ETV Bharat / bharat

ಕೋವಿಡ್ ಚಿಕಿತ್ಸೆಯ ಕೆಲವು ಔಷಧಗಳನ್ನು ಕೈ ಬಿಟ್ಟ ಸರ್ಕಾರ

ಡಿಜಿಹೆಚ್ಎಸ್ ಹೊರಡಿಸಿದ ಮಾರ್ಗಸೂಚಿಗಳು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಮಾರ್ಗಸೂಚಿಗಳಿಗೆ ವಿರುದ್ಧವಾಗಿದ್ದು, ಇದು ಕೋವಿಡ್ 19 ರೋಗಿಗಳಿಗೆ ಚಿಕಿತ್ಸೆ ನೀಡಲು ಐವರ್ಮೆಕ್ಟಿನ್ ಮತ್ತು ಹೈಡ್ರಾಕ್ಸಿಕ್ಲೋರೋಕ್ವಿನ್ ಎರಡನ್ನೂ ಬಳಸಲು ಶಿಫಾರಸು ಮಾಡಿದೆ.

health-ministrys-new-guidelines-drop-ivermectin-hcq-and-inhalational-budesonide-for-treating-covid-patients

author img

By

Published : Jun 7, 2021, 5:36 PM IST

ನವದೆಹಲಿ: ಡೈರೆಕ್ಟರೇಟ್ ಜನರಲ್ ಆಫ್ ಹೆಲ್ತ್ ಸರ್ವಿಸ್ (ಡಿಜಿಹೆಚ್ಎಸ್) ಹೊರಡಿಸಿದ ಕೊರೊನಾ ಹೊಸ ಮಾರ್ಗಸೂಚಿಗಳಂತೆ ಐವರ್ಮೆಕ್ಟಿನ್, ಎಚ್‌ಸಿಕ್ಯು ಮತ್ತು ಇನ್ಹಲೇಷನ್ ಬುಡೆಸೊನೈಡ್ ಔಷಧ ಬಳಕೆಯನ್ನು ಕೈಬಿಟ್ಟಿವೆ. ಹಾಗೆಯೇ ಕೋವಿಡ್ -19 ಸೋಂಕನ್ನು ಪತ್ತೆಹಚ್ಚುವ ಮತ್ತು ಪರೀಕ್ಷಿಸುವ ಉದ್ದೇಶದಿಂದ ಹೈ ರೆಸಲ್ಯೂಷನ್ ಸಿಟಿ (ಎಚ್‌ಆರ್‌ಸಿಟಿ) ಎದೆ ಸ್ಕ್ಯಾನ್ ಅಗತ್ಯ ಇಲ್ಲ ಎಂದು ತಿಳಿಸಲಾಗಿದೆ.

ಪ್ರಮುಖ ವಿಷಯ ಎಂದರೆ ಡಿಜಿಹೆಚ್ಎಸ್ ಹೊರಡಿಸಿದ ಮಾರ್ಗಸೂಚಿಗಳು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಮಾರ್ಗಸೂಚಿಗಳಿಗೆ ವಿರುದ್ಧವಾಗಿವೆ. ಕೋವಿಡ್ 19 ರೋಗಿಗಳಿಗೆ ಚಿಕಿತ್ಸೆ ನೀಡಲು ಐವರ್ಮೆಕ್ಟಿನ್ ಮತ್ತು ಹೈಡ್ರಾಕ್ಸಿಕ್ಲೋರೋಕ್ವಿನ್ ಎರಡನ್ನೂ ಬಳಸಲು ಶಿಫಾರಸು ಮಾಡಿದೆ.

ಔಷಧಿಗಳ ಬಳಕೆಯು ವೈಜ್ಞಾನಿಕ ಪುರಾವೆಗಳ ಲಭ್ಯತೆಯನ್ನು ಅವಲಂಬಿಸಿರುತ್ತದೆ ಎಂದು ಐಸಿಎಂಆರ್ ಹಿರಿಯ ಸಲಹೆಗಾರ ಮತ್ತು ಖ್ಯಾತ ಆರೋಗ್ಯ ತಜ್ಞ ಡಾ. ಸುನೀಲಾ ಗರ್ಗ್ ಈ ಸಂಬಂಧ ಪ್ರತಿಕ್ರಿಯಿಸಿದ್ದಾರೆ.

ಎದೆಯ ಎಚ್‌ಆರ್‌ಸಿಟಿ ಸ್ಕ್ಯಾನ್‌ನಿಂದ ಪಡೆದ ವರದಿಯಿಂದ ನಿಖರವಾದ ಚಿಕಿತ್ಸೆಯ ನಿರ್ಧಾರಗಳನ್ನು ಹೆಚ್ಚಾಗಿ ಮಾಡಲು ಸಾಧ್ಯವಾಗುತ್ತಿಲ್ಲ. ಈ ಚಿಕಿತ್ಸೆಯ ನಿರ್ಧಾರಗಳು ಸಂಪೂರ್ಣವಾಗಿ ಕ್ಲಿನಿಕಲ್ ತೀವ್ರತೆ ಮತ್ತು ದೈಹಿಕ ದೌರ್ಬಲ್ಯವನ್ನು ಆಧರಿಸಿವೆ. ಆದ್ದರಿಂದ, ಕೊರೊನಾ ರೋಗಿಗಳಿಗೆ ಎಚ್‌ಆರ್‌ಸಿಟಿ ಸ್ಕ್ಯಾನ್‌ನಿಂ ಆದೇಶಿಸುವಲ್ಲಿ ವೈದ್ಯರು ಹೆಚ್ಚು ಗಮನಹರಿಸಿ ನಂತರ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖಮಾಡಲಾಗಿದೆ.

ರೆಮ್ಡಿಸಿವರ್​​ ಬಳಕೆಗೆ ಸಂಬಂಧಿಸಿದಂತೆ, ಡಿಜಿಎಚ್‌ಎಸ್ ಮಾರ್ಗಸೂಚಿಯಲ್ಲಿ ತಿಳಿಸಿದ್ದು, ಜಾಗತಿಕವಾಗಿ ಸೀಮಿತ ವೈಜ್ಞಾನಿಕ ಪುರಾವೆಗಳ ಆಧಾರದ ಮೇಲೆ ಮಾತ್ರ ತುರ್ತು ಬಳಕೆಯ ಅಧಿಕಾರದ ಅಡಿಯಲ್ಲಿ ಡಿಸಿಜಿ (ಐ) ಅನುಮೋದಿಸಿದ ಔಷಧವಾಗಿದೆ ಎಂದಿದೆ.

ರೋಗ ಪ್ರಾರಂಭವಾದ 10 ದಿನಗಳಲ್ಲಿ ಪೂರಕ ಉಸಿರಾಟದ ಆಧಾರದ ಮೇಲೆ ಆಯ್ದ ಮಧ್ಯಮ ಮತ್ತು ತೀವ್ರ ಆಸ್ಪತ್ರೆಗೆ ದಾಖಲಾದ ಕೋವಿಡ್ -19 ರೋಗಿಗಳಲ್ಲಿ ಮಾತ್ರ ಇದನ್ನು ಬಳಸಬೇಕಾಗಿದೆ ಎಂದು ತಿಳಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.