ಇಟಾನಗರ (ಅರುಣಾಚಲ ಪ್ರದೇಶ): ಅರುಣಾಚಲ ಪ್ರದೇಶದ ಇಂಡೋ-ಚೀನಾ ಗಡಿಯಲ್ಲಿ ಭಾರತೀಯ ಸೇನೆ ಗ್ರಾಮಸ್ಥರಿಗಾಗಿ ಆರೋಗ್ಯ ಶಿಬಿರವನ್ನು ಏರ್ಪಡಿಸಿದೆ.

ಆರೋಗ್ಯ ಶಿಬಿರವನ್ನು ಭಾರತೀಯ ಸೇನೆಯ ಸ್ಪಿಯರ್ ಕಾರ್ಪ್ಸ್ (10 ನೇ ವಿಭಾಗ) ವಿಭಾಗ ಆಯೋಜನೆ ಮಾಡಿದ್ದು, ಕಳೆದ ಫೆ.08ರಿಂದ ನಡೆಯುತ್ತಿರುವ ಶಿಬಿರದಲ್ಲಿ 200ಕ್ಕೂ ಅಧಿಕ ಜನರು ವೈದ್ಯಕೀಯ ತಪಾಸಣೆ ಮಾಡಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಗಡಿ ಪ್ರದೇಶಗಳಲ್ಲಿರುವ ಗ್ರಾಮಸ್ಥರು ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಸೇನೆ ಬಳಿ ತೆರಳಬೇಕು. ಇದನ್ನು ಹೊರತು ಪಡಿಸಿ ಯಾವುದೇ ವೈದ್ಯಕೀಯ ಸೌಲಭ್ಯವನ್ನು ಹೊಂದಿಲ್ಲ. ತಮ್ಮ ವೈದ್ಯಕೀಯ ಆರೈಕೆಗಾಗಿ ಸೇನೆಯು ಕೈಗೊಂಡ ಕಾರ್ಯಕ್ಕೆ ಗ್ರಾಮಸ್ಥರು ಅಭಿನಂದಿಸಿದರು.