ನವದೆಹಲಿ : ಸಹೋದರ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯನ್ನು ರಾಮಾಯಣದಲ್ಲಿ ಬರುವ ಬಹುತಲೆಯ ರಾವಣ ಎಂದು ಬಿಂಬಿಸುವ ಗ್ರಾಫಿಕ್ ಅನ್ನು ಬಿಜೆಪಿ ಹೊರ ತಂದಿರುವುದಕ್ಕೆ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ ಆ್ಯಪ್ನಲ್ಲಿ ಪ್ರಚೋದನಕಾರಿ ಟ್ವೀಟ್‌ಗಳನ್ನು ಪೋಸ್ಟ್ ಮಾಡಿದ್ದಕ್ಕಾಗಿ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ತರಾಟೆಗೆ ತೆಗೆದುಕೊಂಡಿದ್ದಾರೆ.
-
सर्वश्री @narendramodi जी एवं श्री @JPNadda जी! आप राजनीति और बहस-मुबाहसे को गिरावट की कौन-सी मंज़िल तक ले जाना चाहते हैं?
— Priyanka Gandhi Vadra (@priyankagandhi) October 5, 2023 " class="align-text-top noRightClick twitterSection" data="
आपकी पार्टी के आधिकारिक ट्विटर हैंडल से जो हिंसक और उकसाऊ ट्वीट किये जा रहे हैं, क्या उसमें आपकी सहमति है ?
ज़्यादा समय नहीं बीता, आपने शुचिता की क़सम…
">सर्वश्री @narendramodi जी एवं श्री @JPNadda जी! आप राजनीति और बहस-मुबाहसे को गिरावट की कौन-सी मंज़िल तक ले जाना चाहते हैं?
— Priyanka Gandhi Vadra (@priyankagandhi) October 5, 2023
आपकी पार्टी के आधिकारिक ट्विटर हैंडल से जो हिंसक और उकसाऊ ट्वीट किये जा रहे हैं, क्या उसमें आपकी सहमति है ?
ज़्यादा समय नहीं बीता, आपने शुचिता की क़सम…सर्वश्री @narendramodi जी एवं श्री @JPNadda जी! आप राजनीति और बहस-मुबाहसे को गिरावट की कौन-सी मंज़िल तक ले जाना चाहते हैं?
— Priyanka Gandhi Vadra (@priyankagandhi) October 5, 2023
आपकी पार्टी के आधिकारिक ट्विटर हैंडल से जो हिंसक और उकसाऊ ट्वीट किये जा रहे हैं, क्या उसमें आपकी सहमति है ?
ज़्यादा समय नहीं बीता, आपने शुचिता की क़सम…
ಈ ಬಗ್ಗೆ ಪೋಸ್ಟ್ ಮಾಡಿರುವ ಪ್ರಿಯಾಂಕಾ, "ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ನೀವು ರಾಜಕೀಯ ಮತ್ತು ಚರ್ಚೆಯನ್ನು ಯಾವ ಮಟ್ಟಕ್ಕೆ ಅಧೋಗತಿಗೆ ಕೊಂಡೊಯ್ಯಲು ಬಯಸುತ್ತೀರಿ?, ಅಧಿಕೃತ ಟ್ವಿಟರ್‌ನಿಂದ ಪೋಸ್ಟ್ ಮಾಡಲಾಗುತ್ತಿರುವ ಹಿಂಸಾತ್ಮಕ ಮತ್ತು ಪ್ರಚೋದನಕಾರಿ ಟ್ವೀಟ್‌ಗಳನ್ನು ನೀವು ಒಪ್ಪುತ್ತೀರಾ?, ಪ್ರಮಾಣ ವಚನಗಳನ್ನು ಮರೆತಿದ್ದೀರಾ ?, ಬಿಜೆಪಿ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಿರುವ ಈ ಪ್ರಚೋದನಕಾರಿ ಟ್ವೀಟ್‌ಗಳನ್ನು ಹೇಗೆ ಅನುಮೋದಿಸುತ್ತಿದ್ದೀರಿ" ಎಂದು ಕೇಳಿದ್ದಾರೆ.
-
The new age Ravan is here. He is Evil. Anti Dharma. Anti Ram. His aim is to destroy Bharat. pic.twitter.com/AwDKxJpDHB
— BJP (@BJP4India) October 5, 2023 " class="align-text-top noRightClick twitterSection" data="
">The new age Ravan is here. He is Evil. Anti Dharma. Anti Ram. His aim is to destroy Bharat. pic.twitter.com/AwDKxJpDHB
— BJP (@BJP4India) October 5, 2023The new age Ravan is here. He is Evil. Anti Dharma. Anti Ram. His aim is to destroy Bharat. pic.twitter.com/AwDKxJpDHB
— BJP (@BJP4India) October 5, 2023
ಬಿಜೆಪಿ ಟ್ವೀಟ್...: ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿಯು ರಾಹುಲ್ ಗಾಂಧಿ ವಿರುದ್ಧ ಕಟುವಾದ ದಾಳಿಯನ್ನು ಪ್ರಾರಂಭಿಸಿದೆ. ಗುರುವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಪೌರಾಣಿಕ ಪಾತ್ರದಲ್ಲಿ ಬರುವ ರಾವಣ ಎಂದು ಬಿಂಬಿಸುವ ಗ್ರಾಫಿಕ್ ಅನ್ನು ಹಂಚಿಕೊಳ್ಳುವ ಮೂಲಕ ಭಾರತೀಯ ಜನತಾ ಪಕ್ಷ (ಬಿಜೆಪಿ) ತೀವ್ರ ವಾಗ್ದಾಳಿ ನಡೆಸಿತ್ತು.
"ಭಾರತ ಅಪಾಯದಲ್ಲಿದೆ. ಅವನು ದುಷ್ಟ, ಧರ್ಮದ ವಿರೋಧಿ, ರಾಮ ವಿರೋಧಿ. ಅವನ ಗುರಿ ಭಾರತವನ್ನು ನಾಶಮಾಡುವುದು" ಎಂಬ ಶೀರ್ಷಿಕೆ ನೀಡಿ ರಾಹುಲ್ ಫೋಟೋ ಶೇರ್ ಮಾಡಿತ್ತು. ಜೊತೆಗೆ, ಭಾರತ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಬಿಲಿಯನೇರ್ ಹೂಡಿಕೆದಾರ ಜಾರ್ಜ್ ಸೊರೊಸ್‌ಗೆ ಕಾಂಗ್ರೆಸ್ ನಾಯಕನನ್ನು ಲಿಂಕ್ ಮಾಡಲಾಗಿದೆ. ಇದೀಗ ಈ ಗ್ರಾಫಿಕ್ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯನ್ನು ಹುಟ್ಟುಹಾಕಿದ್ದು, ಬೆಂಬಲಿಗರು ಮತ್ತು ವಿಮರ್ಶಕರು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ : ಬೈಕ್ ರಿಪೇರಿ, ಹಮಾಲಿ ಬಳಿಕ ಬಡಿಗನಾದ ರಾಹುಲ್ ಗಾಂಧಿ..ಪೀಠೋಪಕರಣ ತಯಾರಿಸಲು ಯತ್ನ
ಬಿಜೆಪಿಯ ಗ್ರಾಫಿಕ್ಗೆ ಸಂಬಂಧಿಸಿದಂತೆ ಆಡಳಿತ ಪಕ್ಷಕ್ಕೆ ತಿರುಗೇಟು ನೀಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, "ಬಿಜೆಪಿಯ ಅಧಿಕೃತ ಹ್ಯಾಂಡಲ್‌ನಲ್ಲಿ ರಾಹುಲ್ ಗಾಂಧಿಯನ್ನು ರಾವಣನಂತೆ ತೋರಿಸಿರುವ ಗ್ರಾಫಿಕ್ ಹಿಂದಿನ ನಿಜವಾದ ಉದ್ದೇಶವೇನು?, ಈ ಮೂಲಕ ಕಾಂಗ್ರೆಸ್ ಸಂಸದ ಮತ್ತು ಮಾಜಿ ಪಕ್ಷದ ಅಧ್ಯಕ್ಷರ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸಲಾಗುತ್ತಿದೆ. ದ್ವೇಷ ತುಂಬಿದ ವಿಷಯವನ್ನು ಹರಡುವುದು ಸ್ವೀಕಾರಾರ್ಹವಲ್ಲ, ಅತ್ಯಂತ ಅಪಾಯಕಾರಿಯಾಗಿದೆ. ಭಾರತವನ್ನು ವಿಘಟಿಸಲು ಬಯಸಿದ ಶಕ್ತಿಗಳಿಂದ ರಾಹುಲ್ ಗಾಂಧಿಯವರ ತಂದೆ ಮತ್ತು ಅಜ್ಜಿಯನ್ನು ಹತ್ಯೆ ಮಾಡಲಾಗಿದೆ" ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ : ವಿದ್ಯಾರ್ಥಿಗೆ ಕಪಾಳಮೋಕ್ಷ ಮಾಡಿದ ವಿಡಿಯೋ ವೈರಲ್: ದ್ವೇಷ ಹರಡಲು ಬಿಜೆಪಿ ಕಾರಣ ಎಂದ ರಾಹುಲ್, ಪ್ರಿಯಾಂಕಾ