ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಪುನರ್ ರಚನೆಯಾಗುತ್ತಿದ್ದು, ಅನೇಕ ಪ್ರಮುಖ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಾರೆ.
ಈಗಾಗಲೇ ಸಚಿವ ಸ್ಥಾನಕ್ಕೆ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್, ರಸಗೊಬ್ಬರ ಖಾತೆ ಸಚಿವ ಸದಾನಂದ ಗೌಡ, ರಾಜ್ಯ ಖಾತೆ ಸಚಿವ ಸಂಜಯ್ ದಾಹೊತ್ರಾ, ಕಾರ್ಮಿಕ ಸಚಿವ ಸಂತೋಷ್ ಗಂಗಾವರ್, ತಾವರ್ಚಂದ್ ಗೆಹ್ಲೋಟ್ ರಾಜೀನಾಮೆ ನೀಡಿದ್ದಾರೆ.
-
Union Health Minister Dr Harsh Vardhan resigns from Union Cabinet, ahead of #CabinetReshuffle
— ANI (@ANI) July 7, 2021 " class="align-text-top noRightClick twitterSection" data="
(File pic) pic.twitter.com/Iv63Isu7UK
">Union Health Minister Dr Harsh Vardhan resigns from Union Cabinet, ahead of #CabinetReshuffle
— ANI (@ANI) July 7, 2021
(File pic) pic.twitter.com/Iv63Isu7UKUnion Health Minister Dr Harsh Vardhan resigns from Union Cabinet, ahead of #CabinetReshuffle
— ANI (@ANI) July 7, 2021
(File pic) pic.twitter.com/Iv63Isu7UK
ಇದರ ಬೆನ್ನಲ್ಲೇ ಇದೀಗ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಕೂಡ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಹೊಸ ಮುಖಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ, ಮೋದಿ ಸಂಪುಟದಲ್ಲಿರುವ ಕೆಲ ಸಚಿವರಿಗೆ ಉನ್ನತ ಸ್ಥಾನ ನೀಡಲು ನಿರ್ಧರಿಸಲಾಗಿದ್ದು, ಹೊಸದಾಗಿ 43 ಮಂದಿ ಕೇಂದ್ರ ಸಚಿವ ಸಂಪುಟ ಸೇರಿಕೊಳ್ಳುತ್ತಿದ್ದಾರೆ.