ETV Bharat / bharat

ಬಸ್ ಚಲಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ .. 45 ಜೀವಗಳನ್ನು ಉಳಿಸಿ ಸಾವನ್ನಪ್ಪಿದ ಚಾಲಕ - ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ

ಬಸ್ ಚಲಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ - 45 ಜನರನ್ನು ಉಳಿಸಿದ ನಂತರ ಸಾವನ್ನಪ್ಪಿದ ಚಾಲಕ- ತೆಲಂಗಾಣದಲ್ಲಿ ಪ್ರಕರಣ

He breathed his last after saving 45 lives  driver died of a heart attack  died of a heart attack while driving the bus  Bus accident in Telangana  ಬಸ್ ಚಲಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ  45 ಜೀವಗಳನ್ನು ಉಳಿಸಿ ಸಾವನ್ನಪ್ಪಿದ ಚಾಲಕ  ಜೋಧಪುರದಲ್ಲಿ ಭೀಕರ ರಸ್ತೆ ಅಪಘಾತ  ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ  ಘಟನೆಯಲ್ಲಿ ಯಾವುದೇ ಯಾತ್ರಾರ್ಥಿಗಳಿಗೆ ಗಾಯಗಳಾಗಿಲ್ಲ
45 ಜೀವಗಳನ್ನು ಉಳಿಸಿ ಸಾವನ್ನಪ್ಪಿದ ಚಾಲಕ
author img

By

Published : Jan 7, 2023, 2:30 PM IST

ವೆಂಕಟಾಪುರ(ತೆಲಂಗಾಣ): ಮುಳುಗು ಜಿಲ್ಲೆಯ ವೆಂಕಟಾಪುರ ತಾಲೂಕಿನ ಅಂಕಣ್ಣಗುಡೆಂ ಮತ್ತು ಸುಂದರಯ್ಯ ಕಾಲೋನಿ ನಡುವೆ ಶುಕ್ರವಾರ ಖಾಸಗಿ ಬಸ್ ಚಾಲಕರೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಸಾವಿನ ಅಂಚಿನಲ್ಲಿ ಎದುರಿಗೆ ಬರುತ್ತಿದ್ದ ಮರಳು ಲಾರಿಗಳನ್ನು ತಪ್ಪಿಸಿ ಬಸ್ಸಿನಲ್ಲಿದ್ದ 45 ಯಾತ್ರಾರ್ಥಿಗಳ ಪ್ರಾಣ ಉಳಿಸಿದ್ದಾರೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಉತ್ತರ ಬ್ರಾಹ್ಮಣಪಲ್ಲಿ ತಾಲೂಕಿನ 45 ಜನರು ಶುಕ್ರವಾರ ತಮಿಳುನಾಡಿನಿಂದ ಹಿಂದಿರುಗುವಾಗ ಭದ್ರಾಚಲಂನಲ್ಲಿರುವ ಸೀತಾರಾಮಚಂದ್ರ ಸ್ವಾಮಿಯ ದರ್ಶನ ಪಡೆದರು. ಅಲ್ಲಿಂದ ಭದ್ರಾಚಲಂ-ವೆಂಕಟಪುರಂ ಮಾರ್ಗದಲ್ಲಿನ ಯಾದಾದ್ರಿಗೆ ತೆರಳಲು ಪ್ರಯಾಣ ಬೆಳೆಸಿದೆವು ಎಂಬುದು ಪ್ರತ್ಯಕ್ಷದರ್ಶಿಗಳ ಮಾತಾಗಿದೆ.

ಸ್ವಲ್ಪ ದೂರ ಪ್ರಯಾಣಿಸಿದ ಬಳಿ ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಪೊನ್ನೈ ಗ್ರಾಮದ ಚಾಲಕ ಜೆ.ದೇವೀರಕ್ಕಂ (57) ಅವರ ಎದೆಯಲ್ಲಿ ನೋವು ಕಾಣಿಸಿಕೊಂಡಿದೆ. ಕೂಡಲೇ ಅವರು ಸ್ವಲ್ಪ ಹೊತ್ತು ಬಸ್ ನಿಲ್ಲಿಸಿ ಚೇತರಿಸಿಕೊಂಡರು. ಬಳಿಕ ನಾವು ಮತ್ತೆ ಅಲ್ಲಿಂದ ಪ್ರಯಾಣ ಬೆಳೆಸಿದವು. ಸ್ವಲ್ಪ ದೂರದ ಬಳಿಕ ದೇವೀರಕ್ಕಂ ಅವರಿಗೆ ಹೃದಯಾಘಾತ ಸಂಭವಿಸಿದೆ. ಆದ್ರೂ ಸಹಿತ ಅವರು ಎದುರಿಗೆ ಬರುತ್ತಿದ್ದ ಮರುಳು ತುಂಬಿದ ಲಾರಿಗಳನ್ನು ತಪ್ಪಿಸಿ ರಸ್ತೆ ಬದಿಯ ಬಸ್‌ಗೆ ಹೃದಯಾಘಾತವಾದಾಗ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ಬಸ್​ನ್ನು ನಿಲ್ಲಿಸಿದ್ದಾರೆ. ಆದ್ರೆ ಚಾಲಕನ ಸೀಟಿನಲ್ಲಿಯೇ ದೇವೀರಕ್ಕಂ ಕುಸಿದು ಬಿದ್ದು ಸಾವನ್ನಪ್ಪಿದ್ದರು ಎಂದರು.

ಈ ಘಟನೆಯಲ್ಲಿ ಯಾವುದೇ ಯಾತ್ರಾರ್ಥಿಗಳಿಗೆ ಗಾಯಗಳಾಗಿಲ್ಲ. ಮರಳು ಲಾರಿಗಳು ಅಡ್ಡಾದಿಡ್ಡಿಯಾಗಿ ನುಗ್ಗಿದ್ದರಿಂದ ಯಾತ್ರಾರ್ಥಿಗಳು ಗಾಬರಿ ಪಡುವಂತಾಯಿತು. ಆದ್ರೂ ಸಹ ಚಾಲಕ ದೇವೀರಕ್ಕಂ ಅವರು ನಮ್ಮೆಲ್ಲರ ಪ್ರಾಣ ಉಳಿಸಿ ಅವರು ಪ್ರಾಣ ಬಿಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳ ಮಾತಾಗಿದೆ.

ಜೋಧಪುರದಲ್ಲೂ ಭೀಕರ ರಸ್ತೆ ಅಪಘಾತ: ಬಸ್ ಮತ್ತು ಟ್ರಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಐವರು ಸಾವನ್ನಪ್ಪಿದ್ದು, ಸುಮಾರು 32 ಮಂದಿ ಗಾಯಗೊಂಡ ಘಟನೆ ರಾಜಸ್ಥಾನದ ಜೋಧಪುರದಲ್ಲಿ ನಡೆದಿದೆ. ಈ ಘಟನೆಯ ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಗ್ರಾಮಸ್ಥರು ಬಸ್‌ನಲ್ಲಿ ಸಿಲುಕಿದ್ದ ಪ್ರಯಾಣಿಕರನ್ನು ರಕ್ಷಿಸಿ, ಆಸ್ಪತ್ರೆಗೆ ಸಾಗಿಸಿದ್ದಾರೆ. ಅಲ್ಲದೇ, ಜಿಲ್ಲಾಧಿಕಾರಿ ಹಿಮಾಂಶು ಗುಪ್ತಾ ಮತ್ತು ಪೊಲೀಸ್​ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದರು. ಇತ್ತ, ಸಿಎಂ ಅಶೋಕ್​ ಗೆಹ್ಲೋಟ್​, ಶಾಸಕರಾದ ಕಿಷ್ಣರಾಮ್ ವಿಷ್ಣೋಯ್, ದಿವ್ಯಾ ಮಡೆರ್ನಾ ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.

ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ: ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮಹಿಳೆಯರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ತಡರಾತ್ರಿ ಕೆ.ಆರ್.ಪುರಂನ ಆರ್.ಟಿ.ಒ ಕಚೇರಿ ಮುಂಭಾಗದಲ್ಲಿ ನಡೆದಿದೆ. ಅತಿವೇಗದಲ್ಲಿ ಬಂದ ಕಾರೊಂದು ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರು ಫಾಝಿಲಾ ಹಾಗೂ ತಸೀನಾ ಎಂದು ಗುರುತಿಸಲಾಗಿದೆ.

ಕೆ.ಆರ್ ಪುರಂ ಮಾರ್ಗವಾಗಿ ಸಾಗುತ್ತಿದ್ದ ಆಟೋದಲ್ಲಿ ಚಾಲಕ ಖಾಲೀದ್, ಆತನ ಪತ್ನಿ ತಾಸೀನಾ, ಫಾಝಿಲಾ ಹಾಗೂ ಇಬ್ಬರು ಮಕ್ಕಳು ತೆರಳುತ್ತಿದ್ದರು. ಈ ವೇಳೆ ಅತೀ ವೇಗದಲ್ಲಿ ಬಂದ ಕಪ್ಪು ಬಣ್ಣದ ಕಾರೊಂದು ಏಕಾಏಕಿ ಆಟೋಕ್ಕೆ ಡಿಕ್ಕಿಯಾಗಿದೆ. ಪರಿಣಾಮ ಸ್ಥಳದಲ್ಲೇ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದು, ಎರಡು ವರ್ಷದ ಒಂದು ಮಗುವಿಗೆ ಗಂಭೀರ ಗಾಯಗಳಾಗಿವೆ. ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

'ರಾತ್ರಿ 9:20ರ ಸುಮಾರಿಗೆ ಈ ಘಟನೆ ನಡೆದಿದ್ದು, ಕಪ್ಪು ಬಣ್ಣದ ಇನ್ನೋವಾ ಕಾರು ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಇಬ್ಬರು ಮಹಿಳೆಯರು ಸ್ಪಾಟ್ ಡೆತ್ ಆಗಿದ್ದಾರೆ. ಒಂದು ಮಗುವಿಗೆ ಗಂಭೀರ ಗಾಯವಾಗಿದೆ. ಕಾರು ಚಾಲಕ ಅಪಘಾತವೆಸಗಿ ಪರಾರಿಯಾಗಿದ್ದಾನೆ' ಎಂದು ಪ್ರತ್ಯಕ್ಷದರ್ಶಿ ಸೈಫ್ ಎಂಬುವರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಕೆ.ಆರ್ ಪುರಂ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ನಾಪತ್ತೆಯಾಗಿರುವ ಕಾರು ಚಾಲಕನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

ಓದಿ: ವಿಮಾನದಲ್ಲಿ 10 ಗಂಟೆಯಲ್ಲಿ 2 ಬಾರಿ ಹೃದಯಾಘಾತ.. ಪ್ರಯಾಣಿಕನ ಜೀವ ಉಳಿಸಿದ ಭಾರತೀಯ ಮೂಲದ ಬ್ರಿಟನ್​ ವೈದ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.