಲಿ ಶಾಲಾ- ಕಾಲೇಜುಗಳಿಗೆ ಜಿಲ್ಲಾಧಿಕಾರಿಗಳು ರಜೆ ಘೋಷಿಸಿದ್ದಾರೆ.
ಶ್ರೀಲಂಕಾದ ಕರಾವಳಿಯಿಂದ 80 ಕಿಮೀ ದೂರ ಕಾರೈಕಲ್ನಿಂದ 400 ಕಿಮೀ ದೂರದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಟ್ವೀಟ್ ಮಾಡಿ, ಬಂಗಾಳಕೊಲ್ಲಿಯಲ್ಲಿ ವಾಯುಕುಸಿತ ಉಂಟಾಗಿದ್ದು, ತಮಿಳುನಾಡಿನಲ್ಲಿ ಮಳೆಯಾಗುವ ಮುನ್ಸೂಚನೆ ನೀಡಿತ್ತು.
-
Depression over Southwest BoB lay centered at 2330 IST about 60 km Noetheast of Batticaloa (Sri Lanka) and 400 km Southeast of Karaikal (India). Very likely to move nearly west-southwest and cross Sri Lanka coast between Batticaloa and Trincomalee around early morning of 02 Feb pic.twitter.com/qhb6jJ6T0q
— India Meteorological Department (@Indiametdept) February 1, 2023 " class="align-text-top noRightClick twitterSection" data="
">Depression over Southwest BoB lay centered at 2330 IST about 60 km Noetheast of Batticaloa (Sri Lanka) and 400 km Southeast of Karaikal (India). Very likely to move nearly west-southwest and cross Sri Lanka coast between Batticaloa and Trincomalee around early morning of 02 Feb pic.twitter.com/qhb6jJ6T0q
— India Meteorological Department (@Indiametdept) February 1, 2023Depression over Southwest BoB lay centered at 2330 IST about 60 km Noetheast of Batticaloa (Sri Lanka) and 400 km Southeast of Karaikal (India). Very likely to move nearly west-southwest and cross Sri Lanka coast between Batticaloa and Trincomalee around early morning of 02 Feb pic.twitter.com/qhb6jJ6T0q
— India Meteorological Department (@Indiametdept) February 1, 2023
ತಿರುವರೂರು ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಜಿಲ್ಲೆಯ ಶಾಲೆಗಳಿಗೆ ಜಿಲ್ಲಾಧಿಕಾರಿಗಳು ರಜೆ ಘೋಷಿಸಿದ್ದಾರೆ. ತಮಿಳುನಾಡು ಮತ್ತು ಪುದುಚೇರಿಯ ಕರಾವಳಿ ಪ್ರದೇಶಗಳಲ್ಲಿ ಹೆಚ್ಚಿನ ವೇಗದ ಬಿರುಗಾಳಿ ಬೀಸುತ್ತಿದೆ. ಹೆಚ್ಚಿನ ಗಾಳಿ ಬೀಸುವ ಸಾಧ್ಯತೆಯಿರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಫೆಬ್ರವರಿ 2 ರವರೆಗೆ ನೈಋತ್ಯ ಬಂಗಾಳಕೊಲ್ಲಿ, ಕ್ಯಾಮೊರಿನ್ ಪ್ರದೇಶ, ಮನ್ನಾರ್ ಕೊಲ್ಲಿ ಮತ್ತು ಕರಿಯಕ್ಕಲ್ ಕರಾವಳಿಯಲ್ಲಿ ಸಮುದ್ರವು ಪ್ರಕ್ಷುಬ್ಧವಾಗಿರುತ್ತದೆ ಎಂದು IMD ಮುನ್ಸೂಚನೆ ನೀಡಿದೆ. ಬಂಗಾಳಕೊಲ್ಲಿಯಲ್ಲಿನ ಹವಾಮಾನ ಬದಲಾವಣೆಯು ಈ ಪ್ರದೇಶದಲ್ಲಿ ಅತಿ ಹೆಚ್ಚು ಚಂಡಮಾರುತಗಳಿಗೆ ಕಾರಣವಾಗಿದೆ.
-
#WATCH | Due to the Depression formed over the southwest Bay of Bengal, heavy rain lashes several parts of the Nagapattinam district, Tamil Nadu
— ANI (@ANI) February 2, 2023 " class="align-text-top noRightClick twitterSection" data="
Schools and colleges in Nagapattinam, Mayiladuthurai districts closed for today in view of rainfall. pic.twitter.com/JivGL47DH4
">#WATCH | Due to the Depression formed over the southwest Bay of Bengal, heavy rain lashes several parts of the Nagapattinam district, Tamil Nadu
— ANI (@ANI) February 2, 2023
Schools and colleges in Nagapattinam, Mayiladuthurai districts closed for today in view of rainfall. pic.twitter.com/JivGL47DH4#WATCH | Due to the Depression formed over the southwest Bay of Bengal, heavy rain lashes several parts of the Nagapattinam district, Tamil Nadu
— ANI (@ANI) February 2, 2023
Schools and colleges in Nagapattinam, Mayiladuthurai districts closed for today in view of rainfall. pic.twitter.com/JivGL47DH4
ಮಳೆಯಿಂದ ಬೆಳೆಗಳಿಗೆ ಹಾನಿ: ಇನ್ನು, ಅಕಾಲಿಕ ಮಳೆಯಿಂದಾಗಿ ಕಟಾವಿಗೆ ಬಂದಿದ್ದ ಬೆಳೆಗಳು ಹಾನಿಗೀಡಾಗಿವೆ. ವಾಯುಭಾರ ಕುಸಿತ ಉಂಟಾಗಿ ವರುಣ ಆರ್ಭಟ ತೋರಿಸುತ್ತಿರುವ ಕಾರಣ ರೈತರು ನಷ್ಟಕ್ಕೀಡಾಗುವಂತೆ ಮಾಡಿದೆ. ಈಗಾಗಲೇ ಮುಂಗಾರಿನಲ್ಲಿ ಅಧಿಕ ಮಳೆಯಿಂದಾಗಿ ಬೆಳೆ ಹಾನಿಗೀಡಾಗಿದ್ದ ರೈತರಿಗೆ ಈಗ ಸುರಿಯುತ್ತಿರುವ ವರುಣ ಮತ್ತೊಂದು ಆಘಾತ ನೀಡಿದಂತಾಗಿದೆ.
ಓದಿ: ಈ ಏರಿಯಾ ನಂದೇ ಎನ್ನುತ್ತಿರುವ 17 ಮರಿಗಳ ತಾಯಿ.. ತಡೋಬಾ ಅರಣ್ಯಕ್ಕೆ ಹೆಣ್ಣು ಹುಲಿ ಜುನಾಬಾಯಿಯೇ ರಾಣಿ!