ಹುಲಿ ಕಂಡರೆ ಯಾರಿಗೆ ಭಯವಿಲ್ಲ ಹೇಳಿ. ಹುಲಿ ಬಂದ ಕೂಡಲೇ ಎಂಥಾ ಕಾಡು ಪ್ರಾಣಿಗಳಾದರೂ ಭಯದಿಂದ ದೂರ ಓಡಿ ಹೋಗುತ್ತವೆ. ಆದರೆ, ಇಲ್ಲೊಂದು ಸಣ್ಣ ನಾಯಿ ಹುಲಿಗಳ ಮಧ್ಯೆಯೇ ರಾಜಾರೋಷವಾಗಿ ಓಡಾಡುತ್ತಿದೆ.!
ಹೌದು. ಅದು ಒಂದೆರಡು ಹುಲಿಗಳಲ್ಲ. ಆರೇಳು ಹುಲಿಗಳ ಹಿಂಡಿನ ಮಧ್ಯೆಯೇ ನಾಯಿ ಯಾವ ಆತಂಕ, ಭಯ, ಭೀತಿ ಇಲ್ಲದೇ ಸುತ್ತಾಡುತ್ತಿದೆ. ಅಚ್ಚರಿ ಎಂದರೆ ಒಂದೇ ಒಂದೂ ಹುಲಿ ಕೂಡ ನಾಯಿಗೆ ಹಾನಿ ಮಾಡಿಲ್ಲ. ಮುಂದೆ ನಾಯಿ ಬೊಗಳುತ್ತಿದ್ದರೂ ಹಿಂದೆ ಹುಲಿಗಳು ಸುಮ್ಮನೆ ನಿಂತಿವೆ. ಇಂತಹ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
- " class="align-text-top noRightClick twitterSection" data="
">
'ಟೈಗರ್ ಬಿಗ್ಫ್ಯಾನ್' ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, 'ತಾಯಿ ನಾಯಿಗೆ ಹಲವಾರು ಹುಲಿ ಮಕ್ಕಳುಗಳನ್ನು ಬೆಳೆಸುವುದು ಅಷ್ಟು ಸುಲಭವಲ್ಲ' ಎಂಬ ಅಡಿಬರಹ ಕೊಡಲಾಗಿದೆ. ಇದಕ್ಕೆ ಅನೇಕ ರೀತಿಯಲ್ಲಿ ಅಭಿಪ್ರಾಯಗಳು, ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಇದನ್ನೂ ನೋಡಿ: ಕರಡಿಗೆ ಹೆದರಿ ಓಡಿತು ಹುಲಿ..! ವಿಡಿಯೋ