ಜಮ್ಮುಕಾಶ್ಮೀರ: ದೇಶದಲ್ಲಿ ಕೊರೊನಾ ನಿರ್ಮೂಲನೆಗೆ ವೈದ್ಯಕೀಯ ಕ್ಷೇತ್ರ ನಿರಂತರವಾಗಿ ಹೋರಾಡುತ್ತಿದೆ. ಸೋಂಕಿತರಿಗೆ ಚಿಕಿತ್ಸೆ ನೀಡುವುದರ ಜತೆಗೆ ಇತರರಿಗೆ ವ್ಯಾಕ್ಸಿನ್ ನೀಡುವುದೂ ಆರೋಗ್ಯ ಕಾರ್ಯಕರ್ತರ ಜವಾಬ್ದಾರಿಯಾಗಿದೆ.
ಎಷ್ಟೋ ಗ್ರಾಮಗಳಿಗೆ ತೆರಳಿ ಆರೋಗ್ಯ ಕಾರ್ಯಕರ್ತರು ಜನರಿಗೆ ಲಸಿಕೆ ಹಾಕುತ್ತಿದ್ದಾರೆ. ವ್ಯಾಕ್ಸಿನ್ ಹಾಕಲು ಕೋವಿಡ್ ಲಸಿಕೆ ಡೋಸ್ಗಳ ಸಮೇತ ಹೊರಟ ಆರೋಗ್ಯ ಕಾರ್ಯಕರ್ತರಿಗೆ ರಜೌರಿಯ ಕಂಡಿ ಬ್ಲಾಕ್ಗೆ ಪ್ರಯಾಣಿಸಲು ದಾರಿಯೇ ಇಲ್ಲ. ಹಾಗಾಗಿ ಅವರು ನದಿಯಲ್ಲಿ ನಡೆದು ಊರು ಸೇರಲು ಮುಂದಾಗಿದ್ದಾರೆ.