ETV Bharat / bharat

ಧನ್ಬಾದ್​ ನ್ಯಾಯಾಧೀಶರ ಕೊಲೆ ಪ್ರಕರಣ; CBI ನಿರ್ದೇಶಕರಿಗೆ ಜಾರ್ಖಂಡ್‌ ಹೈಕೋರ್ಟ್‌ ಸಮನ್ಸ್‌ - ಸಿಬಿಐ

ಧನ್ಬಾದ್​ ನ್ಯಾಯಾಧೀಶರಾಗಿದ್ದ ಉತ್ತಮ್‌ ಆನಂದ್‌ ಕೊಲೆ ಪ್ರಕರಣದಲ್ಲಿ ಸರಿಯಾದ ರೀತಿಯಲ್ಲಿ ಚಾರ್ಜ್ ಶೀಟ್ ಸಲ್ಲಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಜಾರ್ಖಂಡ್ ಹೈಕೋರ್ಟ್ ಸಿಬಿಐ(CBI) ಅನ್ನು ತರಾಟೆಗೆ ತೆಗೆದುಕೊಂಡಿದೆ.

HC summons CBI director to appear in the Dhanbad judge murder case
ಧನ್ಬಾದ್​ ನ್ಯಾಯಾಧೀಶರ ಕೊಲೆ ಪ್ರಕರಣ; ಸಿಬಿಐ ನಿರ್ದೇಶಕನಿಗೆ ಜಾರ್ಖಂಡ್‌ ಹೈಕೋರ್ಟ್‌ ಸಮನ್ಸ್‌
author img

By

Published : Oct 23, 2021, 8:02 AM IST

ರಾಂಚಿ(ಜಾರ್ಖಂಡ್‌): ಧನ್ಬಾದ್​ ನ್ಯಾಯಾಧೀಶರ ಕೊಲೆ ಪ್ರಕರಣದಲ್ಲಿ ಸ್ಟೀರಿಯೊಟೈಪ್ ಚಾರ್ಜ್ ಶೀಟ್ ಸಲ್ಲಿಸಿದ್ದಕ್ಕಾಗಿ ಜಾರ್ಖಂಡ್ ಹೈಕೋರ್ಟ್ ನಿನ್ನೆ(ಶುಕ್ರವಾರ) ಕೇಂದ್ರೀಯ ತನಿಖಾ ದಳ(CBI)ವನ್ನು ತರಾಟೆಗೆ ತೆಗೆದುಕೊಂಡಿದೆ.

ಪ್ರಕರಣದಲ್ಲಿ ಹಾಜರಾಗುವಂತೆ ಸಿಬಿಐ ನಿರ್ದೇಶಕರಿಗೆ ಸಮನ್ಸ್ ನೀಡಿರುವ ಹೈಕೋರ್ಟ್, ತನಿಖೆಯನ್ನು ಪೂರ್ಣಗೊಳಿಸುವಾಗ ಮತ್ತು ಚಾರ್ಜ್ ಶೀಟ್ ಸಲ್ಲಿಸುವಾಗ ತನಿಖಾ ದಳ ಬಾಬುಸ್ (ಕ್ಲರ್ಕ್) ಗಳಂತೆ ಕೆಲಸ ಮಾಡಿದಂತೆ ತೋರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ಮುಖ್ಯ ನ್ಯಾಯಮೂರ್ತಿ ಡಾ. ರವಿ ರಂಜನ್ ಮತ್ತು ನ್ಯಾಯಮೂರ್ತಿ ಸುಜಿತ್ ನಾರಾಯಣ್ ಪ್ರಸಾದ್ ಅವರ ವಿಭಾಗೀಯ ಪೀಠ ಧನ್ಬಾದ್ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಉತ್ತಮ್ ಆನಂದ್ ಕೊಲೆ ಪ್ರಕರಣದ ಅರ್ಜಿ ಮೇಲ್ವಿಚಾರಣೆ ವೇಳೆ ಸಿಬಿಐ ತನಿಖೆಯನ್ನು ಬಾಬು-ಡೋಮ್ ಎಂದು ಉಲ್ಲೇಖಿಸಿದೆ. ಸರಿಯಾದ ರೀತಿಯಲ್ಲಿ ಚಾರ್ಜ್ ಶೀಟ್ ಸಲ್ಲಿಸಲಾಗಿಲ್ಲ ಎಂದು ಹೇಳಿದೆ.

ಪ್ರಕರಣದಲ್ಲಿ ಸಿಬಿಐ ನಿರ್ದೇಶಕರು ಕೋರ್ಟ್‌ಗೆ ಹಾಜರಾಗುವಂತೆ ನ್ಯಾಯಮೂರ್ತಿಗಳು ಆದೇಶಿಸಿದ್ದು, ವಾಡಿಕೆಯ ರೀತಿಯಲ್ಲಿ ಕೇವಲ ಔಪಚಾರಿಕತೆಯನ್ನು ಪೂರ್ಣಗೊಳಿಸಲು ಚಾರ್ಜ್‌ಶೀಟ್‌ ಸಲ್ಲಿಸಲಾಗಿದೆ. ಕೊಲೆ ಆರೋಪದ ಮೇಲೆ ಬಳಸಲಾಗುವ ಸೆಕ್ಷನ್ 302 ಐಪಿಸಿ ಅಡಿಯಲ್ಲಿ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಆರೋಪಿಯ ವಿರುದ್ಧ ಅಪರಾಧ ಸಾಬೀತು ಮಾಡಲು ದೋಷಾರೋಪ ಪಟ್ಟಿಯಲ್ಲಿ ಯಾವುದನ್ನೂ ದೃಢೀಕರಿಸಲಾಗಿಲ್ಲ ಎಂದು ಪೀಠ ಹೇಳಿದೆ.

ತನಿಖೆ ಪೂರ್ಣಪ್ರಮಾಣದಲ್ಲಿ ಮುಂದುವರಿದಿದ್ದು, ಧನ್ಬಾದ್‌ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಉತ್ತಮ್‌ ಆನಂದ್ ಹತ್ಯೆ ಸಂಬಂಧ ಇಬ್ಬರು ಆರೋಪಿಗಳ ಸಂಪರ್ಕವನ್ನು ಅನ್ವೇಷಿಸಲಾಗುತ್ತಿದೆ ಎಂದು ಸಿಬಿಐ ಈ ಹಿಂದೆ ನ್ಯಾಯಾಲಯಕ್ಕೆ ಭರವಸೆ ನೀಡಿತ್ತು. ಆದರೆ ಚಾರ್ಜ್ ಶೀಟ್ ಸ್ಪಷ್ಟವಾಗಿಲ್ಲ ಎಂಬುದನ್ನ ನಿನ್ನೆ ನಡೆದ ವಿಚಾರಣೆ ವೇಳೆ ನ್ಯಾಯಮೂರ್ತಿಗಳು ಗಮನಿಸಿದ್ದಾರೆ.

ಜುಲೈ 28ರಂದು ಧನ್ಬಾದ್‌ನ ರಣಧೀರ್‌ ವರ್ಮಾ ಚೌಕ್‌ ಬಲಿ ನ್ಯಾ.ಉತ್ತಮ್ ಆನಂದ್ ವಾಕಿಂಗ್‌ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಆಟೋ ನ್ಯಾಯಾಧೀಶರಿಗೆ ಉದ್ದೇಶಪೂರಕವಾಗಿಯೇ ಡಿಕ್ಕಿ ಹೊಡೆದು ಹತ್ಯೆ ಮಾಡಲಾಗಿತ್ತು. ಕೃತ್ಯದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.