ಜಮ್ಮು-ಕಾಶ್ಮೀರ: ಇಲ್ಲಿನ ದೋಡಾ ಜಿಲ್ಲೆಯಲ್ಲಿ ವಿಪರೀತ ಹಿಮಪಾತ ಮತ್ತು ಕಠಿಣ ಹವಾಮಾನ ಪರಿಸ್ಥಿತಿಯ ನಡುವೆಯೂ ಆರೋಗ್ಯ ಕಾರ್ಯಕರ್ತರು 15-18 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ ನೀಡುತ್ತಿದ್ದಾರೆ.
ಕಳೆದ ಕೆಲವು ದಿನಗಳಿಂದ ಜಮ್ಮು ಕಾಶ್ಮೀರ ಹಾಗು ಹಿಮಾಚಲ ಪ್ರದೇಶದ ವಿವಿಧ ಭಾಗಗಳಲ್ಲಿ ಭಾರಿ ಹಿಮಪಾತವಾಗುತ್ತಿದೆ. ಕೆಲವು ದಿನಗಳ ಹಿಂದೆ ಶಿಮ್ಲಾದಲ್ಲಿ ವರ್ಷದ ಮೊದಲ ಹಿಮಪಾತ ಶುರುವಾಗಿತ್ತು. ಪರಿಸ್ಥಿತಿ ಹೀಗಿದ್ದರೂ ಪ್ರತಿಕೂಲ ಪರಿಸ್ಥಿತಿಗಳ ನಡುವೆಯೂ ರಾಜ್ಯದಲ್ಲಿ ಆರೋಗ್ಯ ಕಾರ್ಯಕರ್ತರು ಕೋವಿಡ್-19 ಲಸಿಕೆಗಳನ್ನು ವಿತರಿಸುತ್ತಿದ್ದಾರೆ.
ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (ಪಿಐಬಿ) ರಾಜ್ಯದ ಲಸಿಕೆ ಅಭಿಯಾನದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದೆ. ಒಂದು ನಿಮಿಷ ಅವಧಿಯ ಈ ಸ್ಪೂರ್ತಿದಾಯಕ ವಿಡಿಯೋದಲ್ಲಿ ನಾವು ಆರೋಗ್ಯ ಕಾರ್ಯಕರ್ತರು ಅತ್ಯಂತ ಶೀತ ತಾಪಮಾನದೊಂದಿಗೆ ಲಸಿಕಾ ಕೇಂದ್ರದೆಡೆ ತೆರಳುತ್ತಿರುವುದನ್ನು ಕಾಣಬಹುದು.
ಇದನ್ನೂ ಓದಿ: ಜಲ್ಲಿಕಟ್ಟು ಆಯೋಜಿಸಲು ಗ್ರೀನ್ ಸಿಗ್ನಲ್: ಕಂಡೀಶನ್ಸ್ ಅಪ್ಲೈ ಎಂದ ತಮಿಳುನಾಡು ಸರ್ಕಾರ