ಚೆನ್ನೈ (ತಮಿಳುನಾಡು) : ಚೆನ್ನೈನ ಟಿ.ನಗರ ಶಾಖೆಯಲ್ಲಿರುವ ಹೆಚ್‌ಡಿಎಫ್‌ಸಿ ಬ್ಯಾಂಕ್ ತನ್ನ 100 ಗ್ರಾಹಕರ ಖಾತೆಗೆ ತಪ್ಪಾಗಿ ತಲಾ 13 ಕೋಟಿ ರೂಪಾಯಿ ಜಮಾ ಮಾಡಿರುವ ಅಚ್ಚರಿಯ ಘಟನೆ ಬೆಳಕಿಗೆ ಬಂದಿದೆ. ಅಪಾರ ಪ್ರಮಾಣದ ಹಣವನ್ನು ಸ್ವೀಕರಿಸಿದ ಗ್ರಾಹಕರು ಅಪರಾಧ ವಿಭಾಗದ ಪೊಲೀಸರು ಮತ್ತು ಬ್ಯಾಂಕ್ ವಂಚನೆ ಘಟಕಕ್ಕೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಗ್ರಾಹಕರ ಖಾತೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ತನಿಖೆ ನಡೆಸುತ್ತಿದ್ದಾರೆ.
ಬ್ಯಾಂಕ್ ಸರ್ವರ್ ಹ್ಯಾಕ್ ಮಾಡಿ ಹಣ ವರ್ಗಾವಣೆ ಮಾಡಲಾಗಿದೆಯೇ ಎಂಬ ರೀತಿಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದರೂ, ಇದುವರೆಗೆ ಹೆಚ್‌ಡಿಎಫ್‌ಸಿ ಕಡೆಯಿಂದ ಯಾವುದೇ ದೂರು ಅಥವಾ ವಿವರಣೆ ನೀಡಿಲ್ಲವಂತೆ.
ಇದನ್ನೂ ಓದಿ: ಶೈಕ್ಷಣಿಕ ವರ್ಷದಿಂದ ಶಾಲಾ ಕಾಲೇಜುಗಳಲ್ಲಿ ಪಠ್ಯವಾಗಿ ಯೋಗ: ಸಿಎಂ