ನವದೆಹಲಿ: ಹರಿಯಾಣ ಮತ್ತು ದೆಹಲಿಯ ಬಹುತೇಕ ಭಾಗಗಳು, ದಕ್ಷಿಣ ಉತ್ತರ ಪ್ರದೇಶದ ಹಲವು ಭಾಗಗಳು, ಜಮ್ಮು ವಿಭಾಗ, ಹಿಮಾಚಲ ಪ್ರದೇಶ, ಪಶ್ಚಿಮ ರಾಜಸ್ಥಾನ ಮತ್ತು ಪಂಜಾಬ್‌ನ ಕೆಲವು ಭಾಗಗಳಲ್ಲಿ ಬಿಸಿ ಗಾಳಿಯ (ಉಷ್ಣ ಅಲೆ) ವಾತಾವರಣ ಅಧಿಕವಿದ್ದು, ರಾಜಸ್ಥಾನ ಮತ್ತು ಉತ್ತರ ಮಧ್ಯಪ್ರದೇಶ ಸೇರಿದಂತೆ ಉತ್ತರ ಪ್ರದೇಶದ ಬಂಡಾದಲ್ಲಿ ಭಾನುವಾರ 49 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ.
ವಿದರ್ಭದ ಹಲವು ಭಾಗಗಳಲ್ಲಿ ಮತ್ತು ನೈಋತ್ಯ ಬಿಹಾರ ಮತ್ತು ಜಾರ್ಖಂಡ್‌ನ ಪ್ರತ್ಯೇಕ ಜಾಗಗಳಲ್ಲಿ ಉಷ್ಣ ಅಲೆಯ ಪರಿಸ್ಥಿತಿ ವರದಿಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ವಾಯವ್ಯ ಭಾರತ ಮತ್ತು ಮಧ್ಯ ಭಾರತದ ಹಲವು ಭಾಗಗಳಲ್ಲಿರುವ ಗರಿಷ್ಠ ತಾಪಮಾನದಲ್ಲಿ ಸೋಮವಾರಕ್ಕೆ ಯಾವುದೇ ಗಮನಾರ್ಹ ಬದಲಾವಣೆಯಾಗದೇ ಇದ್ದರೂ ಮುಂದಿನ ಎರಡು ದಿನಗಳಲ್ಲಿ 2-4 ಡಿಗ್ರಿ ಸೆಲ್ಸಿಯಸ್ನಷ್ಟು ತಾಪಮಾನ ಕುಸಿಯುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.
ಭಾರತೀಯ ಹವಾಮಾನ ಇಲಾಖೆಯ ಬುಲೆಟಿನ್ ಪ್ರಕಾರ, ಸೋಮವಾರದ ನಂತರ ಶಾಖದ ತೀವ್ರತೆ ಮತ್ತು ಪ್ರಾದೇಶಿಕ ವಿತರಣೆ ಕುಸಿತವಾಗಬಹುದು. ಏಕೆಂದರೆ, ಸೋಮವಾರದಂದು ದಕ್ಷಿಣ ಉತ್ತರ ಪ್ರದೇಶದ ಪ್ರತ್ಯೇಕ ಭಾಗಗಳ ಮೇಲೆ ಬಿಸಿ ಅಲೆಯಿಂದ ತೀವ್ರ ಶಾಖದ ಅಲೆಯ ಪರಿಸ್ಥಿತಿ ಬದಲಾಗಬಹುದು.
ವಿದರ್ಭ ಮತ್ತು ಉತ್ತರ ಮಧ್ಯಪ್ರದೇಶದ ಕೆಲವು ಭಾಗಗಳಲ್ಲಿ ಸೋಮವಾರ ಮತ್ತು ಮಂಗಳವಾರದಂದು ಶಾಖದ ಅಲೆಯ ಪರಿಸ್ಥಿತಿಗಳು ಹೆಚ್ಚಾಗುವ ಸಾಧ್ಯತೆಯಿದೆ. ಮೇ 17 ರವರೆಗೆ ವಿದರ್ಭ ಮತ್ತು ಜಾರ್ಖಂಡ್‌ನ ಪ್ರತ್ಯೇಕ/ಕೆಲವು ಪಾಕೆಟ್‌ಗಳಲ್ಲಿ ಶಾಖದ ಅಲೆಯ ಪರಿಸ್ಥಿತಿ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ: ಮುಂದಿನ 5 ದಿನ ದೇಶಾದ್ಯಂತ ತಗ್ಗಲಿದೆ ಬಿಸಿ ಗಾಳಿ; ಗರಿಷ್ಠ ತಾಪಮಾನದಲ್ಲೂ ಇಳಿಕೆ