ಹೈದರಾಬಾದ್(ತೆಲಂಗಾಣ): ತೆಲಂಗಾಣದಲ್ಲಿ ನಿನ್ನೆ ಸುರಿದ ಭಾರಿ ಮಳೆಗೆ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದ್ದು, ರಸ್ತೆಗಳೆಲ್ಲವೂ ಕೆರೆಯಂತಾಗಿ ತುಂಬಿ ಹರಿದಿವೆ. ಇದರಿಂದ ವಾಹನ ಸವಾರರು ತೊಂದರೆಗೊಳಗಾಗಿದ್ದಾರೆ. ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗಿರುವ ಕಾರಣ ಇನ್ನಿಲ್ಲದ ಸಮಸ್ಯೆ ಎದುರಾಗಿದೆ.
ಹೈದರಾಬಾದ್ನ ದಿಲ್ಸುಖ್ನಗರದಲ್ಲಿರುವ ಶಿವಗಂಗಾ ಥಿಯೇಟರ್ನಲ್ಲಿ ಏಕಾಏಕಿ ಮಳೆ ನೀರು ನುಗ್ಗಿರುವ ಕಾರಣ ಸಿನಿಪ್ರಿಯರು ತೊಂದರೆಗೊಳಗಾದ ಘಟನೆ ನಡೆದಿದೆ. ಚಿತ್ರ ವೀಕ್ಷಣೆ ಮಾಡ್ತಿದ್ದ ವೇಳೆ ಮಳೆ ನೀರು ಏಕಾಏಕಿ ಚಿತ್ರಮಂದಿರದೊಳಗೆ ನುಗ್ಗಿದೆ. ಈ ವೇಳೆ ಚಿತ್ರಮಂದಿರದ ಕಾಂಪೌಂಡ್ ಗೋಡೆ ಕುಸಿದು ಬಿದ್ದಿರುವ ಪರಿಣಾಮ ಅನೇಕರ ವಾಹನ ಸಂಪೂರ್ಣವಾಗಿ ಜಖಂಗೊಂಡಿವೆ.
-
#WATCH | Telangana: Roads waterlogged in parts of Hyderabad following heavy rainfall in the city pic.twitter.com/cw0RvcQxEw
— ANI (@ANI) October 9, 2021 " class="align-text-top noRightClick twitterSection" data="
">#WATCH | Telangana: Roads waterlogged in parts of Hyderabad following heavy rainfall in the city pic.twitter.com/cw0RvcQxEw
— ANI (@ANI) October 9, 2021#WATCH | Telangana: Roads waterlogged in parts of Hyderabad following heavy rainfall in the city pic.twitter.com/cw0RvcQxEw
— ANI (@ANI) October 9, 2021
ತೆಲಂಗಾಣದ ವಿವಿಧ ಪ್ರದೇಶಗಳಲ್ಲಿ ಇಂದು ಕೂಡ ಮಳೆಯಾಗಿದ್ದು, ಜನರು ತೊಂದರೆ ಅನುಭವಿಸುವಂತಾಯಿತು.
ಇದನ್ನೂ ಓದಿರಿ: Watch... ರಣಭೀಕರ ಮಳೆಗೆ ಮುತ್ತಿನ ನಗರಿ ತತ್ತರ.. ಹೋಟೆಲ್, ಪ್ರಮುಖ ಸ್ಥಳಗಳಿಗೂ ನುಗ್ಗಿದ ನೀರು!
ಸಿನಿಮಾ ನೋಡಿ ಹೊರಬಂದಿರುವ ಪ್ರೇಕ್ಷಕರಿಗೆ ವಾಹನಗಳು ಜಖಂಗೊಂಡಿರುವುದನ್ನ ನೋಡಿ ಏಕಾಏಕಿ ಆಘಾತಕ್ಕೊಳಗಾಗಿದ್ದಾರೆ. ಇದೀಗ ಚಿತ್ರಮಂದಿರದ ಆಡಳಿತ ಮಂಡಳಿ ಇವುಗಳ ರಿಪೇರಿ ಮಾಡಿಕೊಡುವುದಾಗಿ ತಿಳಿಸಿದೆ. ಘಟನೆಯಲ್ಲಿ ಸುಮಾರು 50ಕ್ಕೂ ಅಧಿಕ ಬೈಕ್ ಜಖಂಗೊಂಡಿವೆ.