ಅಜಿತಸಿಂಗ್‌ನಗರ(ಆಂಧ್ರ ಪ್ರದೇಶ): ಗ್ರಾಹಕನಾಗಿ ಅಂಗಡಿಗೆ ತೆರಳುತ್ತಿದ್ದ ವ್ಯಕ್ತಿಯೋರ್ವ ಶಾಪ್ನ ಮಾಲೀಕರಾದ ಮಹಿಳೆಯೊಂದಿಗೆ ಸಲುಗೆ ಬೆಳೆಸಿ, ನಂತರ ನಿರಂತರ ಅತ್ಯಾಚಾರ ಎಸಗಿರುವ ಆರೋಪ ಪ್ರಕರಣವೊಂದು ಆಂಧ್ರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಮಹಿಳೆ ಸ್ನಾನ ಮಾಡುತ್ತಿದ್ದ ವೇಳೆ ಆಕೆಯ ಖಾಸಗಿ ಚಿತ್ರಗಳನ್ನು ಸೆರೆ ಹಿಡಿದು ಆಕೆಗೆ ಬೆದರಿಕೆ ಹಾಕಿ ಅತ್ಯಾಚಾರ ಎಸಗಿದ್ದಲ್ಲದೇ, ಲಕ್ಷಾಂತರ ರೂಪಾಯಿ ವಸೂಲಿ ಮಾಡಿದ್ದನಂತೆ. ಆತನ ಕಿರುಕುಳಕ್ಕೆ ಬೇಸತ್ತ ಸಂತ್ರಸ್ತೆಯು ತನ್ನ ಕುಟುಂಬ ಸದಸ್ಯರ ಸಹಾಯದಿಂದ ವಿಜಯವಾಡ ನಗರ ಪೊಲೀಸರಿಗೆ ದೂರು ನೀಡಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಮಹಿಳೆ ಮನೆಯಲ್ಲಿ ಸ್ನಾನ ಮಾಡುತ್ತಿದ್ದಾಗ ರಹಸ್ಯವಾಗಿ ಚಿತ್ರ ಸೆರೆ ಹಿಡಿದಿದ್ದಾನೆ.. ವಿಶಾಲಾಂಧ್ರ ಕಾಲೋನಿಯ ಪುಟ್ಟ ಸುಭಾಷ್ (45) ಬಂಧಿತ ಆರೋಪಿ. ಆರೋಪಿ ಸುಭಾಷ್ನು ಖಾಸಗಿ ಕಂಪನಿಯಲ್ಲಿ ಪೈಪ್ಲೈನ್ ಕೆಲಸ ಮಾಡುತ್ತಿದ್ದನು. ದೂರು ನೀಡಿದ್ದ ರಾಜೀವ್‌ನಗರದ 35 ವರ್ಷ ವಯಸ್ಸಿನ ಮಹಿಳೆ ಶಾಂತಿ ನಗರದಲ್ಲಿ ಪತಿಯೊಂದಿಗೆ ದಿನಸಿ ಅಂಗಡಿ ನಡೆಸುತ್ತಿದ್ದರು. ಆರೋಪಿ ಸುಭಾಷ್ ಅಂಗಡಿಯಲ್ಲಿ ವಸ್ತುಗಳನ್ನು ಖರೀದಿಸಿ ಫೋನ್ ಪೇ ಮತ್ತು ಪೇಟಿಎಂ ಮೂಲಕ ಹಲವು ಬಾರಿ ನಗದು ಪಾವತಿ ಮಾಡುವ ಸಂದರ್ಭದಲ್ಲಿ ಸುಭಾಷ್ ಗೆ ಮಹಿಳೆಯ ಫೋನ್ ನಂಬರ್ ಗೊತ್ತಾಗಿತ್ತು. ಆದ್ದರಿಂದ ವಸ್ತುಗಳನ್ನು ಕೊಳ್ಳಲು ಹೋದಾಗಲೆಲ್ಲ ಮಹಿಳೆಯನ್ನು ಆರೋಪಿ ಮಾತನಾಡಿಸುತ್ತಿದ್ದನು. ಆಕೆಯೊಂದಿಗೆ ಸಲುಗೆ ಬೆಳೆಸಿಕೊಂಡ ಆರೋಪಿ ಅದೊಂದು ದಿನ ಮಹಿಳೆ ರಾಜೀವ್‌ನಗರದ ಮನೆಯಲ್ಲಿ ಸ್ನಾನ ಮಾಡುತ್ತಿದ್ದಾಗ ರಹಸ್ಯವಾಗಿ ಖಾಸಗಿ ಚಿತ್ರಗಳನ್ನು ಸೆರೆ ಹಿಡಿದಿದ್ದಾನೆ ಎಂದು ಸಿಐ ಕಘ್ಯಾ ಶ್ರೀನಿವಾಸ್ ರಾವ್ ತಿಳಿಸಿದ್ದಾರೆ.
ತಾನು ಸೆರೆ ಹಿಡಿದಿದ್ದ ಚಿತ್ರ ತೋರಿಸಿ ಬ್ಲ್ಯಾಕ್ಮೇಲ್.. ಮಹಿಳೆಯ ಸ್ನಾನ ಮಾಡುವ ಖಾಸಗಿ ಚಿತ್ರಗಳನ್ನು ಆಕೆಗೆ ತೋರಿಸಿ, ತನ್ನ ಮಾತು ಕೇಳದಿದ್ದರೆ ಹೊರಗಿನವರಿಗೆ ಫೋಟೋಗಳನ್ನು ತೋರಿಸುವುದಾಗಿ ಆರೋಪಿ ಸುಭಾಷ್ ಬೆದರಿಕೆ ಹಾಕಿದ್ದಾನೆ. ಇದರಿಂದ ಹೆದರಿದ ಮಹಿಳೆ ಮೇಲೆ ಬಲವಂತವಾಗಿ ಅತ್ಯಾಚಾರ ಎಸಗಿದ್ದಾನೆ. ಆ ನಂತರವೂ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆಕೆಯ ಮೇಲೆ ಹಲವಾರು ಬಾರಿ ದುಷ್ಕೃತ್ಯ ಎಸಗಿದ್ದಾನೆ. ನಂತರ ಆಕೆಗೆ ಬೆದರಿಸಿ ರೂ.16 ಲಕ್ಷ ನಗದನ್ನು ತೆಗೆದುಕೊಂಡಿದ್ದಾನೆ. ತನ್ನ ಹಣ ವಾಪಸ್ ಕೊಡು ಎಂದು ಮಹಿಳೆ ಕೇಳಿದಾಗ ಆಕೆಯನ್ನು ಥಳಿಸಿದ್ದಾನೆ. ಅಲ್ಲದೆ, ಒಂದು ವರ್ಷದಿಂದ ನಿರಂತರವಾಗಿ ಸಂತ್ರಸ್ತೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ಶ್ರೀನಿವಾಸ್ ರಾವ್ ಪ್ರಕರಣದ ಕುರಿತು ಮಾಹಿತಿ ನೀಡಿದ್ದಾರೆ.
ಕಾಮುಕನ ಕಿರುಕುಳಕ್ಕೆ ಬೇಸತ್ತು ಕುಟುಂಬಸ್ಥರಿಗೆ ತಿಳಿಸಿದ ಮಹಿಳೆ.. ಕಾಮುಕನ ಕಿರುಕುಳಕ್ಕೆ ಒಳಗಾದ ಸಂತ್ರಸ್ತೆ ಬೇಸತ್ತು ತನ್ನ ಕುಟುಂಬ ಸದಸ್ಯರಿಗೆ ತಿಳಿಸಿದ್ದಾಳೆ. ಅವರ ಸಹಾಯದಿಂದ ಪೊಲೀಸರು ಸುಭಾಷ್ ವಿರುದ್ಧ ಬುಧವಾರ ಪ್ರಕರಣ ದಾಖಲಿಸಿದ್ದಾರೆ. ಗುರುವಾರ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿ ಸುಭಾಷ್ನನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಿಐ ಶ್ರೀನಿವಾಸರಾವ್ ತಿಳಿಸಿದ್ದಾರೆ.
ಇದನ್ನೂಓದಿ:ಬೈಕ್‌ಗಳ ಕಳ್ಳತನ ಪ್ರಕರಣ : ಮೂವರು ಕಳ್ಳರ ಬಂಧನ, ಕದ್ದ ವಾಹನ ಖರೀದಿ ಮಾಡಿದ ಮೂವರು ವಶಕ್ಕೆ