ETV Bharat / bharat

ಹೈಟೆಕ್ ವೇಶ್ಯಾವಾಟಿಕೆ ದಂಧೆ: ಪೊಲೀಸ್​​​ ಹೆಡ್​​ಕಾನ್ಸ್​ಟೇಬಲ್​​ ದಂಧೆಯ ಕಿಂಗ್​​​ಪಿನ್​​! - ಹೈಟೆಕ್​​ ವೇಶ್ಯಾವಾಟಿಕೆ ದಂಧೆ

ಹೈಟೆಕ್​ ವೇಶ್ಯಾವಾಟಿಕೆ ಮೇಲೆ ದಾಳಿ ನಡೆಸಿರುವ ಪೊಲೀಸರು 12 ಮಹಿಳೆಯರ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದು, ದಂಧೆಯ ಪ್ರಮುಖ ಕಿಂಗ್​ಪಿನ್​​ಗೆ ಬಂಧಿಸಿದ್ದಾರೆ.

Haryana STF constable
Haryana STF constable
author img

By

Published : Jul 10, 2021, 9:47 PM IST

ಸೋನಿಪತ್​(ಹರಿಯಾಣ): ಹೋಟೆಲ್​​ವೊಂದರಲ್ಲಿ ನಡೆಯುತ್ತಿದ್ದ ಹೈಟೆಕ್​​ ವೇಶ್ಯಾವಾಟಿಕೆ ದಂಧೆ ಮೇಲೆ ದಾಳಿ ನಡೆಸಿರುವ ಪೊಲೀಸರು 12 ವಿದೇಶಿ ಮಹಿಳೆಯರು ಹಾಗೂ ಮೂವರು ಹೋಟೆಲ್​​ ಮಾಲೀಕರ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ದೆಹಲಿಯಿಂದ 50 ಕಿಲೋ ಮೀಟರ್​ ದೂರದಲ್ಲಿರುವ ಹರಿಯಾಣದ ರಾಷ್ಟ್ರೀಯ ಹೆದ್ದಾರಿ 1ರ ಪಕ್ಕದಲ್ಲಿನ ಹೋಟೆಲ್​​ವೊಂದರಲ್ಲಿ ಈ ವೇಶ್ಯಾವಾಟಿಕೆ ದಂಧೆ ನಡೆಯುತ್ತಿತ್ತು. ದಾಳಿ ನಡೆಸಿದಾಗ ಮಹತ್ವದ ಮಾಹಿತಿ ತಿಳಿದು ಹೊರಬಿದ್ದಿದ್ದು, ಇದರಿಂದ ಇಡೀ ಪೊಲೀಸ್ ಇಲಾಖೆ ಆಶ್ಚರ್ಯಗೊಂಡಿದೆ. ಹರಿಯಾಣದ ಎಸ್​ಟಿಎಫ್​​​ನಲ್ಲಿ ಹೆಡ್​ ಕಾನ್ಸ್​​ಟೇಬಲ್​ ಆಗಿ ಸೇವೆ ಸಲ್ಲಿಸುತ್ತಿದ್ದ ವ್ಯಕ್ತಿಯೋರ್ವ ಇದರ ಕಿಂಗ್​ಪಿನ್​ ಎಂಬುದು ತಿಳಿದು ಬಂದಿದೆ. ಈಗಾಗಲೇ ಆತನ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಲಭ್ಯವಾಗಿರುವ ಮಾಹಿತಿ ಪ್ರಕಾರ ಸೆಕ್ಷನ್​ 370ರ ಅಡಿಯಲ್ಲಿ ಕಾನ್ಸ್​ಟೇಬಲ್​ ದೇವೇಂದ್ರ ಕುಮಾರ್​ ವಿರುದ್ಧ ಪ್ರಕರಣ ದಾಖಲಾಗಿದ್ದು, ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.ಡಿಎಸ್ಪಿ ಅಜೀತ್​ ಸಿಂಗ್​​ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದ್ದು, 12 ಮಹಿಳೆಯರು, ಮೂವರು ಮಾಲೀಕರ ಬಂಧನ ಮಾಡಿದೆ. ಬಂಧಿತ ಮಹಿಳೆಯರಲ್ಲಿ ಒಂಬತ್ತು ಮಂದಿ ದೆಹಲಿ ಹಾಗೂ ಮೂವರು ಉಜ್ಬೇಕಿಸ್ತಾನ್​, ಟರ್ಕಿ ಮತ್ತು ರಷ್ಯಾ ಮೂಲದವರು ಎನ್ನಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.