ರಾಯ್ಪುರ: ನಾಗ್ಪುರದಿಂದ ಕೋಲ್ಕತ್ತಾಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ವಿಮಾನ ರಾಯಪುರದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನದಲ್ಲಿ 6 ಸಿಬ್ಬಂದಿ ಸೇರಿದಂತೆ 187 ಪ್ರಯಾಣಿಕರಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇಂದು ಬೆಳಗ್ಗೆ ವಿಮಾನ ಕೋಲ್ಕತ್ತಾಕ್ಕೆ ಟೇಕ್ ಆಫ್ ಆದ ಸಂದರ್ಭದಲ್ಲಿ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮಾರ್ಗ ಬದಲಾವಣೆ ಮಾಡಲಾಯಿತು ಎಂದು ರಾಯ್ಪುರದ ಪೊಲೀಸ್ ಅಧಿಕಾರಿ ಸಂತೋಷ್ ಸಿಂಗ್ ಹೇಳಿದರು.
ಛತ್ತೀಸ್ಗಢದ ರಾಯಪುರದಲ್ಲಿ ಬೆಳಗ್ಗೆ 9ಕ್ಕೆ ವಿಮಾನ ತುರ್ತು ಭೂಸ್ಪರ್ಶ ಮಾಡಿದ್ದು, ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿದ ಬಳಿಕ ಪ್ರತ್ಯೇಕ ಸ್ಥಳದಲ್ಲಿ ವಿಮಾನದ ತಪಾಸಣೆ ನಡೆಸಲಾಯಿತು. ತಾಂತ್ರಿಕ ಅಧಿಕಾರಿಗಳು ಮತ್ತು ಬಾಂಬ್ ದಳ ತಂಡದ ಅಧಿಕಾರಿಗಳು ನಿಯಮಾನುಸಾರವಾಗಿ ಈ ಕಾರ್ಯ ನಡೆಸಿದರು ಎಂದರು.
ಇದನ್ನೂ ಓದಿ: ಇಂದು ನೆಹರು ಜನ್ಮದಿನ: ಪ್ರಧಾನಿ ಮೋದಿ ಗೌರವ ನಮನ; ದೇಶದೆಲ್ಲೆಡೆ ಮಕ್ಕಳ ದಿನೋತ್ಸವ