ಕರ್ನಲ್, ಹರಿಯಾಣ: ನಗರದಲ್ಲಿ ಪರುಶುರಾಮ ಜಯಂತಿ ಆಚರಣೆ ವಿಜೃಂಭಣೆಯಿಂದ ಜರುಗಿತು. ಈ ವೇಳೆ, ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಿಎಂ ಖಟ್ಟರ್ ಇನ್ಮುಂದೆ ಪರಶುರಾಮ ಜಯಂತಿಯಂದು ರಾಜ್ಯದಲ್ಲಿ ಸರ್ಕಾರಿ ರಜೆ ಎಂದು ಘೋಷಿಸಿದರು. ಬಳಿಕ ಸಾಮಾಜಿಕ ಜಾಲತಾಣದ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಹರಿಯಾಣ ರಾಜ್ಯದ ಮುಖ್ಯಮಂತ್ರಿ ಮನೋಹರ್ ಲಾಲಾ ಖಟ್ಟರ್, ರಾತ್ರಿ ಮಲಗುವ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಸಿಎಂ ಬದಲಾಯಿಸಿ ಮಲಗುವ ಹವ್ಯಾಸವನ್ನು ಮಾಡಿಕೊಂಡಿದ್ದಾರೆ. ಈ ಕುರಿತು ವಿಪರೀತ ಚರ್ಚೆ ಮಾಡುತ್ತಾರೆ. ಅವರೆಲ್ಲರೂ ಸಿಎಂ ಬದಲಾಯಿಸಲು ಇಷ್ಟಪಡುತ್ತಿದ್ದಾರೆ.
ಅವರು ಏನೇ ಚರ್ಚೆ ಮಾಡಲಿ.. ಬೇಸರವಿಲ್ಲ. ಏಕೆಂದ್ರೆ ಬಿಜೆಪಿಯಲ್ಲಿ ಯಾರೇ ಸಿಎಂ ಆಗಿ ಬಂದ್ರೂ ಅವರೆಲ್ಲರೂ ಜನರಿಗಾಗಿ ಕೆಲಸ ಮಾಡುತ್ತಾರೆ ಹೊರತು ತಮ್ಮ ಖುರ್ಚಿಗಾಗಿ ಅಲ್ಲ ಎಂದು ತಮ್ಮ ವಿರೋಧಿಗಳಿಗೆ ಟಾಂಗ್ ನೀಡಿದರು.
ನಾವು ಒಗ್ಗಟ್ಟಾಗಿದ್ದೇವೆ. ಫೇಸ್‌ಬುಕ್, ಟ್ವಿಟರ್‌ನಿಂದ ನಾವು ಸಿಎಂ ಬದಲಾಯಿಸುವ ವಿಚಾರವನ್ನು ನಾವು ನಿರ್ಧರಿಸುವುದಿಲ್ಲ. ಇಂದು ಈ ಮುಖ್ಯಮಂತ್ರಿ ಹೋಗಬಹುದು.. ನಾಳೆ ಮತ್ತೊಬ್ಬ ಸಿಎಂ ಬರುತ್ತಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಊಹೆ ಮಾಡುತ್ತಾರೆ. ಮುಖ್ಯಮಂತ್ರಿ ಬಂದರೂ.. ಹೋದರೂ.. ನಮ್ಮ ಕಾರ್ಯದಲ್ಲಿ ಏನೂ ಬದಲಾಗುವುದಿಲ್ಲ. ಈ ರೀತಿ ಚರ್ಚೆ ಮಾಡಿ ಅವರು ಎಂಜಾಯ್ ಮಾಡುತ್ತಾರೆ ಹೊರತು ಇಲ್ಲಿ ಏನೂ ಬದಲಾಗುವುದಿಲ್ಲ ಎಂದು ಸಿಎಂ ಖಟ್ಟರ್ ಹೇಳಿದರು.
ಸಾರ್ವಜನಿಕರಿಗೆ ಕೆಲಸಗಳ ಅಗತ್ಯವಿದೆ. ಬಿಜೆಪಿಯ ನೀತಿಗಳು ಮತ್ತು ಪ್ರಣಾಳಿಕೆಯ ಆಧಾರದ ಮೇಲೆ ಸರ್ಕಾರದ ಕೆಲಸಗಳನ್ನು ಮಾಡಲಾಗುತ್ತದೆ. ಯಾರೇ ಸಿಎಂ ಬದಲಾದರೂ ಪರವಾಗಿಲ್ಲ. ಬಿಜೆಪಿಯವರು ತತ್ವದ ಮೇಲೆ ಕೆಲಸ ಮಾಡುತ್ತಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಿಎಂ ಬದಲಾಗುವುದರ ಬಗ್ಗೆ ಚರ್ಚೆ ಮಾಡುವವರಿಗೆ ಸಿಎಂ ಖಟ್ಟರ್ ಟಾಂಗ್ ನೀಡಿದರು.
ಓದಿ: ಬೆಳಗಾವಿ ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಿ: ಮರಾಠ ಸಾಹಿತ್ಯ ಸಮ್ಮೇಳನ ನಿರ್ಣಯ