ETV Bharat / bharat

ಮಹಾರಾಷ್ಟ್ರದಲ್ಲಿ ದಾಖಲೆ ಬಿಸಿಲಿನ ಬೇಗೆ.. ಕರ್ನಾಟಕ ಸೇರಿ ಎಲ್ಲೆಲ್ಲಿ ತಾಪಮಾನ ಹೆಚ್ಚಿದೆ ?

ದೆಹಲಿಯ ಎನ್‌ಸಿಆರ್‌ನಲ್ಲಿ ಗರಿಷ್ಠ ತಾಪಮಾನ ದಾಖಲಾದ್ರೂ ಸಹಿತ ಮಹಾರಾಷ್ಟ್ರದ ಚಂದ್ರಾಪುರನಲ್ಲಿ ಅದಕ್ಕಿಂತ ಹೆಚ್ಚು ತಾಪಮಾನ ದಾಖಲಾಗುವ ಮೂಲಕ ಅಗ್ರಸ್ಥಾನದಲ್ಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಇನ್ನು ಬಿಸಿಲಿನ ಬೇಗೆಗೆ ಕರ್ನಾಟಕವೂ ತತ್ತರಿಸುತ್ತಿದೆ.

Heat wave likely to continue in central  Heat wave continue in west India for next few days  Multiple places across India that recorded temperatures  ಮಹಾರಾಷ್ಟ್ರದಲ್ಲಿ ದಾಖಲೆಯ ಬಿಸಿಲಿನ ಬೇಗೆ  ಕರ್ನಾಟಕ ಸೇರಿದಂತೆ ಯಾವ ರಾಜ್ಯದಲ್ಲಿ ತಾಪಮಾನ ವರದಿ  ದೇಶದ ನಾನಾ ಕಡೆಯ ತಾಪಮಾನ ವರದಿ
ಕರ್ನಾಟಕ ಸೇರಿದಂತೆ ಯಾವ ರಾಜ್ಯದಲ್ಲಿ ತಾಪಮಾನ ಹೇಗಿದೆ ಗೊತ್ತಾ
author img

By

Published : Mar 31, 2022, 8:59 AM IST

ನವದೆಹಲಿ: ಭಾರತದಲ್ಲಿ ಬಿಸಿಲಿನ ಬೇಗೆ ಆರಂಭವಾಗಿದೆ. ಜನರು ಆರಂಭದ ಬಿಸಿಲಿಗೆ ತತ್ತರಿಸುತ್ತಿದ್ದಾರೆ. ದೇಶದ ಕೆಲವೊಂದು ಭಾಗದಲ್ಲಿ ಮುಂದಿನ ನಾಲ್ಕೈದು ದಿನಗಳಲ್ಲಿ ಮತ್ತಷ್ಟು ಬಿಸಿಲು ಹೆಚ್ಚಾಗುವ ಸಾಧ್ಯತೆಯಿದೆ ಭಾರತೀಯ ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ.

ದೆಹಲಿಯ ಮೂಲ ನಿಲ್ದಾಣವಾದ ಸಫ್ದರ್‌ಜಂಗ್‌ನಲ್ಲಿ 39.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಮತ್ತು ಗುರುವಾರ ಮತ್ತು ಶುಕ್ರವಾರದಂದು ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಇರಲಿದೆ. ಪಶ್ಚಿಮ ರಾಜಸ್ಥಾನದ ಹೆಚ್ಚಿನ ಭಾಗಗಳಲ್ಲಿ, ಹಿಮಾಚಲ ಪ್ರದೇಶದ ಹಲವು ಭಾಗಗಳಲ್ಲಿ ಮತ್ತು ಹರಿಯಾಣದ ಕೆಲವು ಭಾಗಗಳಲ್ಲಿ ತೀವ್ರ ಬಿಸಿಲಿನ ಶಾಖ ಕಂಡು ಬಂದರೆ, ಉತ್ತರಪ್ರದೇಶ, ಪೂರ್ವ ರಾಜಸ್ಥಾನ, ಮಧ್ಯಪ್ರದೇಶದ ಕೆಲವು ಭಾಗಗಳಲ್ಲಿ ಮತ್ತು ಜಮ್ಮು-ಕಾಶ್ಮೀರದಲ್ಲಿ ಸಾಧರಣ ಮಟ್ಟದ ಬಿಸಲಿನ ಬೇಗೆ ಕಂಡು ಬರುತ್ತಿದೆ.

ಓದಿ: ಆಂಧ್ರದ ಶ್ರೀಶೈಲಂನಲ್ಲಿ ಕನ್ನಡಿಗರು, ಸ್ಥಳೀಯರ ನಡುವೆ ಘರ್ಷಣೆ: ವಾಹನಗಳು, ಅಂಗಡಿಗಳಿಗೆ ಹಾನಿ

ಮಹಾರಾಷ್ಟ್ರ ದಾಖಲೆ: ಮಹಾರಾಷ್ಟ್ರದ ಚಂದ್ರಾಪುರದಲ್ಲಿ 44.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾದರೆ, ಅಕೋಲಾದಲ್ಲಿ (ಮಹಾರಾಷ್ಟ್ರ) 43.2 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. ಈ ಮೂಲಕ ಭಾರತದಾದ್ಯಂತ ಅತಿ ಹೆಚ್ಚು ಗರಿಷ್ಠ ತಾಪಮಾನವನ್ನು ದಾಖಲಿಸಿದ ನಗರಗಳಾಗಿವೆ.

41 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ತಾಪಮಾನ ದಾಖಲು:

  • ಗುಜರಾತ್​ನ ರಾಜ್‌ಕೋಟ್​ನಲ್ಲಿ 41.3, ಅಮ್ರೇಲಿಯಲ್ಲಿ 41.5, ಭುಜ್​ನಲ್ಲಿ 41.8 ಮತ್ತು ಸುರೇಂದ್ರ ನಗರದಲ್ಲಿ 41.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ
  • ಮಹಾರಾಷ್ಟ್ರದ ಅಮರಾವತಿಯಲ್ಲಿ 41.8, ವಾಶಿಮ್​ನಲ್ಲಿ 42.5, ವಾರ್ಧಾದಲ್ಲಿ 42.8, ನಾಗ್ಪುರದಲ್ಲಿ 42.1, ಬ್ರಹ್ಮಪುರಿಯಲ್ಲಿ 41.8 ಮತ್ತು ಗೊಂಡಿಯಾದಲ್ಲಿ 41.5, ಮಾಲೆಗಾಂವ್​ನಲ್ಲಿ 41, ಸೊಲ್ಲಾಪುರದಲ್ಲಿ 42.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ
  • ರಾಜಸ್ಥಾನದ ಗಂಗಾನಗರದಲ್ಲಿ 41.3, ಚುರುದಲ್ಲಿ 43, ಬಿಕಾನೇರ್​ದಲ್ಲಿ 42.5, ಜೈಸಲ್ಮೇರ್​ದಲ್ಲಿ 41.8, ಬಾರ್ಮರ್​ದಲ್ಲಿ 42.7, ಜೋಧ್‌ಪುರದಲ್ಲಿ 41.2, ಪಿಲಾನಿಯಲ್ಲಿ 42.8 ಮತ್ತು ಕೋಟಾದಲ್ಲಿ 41.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ
  • ಮಧ್ಯಪ್ರದೇಶದ ರತ್ಲಂನಲ್ಲಿ 41.8, ಗ್ವಾಲಿಯರ್​ನಲ್ಲಿ 41.7, ರಾಜ್‌ಗಢದಲ್ಲಿ 42, ಖಾಂಡ್ವಾದಲ್ಲಿ 42.1, ಖಾರ್ಗೋನ್​ನಲ್ಲಿ 42.4, ಧಾರ್​ನಲ್ಲಿ 41.2, ಖಜುರಾಹೊದಲ್ಲಿ 42.4, ದಾಮೋಹ್​ದಲ್ಲಿ 41.8 ಮತ್ತು ಸತ್ನಾದಲ್ಲಿ 41.2 ಡಿಗ್ರಿ ಸೆಲ್ಸಿಯಸ್​ ದಾಖಲಾಗಿದೆ
  • ಕರ್ನಾಟಕದ ರಾಯಚೂರಿನಲ್ಲಿ 42.8, ಕಲಬುರಗಿಯಲ್ಲಿ 42 ಮತ್ತು ಬೀದರ್​ ಜಿಲ್ಲೆಯಲ್ಲಿ 39 ಡಿಗ್ರಿ ಸೆಲ್ಸಿಯಸ್​ ದಾಖಲಾಗಿದೆ ಎಂದು IMD ಡೇಟಾ ತೋರಿಸಿದೆ.

ಓದಿ: ಯುದ್ಧದ ಕುರಿತು ರಷ್ಯಾ ಮಿಲಿಟರಿ ಸಲಹೆಗಾರರಿಂದ ಪುಟಿನ್​ಗೆ ತಪ್ಪು ಮಾಹಿತಿ: ಶ್ವೇತಭವನ

ಹೆಚ್ಚಿನ ಭಾಗಗಳಲ್ಲಿ ಸಾಧಾರಣ ಬಿಸಿಲಿನ ಮಟ್ಟದಿಂದ ತೀವ್ರ ಬಿಸಿಲಿನ ಮಟ್ಟಕ್ಕೆ ಇಂದಿನಿಂದ ಹಲವು ಭಾಗಗಳಲ್ಲಿ ಹೆಚ್ಚಾಗುವ ಸಾಧ್ಯತೆಯಿದೆ. ಕೆಲವು ಭಾಗಗಳಲ್ಲಿ ಪಶ್ಚಿಮ ಉತ್ತರ ಪ್ರದೇಶ, ಪೂರ್ವ ರಾಜಸ್ಥಾನ ಮತ್ತು ಪಶ್ಚಿಮ ಮಧ್ಯಪ್ರದೇಶ, ದಕ್ಷಿಣ ಹರಿಯಾಣ ಮತ್ತು ದೆಹಲಿಯಲ್ಲಿ ಸಾಧಾರಣ ಮಟ್ಟದ ಬಿಸಿಲು ಮುಂದುವರಿಯು ಸಾಧ್ಯತೆ ಹೆಚ್ಚಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.