ETV Bharat / bharat

ನವವಧುವಿನ ಮೇಲೆ ಮನ ಬಂದಂತೆ ಗುಂಡು ಹಾರಿಸಿ ಕ್ರೌರ್ಯ ಮೆರೆದ ದುಷ್ಕರ್ಮಿ - ಹರಿಯಾಣದ ಗುಂಡಿನ ದಾಳಿ ಪ್ರಕರಣ

ಯುವತಿಯೊಬ್ಬಳು ಬೇರೊಬ್ಬರನ್ನು ಮದುವೆಯಾಗಿರುವುದನ್ನು ಅರಗಿಸಿಕೊಳ್ಳದ ವ್ಯಕ್ತಿಯೊಬ್ಬ ಕೋಪದಲ್ಲಿ ಆಕೆಯ ಮೇಲೆ ಮೇಲೆ ಗುಂಡು ಹಾರಿಸಿದ್ದಾನೆ. ಮೇಲ್ನೋಟಕ್ಕೆ ಇದು ಪ್ರೇಮ ವೈಫಲ್ಯ ಎಂದು ಹೇಳಲಾಗುತ್ತಿದ್ದು, ದಾಳಿಗೆ ನಿಖರ ಕಾರಣ ತಿಳಿದು ಬಂದಿಲ್ಲ.

HARYANA BRIDE HOURS AFTER HER WEDDING SHOT BY STALKER

author img

By

Published : Dec 7, 2021, 5:13 PM IST

ಹರಿಯಾಣ: ಹರ್ಯಾಣದ ಸೋನಿಪತ್‌ನ ಪಾಲ್ಡಿ ಎಂಬ ಗ್ರಾಮದ ಸಮೀಪದಲ್ಲಿ ದುಷ್ಕರ್ಮಿಯೊಬ್ಬ ನವವಧುವಿನ ಮೇಲೆ ಮನ ಬಂದಂತೆ ಗುಂಡು ಹಾರಿಸಿ ಕ್ರೌರ್ಯ ಮೆರೆದಿದ್ದಾನೆ. 20 ವರ್ಷದ ತನಿಷ್ಕಾ ದಾಳಿಗೊಳಗಾದ ನವವಧು ಎಂದು ತಿಳಿದು ಬಂದಿದೆ.

ಮೊಹಮ್ಮದ್ ಸಾಹಿಲ್ ಗುಂಡಿನ ದಾಳಿ ನಡೆಸಿದ ದುಷ್ಕರ್ಮಿ. ಆಗ ತಾನೇ ಮದುವೆಯಾದ ತನಿಷ್ಕಾ, ತನ್ನ ಪತಿ ಮೋಹನ್ ಹಾಗೂ ಸೋದರ ಸಂಬಂಧಿಯೊಂದಿಗೆ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ, ವಾಹನವನ್ನು ಅಡ್ಡಗಟ್ಟಿದ ದುಷ್ಕರ್ಮಿ, ತನಿಷ್ಕಾಳ ಮೇಲೆ ಗುಂಡಿನ ಸುರಿಮಳೆಯನ್ನೇ ಹರಿಸಿದ್ದಾರೆ.

ಕಳೆದ ವಾರ ನಡೆದಿರುವ ಘಟನೆ ಇದಾಗಿದ್ದು, ಈಗ ಬೆಳಕಿಗೆ ಬಂದಿದೆ. ಕಳೆದ ಎರಡು ತಿಂಗಳಿಂದ ದುಷ್ಕರ್ಮಿ ತನಿಷ್ಕಾಗೆ ಕಿರುಕುಳ ನೀಡುತ್ತಿದ್ದನಂತೆ. ತನಿಷ್ಕಾ ಬೇರೊಬ್ಬರನ್ನು ಮದುವೆಯಾಗಿದ್ದು, ಇದನ್ನು ನೋಡಲಾಗದೇ ಇದರಿಂದ ಕೋಪಗೊಂಡ ಮೊಹಮ್ಮದ್ ಸಾಹಿಲ್ ಅವಳ ಮೇಲೆ ಗುಂಡು ಹಾರಿಸಿದ್ದಾನೆ ಎಂದು ತಿಳಿದು ಬಂದಿದೆ. ಮೇಲ್ನೋಟಕ್ಕೆ ಇದು ಪ್ರೇಮ ವೈಫಲ್ಯ ಎಂದು ಹೇಳಲಾಗುತ್ತಿದ್ದು, ದಾಳಿಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಇನ್ನು ಗಂಭೀರವಾಗಿ ಗಾಯಗೊಂಡಿರುವ ಸಂತ್ರಸ್ತೆ ತನಿಷ್ಕಾ ಸದ್ಯ ರೋಹ್ಟಕ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪತಿ ನೀಡಿದ ದೂರಿನಂತೆ ದೂರು ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಾಹಿಲ್ ಸೇರಿದಂತೆ ಇನ್ನಿಬ್ಬರು ಅಪ್ರಾಪ್ತರನ್ನು ಡಿಸೆಂಬರ್ 5 ರಂದು ಬಂಧಿಸಲಾಗಿದೆ.

ಆರೋಪಿಗಳು ತನಿಷ್ಕಾಳ ಮೇಲೆ ಗುಂಡು ಹಾರಿಸುವ 4 ಗಂಟೆಗಳ ಮೊದಲು ಸ್ಥಳೀಯ ಉದ್ಯಮಿಯೊಬ್ಬರಿಗೆ ಬಂದೂಕು ತೋರಿಸಿ ಅವರನ್ನು ಬೆದರಿಸಿ ಕಾರನ್ನು ಕದ್ದಿದ್ದಾರೆ. ಘಟನೆ ಬಳಿಕ ಆ ವಾಹನವನ್ನು ಡಾಬಾ ಬಳಿ ಬಿಟ್ಟು ಪರಾರಿಯಾಗಿದ್ದಾರೆ. ಈ ಬಗ್ಗೆಯೂ ಉದ್ಯಮಿ ದೂರು ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಜ್ ಕಾರಿನ ಓವರ್ ಸ್ಪೀಡ್.. ಬೆಂಗಳೂರಿನಲ್ಲಿ ವಾಹನಗಳ ಸರಣಿ ಅಪಘಾತ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.