ETV Bharat / bharat

ಪ್ರಧಾನಿ ಮೋದಿ ಪದವಿ ಮಾಹಿತಿ ನೀಡಲು ಹೇಳಿದ್ದ ಆದೇಶ ರದ್ದು: ಕೇಜ್ರಿವಾಲ್​ಗೆ 25 ಸಾವಿರ ದಂಡ ವಿಧಿಸಿದ ಹೈಕೋರ್ಟ್​

ಪ್ರಧಾನಿ ಮೋದಿ ಅವರ ಪದವಿ ಮಾಹಿತಿ ನೀಡಲು ಸೂಚಿಸಿದ್ದ ಕೇಂದ್ರ ಮಾಹಿತಿ ಆಯೋಗದ ಆದೇಶವನ್ನು ಗುಜರಾತ್​ ಹೈಕೋರ್ಟ್​ ರದ್ದು ಪಡಿಸಿ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ದಂಡ ಹಾಕಲಾಗಿದೆ.

hc-quashes-cic-order-asking information-on-pm-modis-degree
ಪ್ರಧಾನಿ ಮೋದಿ ಪದವಿ ಮಾಹಿತಿ ನೀಡಲು ಹೇಳಿದ್ದ ಆದೇಶ ರದ್ದು: ಕೇಜ್ರಿವಾಲ್​ಗೆ 25 ಸಾವಿರ ದಂಡ ವಿಧಿಸಿದ ಹೈಕೋರ್ಟ್​
author img

By

Published : Mar 31, 2023, 6:23 PM IST

Updated : Mar 31, 2023, 6:58 PM IST

ಅಹಮದಾಬಾದ್ (ಗುಜರಾತ್​): ಪ್ರಧಾನಿ ನರೇಂದ್ರ ಮೋದಿ ಅವರ ಪದವಿಯ ಮಾಹಿತಿಯನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ನೀಡುವಂತೆ ಗುಜರಾತ್ ವಿಶ್ವವಿದ್ಯಾಲಯಕ್ಕೆ ಸೂಚಿಸಿದ್ದ ಕೇಂದ್ರ ಮಾಹಿತಿ ಆಯೋಗದ ಆದೇಶವನ್ನು ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಇದೇ ವೇಳೆ ಕೇಜ್ರಿವಾಲ್ ಅವರಿಗೆ 25 ಸಾವಿರ ರೂಪಾಯಿಗಳ ದಂಡವನ್ನು ಉಚ್ಛ ನ್ಯಾಯಾಲಯ ವಿಧಿಸಿದೆ.

ಏನಿದು ಪ್ರಕರಣ?: 2016ರ ಏಪ್ರಿಲ್‌ನಲ್ಲಿ ಅಂದಿನ ಕೇಂದ್ರ ಮಾಹಿತಿ ಆಯೋಗ (ಸಿಐಸಿ)ದ ಆಯುಕ್ತ ಎಂ.ಶ್ರೀಧರ್ ಆಚಾರ್ಯುಲು ಅವರು ದೆಹಲಿ ವಿಶ್ವವಿದ್ಯಾಲಯ ಮತ್ತು ಗುಜರಾತ್ ವಿಶ್ವವಿದ್ಯಾಲಯಕ್ಕೆ ಕೇಜ್ರಿವಾಲ್ ಅವರಿಗೆ ಮೋದಿ ಪಡೆದ ಪದವಿಗಳ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದ್ದರು. ಇದಾದ ಮೂರು ತಿಂಗಳ ನಂತರ ಸಿಐಸಿ ಆದೇಶದ ವಿರುದ್ಧ ಗುಜರಾತ್ ವಿಶ್ವವಿದ್ಯಾಲಯವು ಹೈಕೋರ್ಟ್​ ಮೊರೆ ಹೋಗಿತ್ತು. ಆಗ ಈ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು.

  • क्या देश को ये जानने का भी अधिकार नहीं है कि उनके PM कितना पढ़े हैं? कोर्ट में इन्होंने डिग्री दिखाए जाने का ज़बरदस्त विरोध किया। क्यों? और उनकी डिग्री देखने की माँग करने वालों पर जुर्माना लगा दिया जायेगा? ये क्या हो रहा है?

    अनपढ़ या कम पढ़े लिखे PM देश के लिए बेहद ख़तरनाक हैं https://t.co/FtSru6rddI

    — Arvind Kejriwal (@ArvindKejriwal) March 31, 2023 " class="align-text-top noRightClick twitterSection" data=" ">

ಕೇಜ್ರಿವಾಲ್ ಅವರು ಸಿಐಸಿ ಆಯುಕ್ತ ಆಚಾರ್ಯುಲು ಅವರಿಗೆ ಪತ್ರ ಬರೆದ ಒಂದು ದಿನದ ನಂತರ ಸಿಐಸಿ ಆದೇಶ ಹೊರಬಿದ್ದಿತ್ತು. ಈ ಪತ್ರದ ಆಧಾರದಲ್ಲಿ ಆಚಾರ್ಯುಲು ಅವರು ಮೋದಿ ಅವರ ಶೈಕ್ಷಣಿಕ ಅರ್ಹತೆಯ ದಾಖಲೆಗಳನ್ನು ಕೇಜ್ರಿವಾಲ್ ಅವರಿಗೆ ನೀಡುವಂತೆ ಗುಜರಾತ್ ವಿಶ್ವವಿದ್ಯಾಲಯಕ್ಕೆ ಸೂಚಿಸಿದ್ದರು.

ಈ ಹಿಂದಿನ ವಿಚಾರಣೆಗಳ ಸಮಯದಲ್ಲಿ ಗುಜರಾತ್ ವಿಶ್ವವಿದ್ಯಾಲಯವು ಸಿಐಸಿಯ ಆದೇಶವನ್ನು ತೀವ್ರವಾಗಿ ಆಕ್ಷೇಪಿಸಿತ್ತು. ಅಲ್ಲದೇ, ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯಡಿಯಲ್ಲಿ ಯಾರೊಬ್ಬರ ಬಾಲಿಶ ಕುತೂಹಲವು ಸಾರ್ವಜನಿಕ ಹಿತಾಸಕ್ತಿಯಾಗಲು ಸಾಧ್ಯವಿಲ್ಲ ಎಂದು ವಿಶ್ವವಿದ್ಯಾಲಯ ವಾದಿಸಿತ್ತು.

ಫೆಬ್ರವರಿಯಲ್ಲಿ ನಡೆದ ಕೊನೆಯ ವಿಚಾರಣೆಯ ಸಂದರ್ಭದಲ್ಲೂ ವಿಶ್ವವಿದ್ಯಾಲಯದ ಪರವಾಗಿ ವಾದ ಮಾಡಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಪ್ರಧಾನಮಂತ್ರಿ ಪದವಿಗಳ ಬಗ್ಗೆ ಮಾಹಿತಿಯು ಈಗಾಗಲೇ ಸಾರ್ವಜನಿಕ ಡೊಮೇನ್ ಆಗಿದೆ. ವಿಶ್ವವಿದ್ಯಾಲಯವು ಹಿಂದೆ ನಿರ್ದಿಷ್ಟ ದಿನಾಂಕದಂದು ವೆಬ್‌ಸೈಟ್​ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ. ಇದರಲ್ಲಿ ಮುಚ್ಚಿಡಲು ಏನೂ ಇಲ್ಲ ಎಂದು ಹೇಳಿದ್ದರು.

ಮುಂದುವರೆದು, ಆರ್‌ಟಿಐ ಕಾಯ್ದೆಯ ಸೆಕ್ಷನ್ 8ರ ಅಡಿಯಲ್ಲಿ ನೀಡಲಾದ ವಿನಾಯಿತಿಗಳ ಬಗ್ಗೆ ಸುಪ್ರೀಂಕೋರ್ಟ್ ಮತ್ತು ಇತರ ಹೈಕೋರ್ಟ್‌ಗಳ ಕೆಲವು ಹಿಂದಿನ ತೀರ್ಪುಗಳನ್ನು ಸಾಲಿಸಿಟರ್ ಜನರಲ್ ಉಲ್ಲೇಖಿಸಿದ್ದರು. ತಮ್ಮ ಕುತೂಹಲಕ್ಕಾಗಿ ಯಾರೊಬ್ಬರ ವೈಯಕ್ತಿಕ ಮಾಹಿತಿಯನ್ನು ಪಡೆಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು.

ಪ್ರಕರಣದ ವಾದ - ಪ್ರತಿವಾದದ ನಂತರ ಇಂದು ನ್ಯಾಯಮೂರ್ತಿ ಬಿರೇನ್ ವೈಷ್ಣವ್ ನೇತೃತ್ವದ ಪೀಠವು ಕೇಂದ್ರ ಮಾಹಿತಿ ಆಯೋಗದ ಆದೇಶವನ್ನು ರದ್ದುಗೊಳಿಸಿದೆ. ಅಲ್ಲದೇ, ಗುಜರಾತ್ ವಿಶ್ವವಿದ್ಯಾಲಯದ ಮನವಿಗೆ ಅನುಗುಣವಾಗಿ ಕೇಜ್ರಿವಾಲ್ ಅವರು ನಾಲ್ಕು ವಾರಗಳಲ್ಲಿ ಗುಜರಾತ್ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (ಜಿಎಸ್‌ಎಲ್‌ಎಸ್‌ಎ)ಕ್ಕೆ 25,000 ರೂ.ಗಳನ್ನು ಠೇವಣಿ ಮಾಡುವಂತೆ ಸೂಚಿಸಿದೆ.

ಹೈಕೋರ್ಟ್ ತೀರ್ಪಿನ ಬಗ್ಗೆ ಕೇಜ್ರಿವಾಲ್ ಟ್ವೀಟ್​: ಹೈಕೋರ್ಟ್ ತೀರ್ಪಿನ ಬಳಿಕ ಟ್ವೀಟ್​ ಮಾಡಿರುವ ಅರವಿಂದ್​ ಕೇಜ್ರಿವಾಲ್, "ಪ್ರಧಾನಿ ಎಷ್ಟು ಓದಿದ್ದಾರೆ ಎಂದು ತಿಳಿದುಕೊಳ್ಳುವ ಹಕ್ಕು ದೇಶಕ್ಕೆ ಇಲ್ಲವೇ?, ತಮ್ಮ ಪದವಿ ಬಹಿರಂಗಕ್ಕೆ ನ್ಯಾಯಾಲಯದಲ್ಲಿ ತೀವ್ರವಾಗಿ ವಿರೋಧಿಸಿದರು ಏಕೆ?, ಪದವಿಗೆ ಬೇಡಿಕೆ ಇಟ್ಟವರಿಗೆ ದಂಡ ವಿಧಿಸಲಾಗುತ್ತದೆಯೇ?, ಏನಾಗುತ್ತಿದೆ?, ಅನಕ್ಷರಸ್ಥ ಅಥವಾ ಕಡಿಮೆ ವಿದ್ಯಾವಂತ ಪ್ರಧಾನಿ ದೇಶಕ್ಕೆ ತುಂಬಾ ಅಪಾಯಕಾರಿ" ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಸಂಸತ್ ಕಲಾಪಗಳಿಗೆ ನಿರಂತರ ಅಡೆತಡೆ: ಜಗದೀಪ್ ಧನಕರ್ ಬೇಸರ

Last Updated : Mar 31, 2023, 6:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.