ETV Bharat / bharat

Barmer Accident: ರಾಜಸ್ಥಾನದಲ್ಲಿ ಬಸ್​- ಟ್ರಕ್‌​ ಮಧ್ಯೆ ಭೀಕರ ಅಪಘಾತ, 12 ಮಂದಿ ಸಾವು - ಗಾಯಾಳುಗಳು ಆಸ್ಪತ್ರೆಗೆ

Barmer Accident: ರಾಜಸ್ಥಾನದ ಬಾರ್ಮೆರ್‌ನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 12 ಮಂದಿ ಸಾವಿಗೀಡಾಗಿರುವ ಬಗ್ಗೆ ಮಾಹಿತಿ ದೊರೆತಿದೆ. ವೇಗವಾಗಿ ಬಂದ ಟ್ರಕ್‌​ ಬಸ್​ಗೆ ಡಿಕ್ಕಿ ಹೊಡೆದ ಪರಿಣಾಮ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ.

head on collision between bus and tanker
ಬೆಂಕಿಗೆ ಹೊತ್ತಿ ಉರಿದ ಬಸ್​
author img

By

Published : Nov 10, 2021, 2:44 PM IST

Updated : Nov 10, 2021, 3:22 PM IST

ಬಾರ್ಮೆರ್​(ರಾಜಸ್ಥಾನ): ಬಾರ್ಮೆರ್​​-ಜೋಧ್​ಪುರ ಹೆದ್ದಾರಿಯಲ್ಲಿ (Barmer-Jodhpur national highway) ಬಸ್​ ಮತ್ತು ಟ್ರಕ್​ ಮಧ್ಯೆ ಭೀಕರ ರಸ್ತೆ ಅಪಘಾತ ನಡೆದಿದ್ದು, ಇಡೀ ಬಸ್​ ಹೊತ್ತಿ ಉರಿದ ಘಟನೆ ನಡೆದಿದೆ. ಪರಿಣಾಮ, 12 ಮಂದಿ ದಾರುಣವಾಗಿ ಸಾವಿಗೀಡಾಗಿದ್ದಾರೆ.

ಈ ಘಟನೆಯಲ್ಲಿ ಗಾಯಗೊಂಡವರನ್ನು ಖಾಸಗಿ ವಾಹನಗಳ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್​ಗೆ ಹೊತ್ತಿಕೊಂಡ ಬೆಂಕಿ ನಂದಿಸಲು ಅಲ್ಲಿ ನೆರೆದಿದ್ದ ಜನರು ಹರಸಾಹಸಪಟ್ಟರು.

ಬಲೋತ್ರಾದಿಂದ ಹೊರಟಿದ್ದ ಬಸ್​ನಲ್ಲಿ 25 ಜನರು ಪ್ರಯಾಣಿಸುತ್ತಿದ್ದರು. ಟ್ರಕ್​ ಬಸ್​ ಎದುರಿನಿಂದ ಬಂದು ಡಿಕ್ಕಿ ಹೊಡೆಯಿತು. ಈ ವೇಳೆ ಬಸ್​ಗೆ ಬೆಂಕಿ ಹೊತ್ತಿಕೊಂಡಿತು. ನೋಡನೋಡುತ್ತಿದ್ದಂತೆಯೆ ಇಡೀ ಬಸ್​ಗೆ ಬೆಂಕಿ ಆವರಿಸಿಕೊಂಡಿತು ಎಂದು ಬಸ್​ನಲ್ಲಿ ಪ್ರಯಾಣಿಸುತ್ತಿದ್ದವರೊಬ್ಬರು ತಿಳಿಸಿದ್ದಾರೆ.

ಘಟನೆಯಲ್ಲಿ 10 ಜನರನ್ನು ರಕ್ಷಿಸಲಾಗಿದೆ. ಹೆದ್ದಾರಿಯಲ್ಲಿ ಭಾರೀ ವಾಹನ ದಟ್ಟಣೆ ಉಂಟಾಗಿದೆ.

Last Updated : Nov 10, 2021, 3:22 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.