ETV Bharat / bharat

ಗ್ರೀನ್​​ ಕಾರಿಡಾರ್​​​​​​ ಮೂಲಕ 11 ನಿಮಿಷದಲ್ಲಿ ಮೃತ ವ್ಯಕ್ತಿಯ ಹೃದಯ ಆಸ್ಪತ್ರೆಗೆ ರವಾನೆ: ಪೊಲೀಸರಿಗೆ ಧನ್ಯವಾದ ತಿಳಿಸಿದ ಏಮ್ಸ್ - ದೆಹಲಿ ಇಂದಿರಾಗಾಂಧಿ ವಿಮಾನ ನಿಲ್ದಾಣ

ದೆಹಲಿ ಟ್ರಾಫಿಕ್ ಪೊಲೀಸರು ಗ್ರೀನ್​ ಕಾರಿಡಾರ್ ಮೂಲಕ ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಿಂದ ಏಮ್ಸ್ ಆಸ್ಪತ್ರೆಗೆ ಮೃತ ವ್ಯಕ್ತಿಯ ಹೃದಯವನ್ನು 11 ನಿಮಿಷದಲ್ಲಿ ಸಾಗಿಸಿದರು.

ದೆಹಲಿ
ಗ್ರೀನ್​ ಕಾರಿಡಾರ್ ಮೂಲಕ ಹೃದಯ ರವಾನೆ
author img

By

Published : Jan 7, 2022, 6:55 AM IST

ನವದೆಹಲಿ: ಚಂಡೀಗಢದಿಂದ ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣಕ್ಕೆ ಕರೆತಂದ ಮೃತ ವ್ಯಕ್ತಿಯೊಬ್ಬರ ಅಂಗಾಂಗವನ್ನು ಗ್ರೀನ್​ ಕಾರಿಡಾರ್ ಮೂಲಕ ದೆಹಲಿ ಟ್ರಾಫಿಕ್ ಪೊಲೀಸರು 11 ನಿಮಿಷಗಳಲ್ಲಿ ವಿಮಾನ ನಿಲ್ದಾಣದಿಂದ ಏಮ್ಸ್ ಆಸ್ಪತ್ರೆಗೆ ಸಾಗಿಸಿದರು.

ಈ ಕುರಿತು ಮಾಹಿತಿ ನೀಡಿರುವ ಡಿಸಿಪಿ, ನಿನ್ನೆ ಮಧ್ಯಾಹ್ನ ದೆಹಲಿ ವಿಮಾನ ನಿಲ್ದಾಣಕ್ಕೆ ಚಂಡೀಗಢದಿಂದ ಇಂಡಿಗೋ ವಿಮಾನದಲ್ಲಿ ಏಮ್ಸ್ ಆಸ್ಪತ್ರೆಯಲ್ಲಿ ದಾಖಲಾದ ರೋಗಿಯೊಬ್ಬರಿಗೆ ಕಸಿ ಮಾಡಲು ಜೀವಂತ ಹೃದಯ ತರಲಾಯಿತು. ಇದಾದ ಬಳಿಕ ಏಮ್ಸ್​​​ನ ORBO ವಿಭಾಗದ ಮುಖ್ಯಸ್ಥರಿಂದ ಬಂದ ಮನವಿಯ ಆಧಾರದ ಮೇಲೆ12 ಕಿ.ಮೀ ದೂರವನ್ನು 11 ನಿಮಿಷಗಳಲ್ಲಿ ತಲುಪಲಾಯಿತು. ಗ್ರೀನ್​ ಕಾರಿಡಾರ್ ವ್ಯವಸ್ಥೆ ಮೂಲಕ ವಿಮಾನ ನಿಲ್ದಾಣದಿಂದ AIIMS ಆಸ್ಪತ್ರೆಗೆ 11 ನಿಮಿಷದಲ್ಲಿ ಹೃದಯ ತೆಗೆದುಕೊಂಡು ಹೋಗಲಾಯಿತು ಎಂದರು.

ಗ್ರೀನ್​ ಕಾರಿಡಾರ್ ಮೂಲಕ ಹೃದಯ ರವಾನೆ

ಇಂದಿರಾಗಾಂಧಿ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 2:19 ಕ್ಕೆ ಆ್ಯಂಬುಲೆನ್ಸ್ ಹೊರಟ ಹೃದಯ 2:30 ಕ್ಕೆ ಏಮ್ಸ್ ಆಸ್ಪತ್ರೆ ತಲುಪಿತು . ಏಮ್ಸ್ ಆಸ್ಪತ್ರೆ ಆಡಳಿತ ಮಂಡಳಿ ದೆಹಲಿ ಟ್ರಾಫಿಕ್ ಪೊಲೀಸರ ಸಹಕಾರವನ್ನು ಶ್ಲಾಘಿಸಿ, ಸರಿಯಾದ ಸಮಯಕ್ಕೆ ಹೃದಯ ರವಾನೆ ಮಾಡಲು ಸಹಕರಿಸಿದ್ದಕ್ಕೆ ಧನ್ಯವಾದ ತಿಳಿಸಿದೆ.

ಓದಿ: ಪ್ರಧಾನಿ ಮೋದಿಗೆ ಭದ್ರತಾ ಲೋಪ : ಇಂದು ಸುಪ್ರೀಂ​ ಕೋರ್ಟ್​ನಲ್ಲಿ ತನಿಖೆಗಾಗಿ ಸಲ್ಲಿಸಿರುವ ಅರ್ಜಿ ವಿಚಾರಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.