Google Learn about AI Tool: ಗೂಗಲ್ ಹೊಸ ಎಐ-ಚಾಲಿತ ಫೀಚರ್ ಪರಿಚಯಿಸಿದೆ. ಇದಕ್ಕೆ 'ಲರ್ನ್ ಅಬೌಟ್' ಎಂದು ಹೆಸರಿಡಲಾಗಿದೆ. ಇದು ಪ್ರಾಯೋಗಿಕ ಎಐ ಕಲಿಕಾ ಸಾಧನವಾಗಿದೆ.
ಈ ಫೀಚರ್ ಗೂಗಲ್ನ ಎಲ್ಎಲ್ಎಮ್ ಎಐ ಮಾಡೆಲ್ನಿಂದ ಕಾರ್ಯಾಚರಿಸಲ್ಪಡುತ್ತದೆ. ಹೊಸ ಚಾಟ್‌ಬಾಟ್ ಬಳಕೆದಾರರ ನಿರ್ದಿಷ್ಟ ಕಲಿಕೆಯ ಗುರಿಗಳನ್ನು ಬೆಂಬಲಿಸುವ, ಹೊಂದಾಣಿಕೆಯ ಶೈಕ್ಷಣಿಕ ಸಹಾಯವಾಗಿ ಕಾರ್ಯನಿರ್ವಹಿಸುವಂತೆ ವಿನ್ಯಾಸಗೊಳಿಸಲಾಗಿದೆ.
ಚಾಟ್ಜಿಪಿಟಿ ಮತ್ತು ಜೆಮಿನಿಯಂತಹ ಎಐ ಚಾಟ್ಬಾಟ್ಗಳಂತೆ ಇದು ಕೆಲಸ ಮಾಡುವುದಿಲ್ಲ. ಲರ್ನ್ ಅಬೌಟ್ ಫೀಚರ್ ಇಂಟರಾಕ್ಟಿವ್ ಲಿಸ್ಟ್, ಕ್ವಿಜ್ ಸಂದರ್ಭದಲ್ಲಿ ಒದಗಿಸುವ ಹೆಚ್ಚುವರಿ ಮಾಹಿತಿಯನ್ನು ಬಳಸಿಕೊಳ್ಳುತ್ತದೆ. ಬಳಿಕ ತಮ್ಮನ್ನು ತಾವೇ ತೊಡಗಿಸಿಕೊಳ್ಳುವ ರೀತಿಯಲ್ಲಿ ಡೇಟಾವನ್ನು ನೀಡುತ್ತದೆ. ಪ್ರತಿ ವಿಷಯದ ಬಗ್ಗೆ ಸಮಗ್ರ ಮಾಹಿತಿ ಒದಗಿಸಲು ಲೇಖನಗಳು ಮತ್ತು ವಿಡಿಯೋಗಳನ್ನೂ ನೀಡುತ್ತದೆ.
ಲರ್ನ್ ಅಬೌಟ್ ವೈಶಿಷ್ಟ್ಯವು ಪ್ರಾಥಮಿಕವಾಗಿ ಶೈಕ್ಷಣಿಕ ಸಂಶೋಧನೆಯನ್ನು ಗುರಿಯಾಗಿಸಿಕೊಂಡಿದೆ. ಅಷ್ಟೇ ಅಲ್ಲ, ವಿಶ್ವಾಸಾರ್ಹ ಶೈಕ್ಷಣಿಕ ವೇದಿಕೆಗಳಿಂದ ಮಾತ್ರ ಇದು ಮಾಹಿತಿ ನೀಡುತ್ತದೆ. ಉದಾಹರಣೆಗೆ, ಗೂಗಲ್ ಜೆಮಿನಿ ಸಾಮಾನ್ಯ ಪ್ರಶ್ನೆಗಳಿಗಾಗಿ ವಿಕಿಪೀಡಿಯಾದಿಂದ ಡೇಟಾ ಸಂಗ್ರಹಿಸುತ್ತದೆ. ದಿ ವರ್ಜ್‌ನ ವರದಿಯ ಪ್ರಕಾರ, ಬ್ರಹ್ಮಾಂಡದ ಗಾತ್ರದ ಬಗ್ಗೆ ಲರ್ನ್ ಅಬೌಟ್ಗೆ ಕೇಳಿದಾಗ, ಶೈಕ್ಷಣಿಕ ಸೈಟ್ ಮತ್ತು ಭೌತಶಾಸ್ತ್ರದ ವೇದಿಕೆಗಳನ್ನು ಅದು ಉಲ್ಲೇಖಿಸಿದೆ ಎಂದು ವರದಿ ಮಾಡಿದೆ.
ಲರ್ನ್ ಅಬೌಟ್ ಚಾಟ್‌ಬಾಟ್ ವೆಬ್ನಲ್ಲಿ ಪ್ರಾಯೋಗಿಕ ಫೀಚರ್ನ ರೂಪದಲ್ಲಿ ಲಭ್ಯವಿದೆ. ಇದು ಪ್ರಸ್ತುತ ಆಯ್ದ ಪ್ರದೇಶಗಳಿಗೆ ಸೀಮಿತವಾಗಿದೆ. ಇನ್ನೂ ಭರತದಲ್ಲಿ ಲಭ್ಯವಿಲ್ಲ. ಆದ್ರೆ ಪರೀಕ್ಷಾ ಹಂತದ ನಂತರ ಜಾಗತಿಕವಾಗಿ ಪರಿಚಯಿಸಬಹುದು. ಜೆಮಿನಿ ಲೈವ್ ಪ್ಲಾಟ್ಫಾರ್ಮ್ಗಾಗಿ ಡಾಕ್ಯುಮೆಂಟ್ ತಿಳುವಳಿಕೆ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿ ಗೂಗಲ್ ಕಾರ್ಯನಿರ್ವಹಿಸುತ್ತಿರುವುದರ ಬಗ್ಗೆ ಇತ್ತೀಚೆಗೆ ವರದಿಯಾಗಿತ್ತು.
ಇದನ್ನೂ ಓದಿ: ಇನ್ಸ್ಟಾಗ್ರಾಂ ಬಳಕೆದಾರರಿಗೆ ಅದ್ಭುತ ಫೀಚರ್ ಪರಿಚಯಿಸುತ್ತಿದೆ ಮೆಟಾ