ETV Bharat / bharat

ಐಎನ್​​ಎಕ್ಸ್ ಮೀಡಿಯಾ ಹಗರಣ: ಮಾಜಿ ಸಚಿವ ಪಿ.ಚಿದಂಬರಂ ವಿಚಾರಣೆ ಮೇ 4ಕ್ಕೆ ಮುಂದೂಡಿಕೆ - ಐಎನ್​​ಎಕ್ಸ್ ಮೀಡಿಯಾ ಹಗರಣ.

ನ್ಯಾಯಾಲಯವು ಸಹ - ಆರೋಪಿ ಪೀಟರ್ ಮುಖರ್ಜಿಯ ಮಧ್ಯಂತರ ಜಾಮೀನು ಅರ್ಜಿ ವಿಚಾರಣೆಯನ್ನೂ ಸಹ ಮುಂದೂಡಿತು. ಇದೇ ಪ್ರಕರಣ ಸಂಬಂಧ ಪಿ. ಚಿದಂಬರಂ ಮತ್ತು ಇತರರಿಗೆ ಇದೇ ಕೋರ್ಟ್​​ ಈ ಹಿಂದೆ ಸಮನ್ಸ್ ಜಾರಿಗೊಳಿಸಿತ್ತು.

hearing-in-inx-media-money-laundering-case-adjourned-till-may-4
ಐಎನ್​​ಎಕ್ಸ್ ಮೀಡಿಯಾ ಹಗರಣ
author img

By

Published : Apr 16, 2021, 10:46 PM IST

ನವದೆಹಲಿ: ಐಎನ್​ಎಕ್ಸ್ ಮೀಡಿಯಾ ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಹಿರಿಯ ಕಾಂಗ್ರೆಸ್​ ನಾಯಕ ಹಾಗೂ ಕೇಂದ್ರ ಮಾಜಿ ಸಚಿವ ಪಿ. ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಸೇರಿ ನಾಲ್ವರ ವಿರುದ್ಧದ ವಿಚಾರಣೆಯನ್ನು ಮೇ 4ಕ್ಕೆ ಮುಂದೂಡಿ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.

ಅರ್ಜಿ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ಎಂ.ಕೆ ನಾಗ್ಪಾಲ್ ಅವರಿದ್ದ ಪೀಠ ಈ ಆದೇಶ ನೀಡಿದೆ. ಇನ್ನು ವಿಚಾರಣೆಗೆ ಮಾಜಿ ಸಚಿವ ಪಿ.ಚಿದಂಬರಂ ಹಾಗೂ ಪುತ್ರ ಕಾರ್ತಿ ಚಿದಂಬರಂ ವರ್ಚ್ಯುಯಲ್ ಮೂಲಕ ಹಾಜರಾಗಿದ್ದರು.

ಇದರ ನಡುವೆ ನ್ಯಾಯಾಲಯವು ಸಹ - ಆರೋಪಿ ಪೀಟರ್ ಮುಖರ್ಜಿಯಾ ಅವರ ಮಧ್ಯಂತರ ಜಾಮೀನು ಅರ್ಜಿಯ ವಿಚಾರಣೆಯನ್ನೂ ಸಹ ಮುಂದೂಡಿತು. ಇದೇ ಪ್ರಕರಣ ಸಂಬಂಧ ಪಿ. ಚಿದಂಬರಂ ಮತ್ತು ಇತರರಿಗೆ ಇದೇ ನ್ಯಾಯಾಲಯವು ಈ ಹಿಂದೆ ಸಮನ್ಸ್ ಜಾರಿಗೊಳಿಸಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.