ಭಿವಾನಿ (ಹರಿಯಾಣ): ರಕ್ಷಣಾ ಇಲಾಖೆಯ ಮಹತ್ವಾಕಾಂಕ್ಷಿ ಅಗ್ನಿಪಥ ಯೋಜನೆಯ ವಿರುದ್ಧ ಆಕ್ಷೇಪ ವ್ಯಕ್ತವಾಗಿದೆ. ನಾಲ್ಕು ವರ್ಷಗಳ ಸೇವೆಯ ನಂತರ ಭವಿಷ್ಯದ ಬಗ್ಗೆ ಯುವಕರು ಆತಂಕಕ್ಕೀಡಾಗಿದ್ದು, ಈಗಾಗಲೇ ವಿವಿಧ ಕಾರ್ಪೋರೇಟ್ ಕಂಪನಿಗಳು ಉದ್ಯೋಗ ನೀಡಲು ತಾವು ಸಿದ್ಧ ಎಂದು ಮುಂದೆ ಬಂದಿವೆ. ಇದೀಗ ಹರಿಯಾಣ ಸರ್ಕಾರ ಕೂಡ ಅಗ್ನಿವೀರರನ್ನು ಗ್ರೂಪ್ ಸಿ ಹುದ್ದೆಗಳಿಗೆ ಭರ್ತಿ ಮಾಡಲಾಗುವುದು ಎಂದು ಘೋಷಿಸಿದೆ.
ಸೇನೆಯಲ್ಲಿ ಅಗ್ನಿವೀರರಾಗಿ ಸೇವೆ ಸಲ್ಲಿಸಿದ ಹರಿಯಾಣದ ಯುವಕರಿಗೆ ಸರ್ಕಾರದ ಗ್ರೂಪ್ ಸಿ ಹುದ್ದೆ ನೀಡುವ ಖಾತರಿಯನ್ನು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ನೀಡಿದ್ದಾರೆ.
-
मैं घोषणा करता हूँ कि 'अग्निपथ योजना' के तहत 4 वर्ष देश की सेवा करने के बाद वापिस आने वाले अग्निवीरों को गारंटी के साथ हरियाणा सरकार में नौकरी दी जाएगी।
— Manohar Lal (@mlkhattar) June 21, 2022 " class="align-text-top noRightClick twitterSection" data="
">मैं घोषणा करता हूँ कि 'अग्निपथ योजना' के तहत 4 वर्ष देश की सेवा करने के बाद वापिस आने वाले अग्निवीरों को गारंटी के साथ हरियाणा सरकार में नौकरी दी जाएगी।
— Manohar Lal (@mlkhattar) June 21, 2022मैं घोषणा करता हूँ कि 'अग्निपथ योजना' के तहत 4 वर्ष देश की सेवा करने के बाद वापिस आने वाले अग्निवीरों को गारंटी के साथ हरियाणा सरकार में नौकरी दी जाएगी।
— Manohar Lal (@mlkhattar) June 21, 2022
8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮಾತನಾಡಿ, ಹರಿಯಾಣದ ಅಗ್ನಿವೀರರನ್ನು ರಾಜ್ಯ ಸರ್ಕಾರದ ಗ್ರೂಪ್-ಸಿ ಹುದ್ದೆಗಳಿಗೆ ಭರ್ತಿ ಮಾಡಲಾಗುವುದು. ಸೇನೆಯಲ್ಲಿ ಉತ್ತಮ ತರಬೇತಿ ಪಡೆದವರಿಗೆ ಪೊಲೀಸ್ ಇಲಾಖೆಯಲ್ಲೂ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ಇದಕ್ಕೂ ಮುನ್ನ ಮುಖ್ಯಮಂತ್ರಿ ಮನೋಹರ್ ಲಾಲ್ ಈ ಕುರಿತು ಟ್ವೀಟ್ ಮಾಡಿದ್ದು, 'ನೀವು ದೇಶದ ಬಗ್ಗೆ ಗಮನಹರಿಸಿ, ನಿಮ್ಮ ಬಗ್ಗೆ ನಾವು ಕಾಳಜಿ ವಹಿಸಲಿದ್ದೇವೆ. ದೇಶ ಸೇವೆ ಮಾಡಿ ಬಂದ ಅಗ್ನಿವೀರರಿಗೆ ಸರ್ಕಾರಿ ಉದ್ಯೋಗ ಪಕ್ಕಾ' ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಅಗ್ನಿಪಥ ಪ್ರತಿಭಟನಾಕಾರರಿಗೆ ಶಾಕ್ - ಭರಿಸಬೇಕಿದೆ ಆಸ್ತಿ ಹಾನಿ ನಷ್ಟ