ETV Bharat / bharat

ವ್ಯಾಕ್ಸಿನೇಷನ್ ಬಗ್ಗೆ ತಿಳಿಸಲು ಹೋದ ಆರೋಗ್ಯ ಕಾರ್ಯಕರ್ತೆ ಮೇಲೆ ಹಲ್ಲೆ - ಆರೋಗ್ಯ ಕಾರ್ಯಕರ್ತೆ ಮೇಲೆ ಹಲ್ಲೆ

ಛತ್ತೀಸ್​ಗಢದ ಬಸ್ತರ್ ಜಿಲ್ಲೆಯ ಮಕ್ಡಿ ತಹಸಿಲ್‌ನಲ್ಲಿರುವ ಅರಂಗುಲಾ ಗ್ರಾಮಕ್ಕೆ ಲಸಿಕೆ ಪಡೆಯುವಂತೆ ಪ್ರೋತ್ಸಾಹಿಸಲು ತೆರಳಿದ್ದ ಆರೋಗ್ಯ ಕಾರ್ಯಕರ್ತೆ ಮಿಟಾನಿನ್ ರೀನಾ ನೇತಮ್ ಮೇಲೆ ಚಮ್ರೀನ್ ಬಾಯಿ ಎಂಬ ಮಹಿಳೆ ದೈಹಿಕ ಹಲ್ಲೆ ನಡೆಸಿದ್ದಾರೆ.

author img

By

Published : May 21, 2021, 2:36 PM IST

ಕೊಂಡಗಾಂವ್ (ಛತ್ತೀಸ್​ಗಢ​): ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಕಾರ್ಯಕರ್ತರು ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಏಕೆಂದರೆ, ಗ್ರಾಮೀಣ ಪ್ರದೇಶದ ಜನರಲ್ಲಿ ಲಸಿಕೆ ಬಗ್ಗೆ ಮಾಹಿತಿ ಕೊರತೆಯಿಂದಾಗಿ ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸುವ ಘಟನೆಗಳು ನಡೆಯುತ್ತಿವೆ.

ಬಸ್ತರ್ ಜಿಲ್ಲೆಯ ಮಕ್ಡಿ ತಹಸಿಲ್‌ನಲ್ಲಿರುವ ಅರಂಗುಲಾ ಗ್ರಾಮಕ್ಕೆ ಮೇ 18 ರಂದು ಮನೆ - ಮನೆಗೆ ತೆರಳಿ ಕೊರೊನಾ ಲಸಿಕೆ ಪಡೆಯುವಂತೆ ಪ್ರೋತ್ಸಾಹಿಸಲು ತೆರಳಿದ್ದ ಆರೋಗ್ಯ ಕಾರ್ಯಕರ್ತೆ ಮಿಟಾನಿನ್ ರೀನಾ ನೇತಮ್ ಮೇಲೆ ಚಮ್ರೀನ್ ಬಾಯಿ ಎಂಬ ಮಹಿಳೆ ದೈಹಿಕ ಹಲ್ಲೆ ನಡೆಸಿದ್ದಾರೆ.

ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸ್ ಠಾಣೆ ಉಸ್ತುವಾರಿ ರಾಜೇಂದ್ರ ಮಂಡವಿ ಮತ್ತು ತಹಶೀಲ್ದಾರ್ ವಿಜಯ್ ಮಿಶ್ರಾ ಸ್ಥಳಕ್ಕೆ ತೆರಳಿ ಗ್ರಾಮಸ್ಥರಿಗೆ ಪರಿಸ್ಥಿತಿಯನ್ನು ವಿವರಿಸಿದರು. ಈ ಪ್ರಕರಣದಲ್ಲಿ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷ ಕಿರಣ್ಮಯಿ ನಾಯಕ್ ತಿಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.