ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮುಂಜಾನೆಯಿಂದಲೇ ಧಾರಾಕಾರ ಮಳೆ ಸುರಿಯುತ್ತಿದೆ. ಹಲವು ಪ್ರದೇಶಗಳು ಜಲಾವೃತವಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.
ಯಮುನಾ ಬಜಾರ್‌ನಿಂದ ಸಂಚರಿಸುತ್ತಿರುವ ವಾಹನಗಳು ಭಾರಿ ಮಳೆಯಿಂದ ತೊಂದರೆ ಅನುಭವಿಸುತ್ತಿವೆ. ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ದೆಹಲಿ ಮತ್ತು ಎನ್‌ಸಿಆರ್‌ನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 2 ಗಂಟೆಗಳ ಕಾಲ ಸಾಧಾರಣ ಗುಡುಗು ಸಹಿತ ಮಳೆ ಸುರಿಯಲಿದೆ ಎಂದು ತಿಳಿಸಿದೆ.
ಇನ್ನು, ಕರ್ನಾಲ್, ಗೋಹಾನಾ, ಗನ್ನೌರ್, ಸೋನಿಪತ್, ರೋಹ್ಟಕ್, ಚಾರ್ಖಿ ದಾದ್ರಿ, ಜಜ್ಜರ್, ಕೊಸಾಲಿ, ಫರುಖ್‌ನಗರ, ಬಾವಲ್, ರೇವಾರಿ, ನುಹ್, ಸೋಹಾನಾ, ಹೊಡಾಲ್, ಔರಂಗಾಬಾದ್, ಪಲ್ವಾಲ್ (ಹರಿಯಾಣ) ಮುಜಾಫರ್‌ನಗರ, ಶಾಮ್ಲಿ, ಬಾರತ್, ಬಾಗಪತ್ ಬಿಜಾನಾಪುರ ಖತೌಲಿ, ಸಕೋಟಿ ತಾಂಡಾ, ಮೀರತ್, ಮೋದಿನಗರ, ರಾಂಪುರ್, ಮೊರಾದಾಬಾದ್, ಬಿಲ್ಲಾರಿ, ಸಂಭಾಲ್, ಅಮ್ರೋಹಾ, ಗರ್ಮುಕ್ತೇಶ್ವರ, ಸಿಯಾನ, ಹಾಪುರ್, ಪಿಲಖುವಾ, ಬಹಜೋಯ್, ಅನುಪ್‌ಶಹರ್, ಜಹಾಂಗೀರಾಬಾದ್,ಶಿಕರ್‌ಪುರ್, ಬುಲಂದಶರ್, ಖೂರ್ಜಾದಲ್ಲಿ ಗುಡುಗು ಬಿರುಗಾಳಿ ಸಹಿತ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಟ್ವೀಟ್ ಮಾಡಿದೆ.
ದೆಹಲಿಯ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ (AQI) 48ರಂತೆ ವರದಿಯಾಗಿದೆ. ಸರ್ಕಾರಿ ಏಜೆನ್ಸಿಗಳ ಪ್ರಕಾರ, 0-50 ಶ್ರೇಣಿಯ AQI 'ಒಳ್ಳೆಯದು' ಎಂದು ಪರಿಗಣಿಸಲಾಗುತ್ತದೆ. 51-100 'ತೃಪ್ತಿದಾಯಕ', 101- 200 'ಮಧ್ಯಮ', 201-300 'ಕಳಪೆ', 301-400 'ಅತ್ಯಂತ ಕಳಪೆ' ಮತ್ತು 401-500 ಅನ್ನು 'ತೀವ್ರ' ಎಂದು ಪರಿಗಣಿಸಲಾಗುತ್ತದೆ.