ETV Bharat / bharat

ಮುತ್ತಿನನಗರಿಯಲ್ಲಿ ವರುಣಾರ್ಭಟ: ಕೊಚ್ಚಿ ಹೋದ ಇಬ್ಬರಿಗೆ ಹುಡುಕಾಟ

ಭಾರಿ ಮಳೆಗೆ ತೆಲಂಗಾಣದ ಹೈದರಾಬಾದ್ ತತ್ತರಿಸಿದೆ. ಇಬ್ಬರು ಮಳೆ ನೀರಲ್ಲಿ ಕೊಚ್ಚಿ ಹೋಗಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Heavy rain in Hyderabad city
ಹೈದರಾಬಾದ್​ನಲ್ಲಿ ವರುಣಾರ್ಭಟ: ಕೊಚ್ಚಿ ಹೋದ ಇಬ್ಬರಿಗೆ ಹುಡುಕಾಟ
author img

By

Published : Oct 9, 2021, 10:23 AM IST

Updated : Oct 9, 2021, 3:04 PM IST

ಹೈದರಾಬಾದ್(ತೆಲಂಗಾಣ): ವರುಣಾರ್ಭಟ ತೆಲಂಗಾಣದ ಹೈದರಾಬಾದ್​ನಲ್ಲಿ ಅವಾಂತರ ಸೃಷ್ಟಿಸಿದೆ. ಸುಮಾರು ಮೂರು ಗಂಟೆಗಳ ಕಾಲ ಸುರಿದ ಭಾರಿ ಮಳೆಗೆ ರಸ್ತೆಗಳು ಕೆರೆಯಂತಾಗಿ, ವಾಹನ ಸವಾರರು ಪರದಾಡುವಂತಾಗಿತ್ತು.

ಹೈದರಾಬಾದ್ ಮಾತ್ರವಲ್ಲದೇ ಮೇಡ್ಚಲ್-ಮಲ್ಕಜ್​ಗಿರಿ ಮತ್ತು ರಂಗಾರೆಡ್ಡಿ ಜಿಲ್ಲೆಗಳಲ್ಲೂ ಮಳೆ ನೀರು ಮನೆಗಳಿಗೆ ನುಗ್ಗಿದೆ. ಮಳೆ ನೀರಿನ ಪ್ರವಾಹಕ್ಕೆ ಸಿಲುಕಿ ಇಬ್ಬರು ಕೊಚ್ಚಿ ಹೋಗಿದ್ದಾರೆ. ಅವರ ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹೈದರಾಬಾದ್​ನಲ್ಲಿ ಮಳೆ ಅವಾಂತರ

ದಸರಾ ಹಿನ್ನೆಲೆಯಲ್ಲಿ ಮನೆಗಳಿಗೆ ತೆರಳುತ್ತಿದ್ದವರಿಗೆ ಕೂಡಾ ಮಳೆಯಿಂದ ತೊಂದರೆಯಾಗಿದೆ. ಚಂದ್ರಾಯನಗುಟ್ಟ ಪ್ರದೇಶದಲ್ಲಿ ಅಪೆ ಆಟೋ, ಬೈಕ್​ ಮಳೆ ನೀರಿನಲ್ಲಿ ಕೊಚ್ಚಿ ಹೋಗಿವೆ.

ಬೆಂಗಳೂರು ಮತ್ತು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲೂ ನೀರು ಆವರಿಸಿದ ಕಾರಣದಿಂದಾಗಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕೆಲವು ಗಂಟೆಗಳ ನಂತರ ಸಂಚಾರ ತೆರವುಗೊಂಡಿದೆ.

ಇದನ್ನೂ ಓದಿ: ಸರ್ವರ್ ​ಡೌನ್​ಗೆ ಕ್ಷಮೆಯಾಚಿದ ಫೇಸ್​​ಬುಕ್: ಸಮಸ್ಯೆ ಪರಿಹರಿಸಿರುವುದಾಗಿ ಸ್ಪಷ್ಟನೆ

Last Updated : Oct 9, 2021, 3:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.