ನವದೆಹಲಿ: ಪೂರ್ವ ಲಡಾಖ್ನ ಗಡಿಯಲ್ಲಿ ಚೀನಾ ಕ್ಷಿಪಣಿಗಳನ್ನು ಹಾಗೂ ರಾಡಾರ್ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನಿಯೋಜಿಸುತ್ತಿದೆ ಎಂದು ಏರ್ ಚೀಫ್ ಮಾರ್ಷಲ್ ಆರ್ಕೆಎಸ್ ಬದೌರಿಯಾ ಮಂಗಳವಾರ ಮಾಹಿತಿ ನೀಡಿದ್ದಾರೆ.
ನವದೆಹಲಿಯ ವಿವೇಕಾನಂದ ಇಂಟರ್ನ್ಯಾಷನಲ್ ಫೌಂಡೇಶನ್ ಆಯೋಜಿಸಿದ್ದ 'ರಾಷ್ಟ್ರದ ಭದ್ರತೆಗೆ ಸವಾಲುಗಳು ಮತ್ತು ವಾಯುಸೇನೆಯ ಶಕ್ತಿ' ಎಂಬ ವಿಷಯದ ಕುರಿತು ವೆಬ್‌ನಾರ್‌ನಲ್ಲಿ ಮಾತನಾಡಿದ ಅವರು ಚೀನಾ ಸೇನೆಗೆ ಕ್ಷಿಪಣಿಗಳು ಹಾಗೂ ರಾಡಾರ್ಗಳನ್ನು ನೀಡುವ ಮೂಲಕ ಅವುಗಳ ಆಕ್ರಮಣಶೀಲತೆಯ ಸಾಧ್ಯತೆ ಹೆಚ್ಚಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: 2020ರಲ್ಲಿ ಚೀನಾದಿಂದ ಭಾರತಕ್ಕೆ ಎದುರಾದ ಸವಾಲುಗಳೇನು?
ಟಿಬೆಟ್ನಲ್ಲಿ ಭಾರತದ ಭೂಪ್ರದೇಶಕ್ಕೆ ಸಮೀಪವಾಗಿ ಚೀನಾ ತನ್ನ ವಾಯುಪಡೆಯ ಜೆ-20 ಮತ್ತು ಜೆ-10 ಫೈಟರ್ ಜೆಟ್ಗಳನ್ನು ಹಾಗೂ ರಷ್ಯಾ ಮೂಲದ ಎಸ್ಯು-30, ಎಸ್-400 ಅನ್ನು ನಿಯೋಜಿಸಿದೆ. ಇದಕ್ಕೆ ಪ್ರತಿಯಾಗಿ ಭಾರತವೂ ಲಡಾಖ್ ವಲಯದಲ್ಲಿ ರಫೇಲ್ ಮತ್ತು ಮಿಗ್-29 ಸೇರಿದಂತೆ ಹಲವು ಫೈಟರ್ ಜೆಟ್ಗಳನ್ನು ನಿಯೋಜಿಸಿದ್ದು, ಚೀನಾದ ದುಷ್ಕೃತ್ಯಗಳನ್ನು ತಡೆಯಲು ಸಂಪೂರ್ಣವಾಗಿ ಸಿದ್ಧವಾಗಿದೆ ಎಂದಿದ್ದಾರೆ.
ಇದರ ಜೊತೆಗೆ ಜಾಗತಿಕವಾಗಿ ನೋಡುವುದಾದರೆ ಚೀನಾ-ಭಾರತದ ಸಂಘರ್ಷ ಚೀನಾಗೆ ಒಳ್ಳೆಯದಲ್ಲ ಎಂದು ಕೂಡಾ ಆರ್ಕೆಎಸ್ ಬದೌರಿಯಾ ಅಭಿಪ್ರಾಯಪಟ್ಟಿದ್ದಾರೆ. ಈಗ ಸದ್ಯಕ್ಕೆ ವಾಯುಪಡೆ ಪಾಕ್ ಮತ್ತು ಚೀನಾ ಎರಡರ ವಿರುದ್ಧವೂ ಅತಿಕ್ರಮಣ ತಡೆಯುವಲ್ಲಿ, ಬಹುಮುಖ್ಯವಾದ ಪಾತ್ರ ವಹಿಸುತ್ತಿದೆ.