ETV Bharat / bharat

ಬೆಂಕಿ ಜೊತೆ ಸರಸ ಬೇಡ ಅಂದರೂ ಛಲ ಬಿಡದ ಗಟ್ಟಿಗಿತ್ತಿ; ದೇಶದ ಮೊದಲ ಮಹಿಳಾ ಫೈರ್​ ಫೈಟರ್​ ಈ ಹರ್ಷಿಣಿ

ವಿಪತ್ತು ನಿರ್ವಹಣಾ ಕಾರ್ಯಗಳಾದ ಅಪಘಾತ, ಪ್ರವಾಹ, ಕಟ್ಟಡ ಕುಸಿತ, ನದಿ ಪ್ರವಾಹ, ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳ ದಾಳಿಯಂತಹ ಹಲವು ರಕ್ಷಣಾ ಕಾರ್ಯದಲ್ಲಿ ಭಾಗಿಯಾದೆ.

ಗುರಿ ಸಾಧಿಸಿ ಕನಸು ನನಸು ಮಾಡಿಕೊಟ್ಟ ದಿಟ್ಟೆ; ಅನೇಕರಿಗೆ ಸ್ಪೂರ್ತಿ ಈಕೆ
harshini-kanhekar-first-indian-women-fire-fighter-who-inspires-many-women
author img

By

Published : Dec 6, 2022, 11:13 AM IST

'ಬಾಲ್ಯದಿಂದ ನನಗಿದ್ದ ಕನಸು ಸೇನೆ ಸೇರಿ ದೇಶ ಸೇವೆ ಸಲ್ಲಿಸಬೇಕು ಎಂಬುದು. ಮಹಾರಾಷ್ಟ್ರದ ನಾಗ್ಪರದ ಶಾಲೆಯಲ್ಲಿ ಕೊನೆ ಬೆಂಚಿನ ವಿದ್ಯಾರ್ಥಿಯಾಗಿದ್ದ ನಾನು ಓದಿನಲ್ಲಿ ಹಿಂದಿದ್ದರೂ ಕ್ರೀಡೆಯಲ್ಲಿ ಸಕ್ರಿಯವಾಗಿದ್ದೆ. ಪದವಿ ಅಭ್ಯಾಸದ ವೇಳೆ ಎನ್​ಸಿಸಿ ಸೇರಿದೆ. ನನಗೆ ಅಗ್ನಿಶಾಮಕ ಇಲಾಖೆ ಸೇರಿ ಸೇವೆ ಸಲ್ಲಿಸಬೇಕು ಎಂಬ ಕನಸಿತ್ತು. ಶಿರಡಿಯಲ್ಲಿ ನಡೆದ ಸಿಲಿಂಡರ್​ ಬ್ಲಾಸ್ಟ್​ ರಕ್ಷಣಾ ಕಾರ್ಯದಲ್ಲೂ ಭಾಗಿಯಾದೆ. ಇದಾದ ಬಳಿಕ ನಾನು ಸೇರಿದ್ದು ರಾಷ್ಟ್ರೀಯ ಅಗ್ನಿ ಸೇವಾ ಕಾಲೇಜ್​ಗೆ. ನನ್ನ ಕನಸಿಗೆ ಪೋಷಕರು ಪ್ರೋತ್ಸಾಹ ನೀಡಿದರು. ಆದರೆ, ಸಂಬಂಧಿಗಳು ಮಾತ್ರ ಬೆಂಕಿ ಜೊತೆ ಸರಸ ಒಳ್ಳೆಯದಲ್ಲ. ಅಪಾಯ ಎಂದರು. ಆದರೆ, ನನ್ನ ಕನಸನ್ನು ಯಾರಿಂದಲೂ ತಡೆಯಲು ಸಾಧ್ಯವಾಗಲಿಲ್ಲ. ಈ ನಡುವೆ ತರಬೇತಿ ಕೂಡ ಕಠಿಣವಾಗಿಯೇ ಇತ್ತು. ಆದರೂ ಎದೆಗುಂದದ ನಾನು ದೇಶದ ಮೊದಲ ಮಹಿಳಾ ಫೈರ್​ ಫೈಟರ್​ ಆದೆ.

ವಿಪತ್ತು ನಿರ್ವಹಣಾ ಕಾರ್ಯಗಳಾದ ಅಪಘಾತ, ಪ್ರವಾಹ, ಕಟ್ಟಡ ಕುಸಿತ, ನದಿ ಪ್ರವಾಹ, ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳ ದಾಳಿಯಂತಹ ಹಲವು ರಕ್ಷಣಾ ಕಾರ್ಯದಲ್ಲಿ ಭಾಗಿಯಾದೆ. ಒಎನ್​ಜಿಸಿ ಸಿನಿಯರ್​ ಫೈರ್​ ಅಧಿಕಾರಿಯಾದ ನಾನು ಮುಂಬೈ, ಕೋಲ್ಕತ್ತಾ, ದೆಹಲಿ ಮತ್ತು ಇತರೆ ನಗರಗಳಲ್ಲಿ ಜನರ ರಕ್ಷಣೆಗೆ ಪ್ರಾಣವನ್ನೇ ಪಣವಾಗಿಟ್ಟೆ. ನನ್ನ ಸೇವೆಗೆ ಅನೇಕ ಪ್ರಶಸ್ತಿಗಳು ಸಂದಿವೆ.

ನಮಗೆ ಇಷ್ಟವಾದ ಕೆಲಸ ಮಾಡುವಾಗ ಗಂಡು ಹೆಣ್ಣು ಎಂಬ ಯಾವುದೇ ವ್ಯತ್ಯಾಸ ಬರುವುದಿಲ್ಲ. ಮಹಿಳೆ ಶಕ್ತಿಯ ಸ್ವರೂಪ. ನಿಮ್ಮ ಕನಸನ್ನು ಬೆನ್ನತ್ತಿದ್ದರೆ, ಎಲ್ಲವೂ ಸಾಧ್ಯ. ನನ್ನ ಪೋಷಕರು ನನ್ನ ಸಾಧನೆ ಬಗ್ಗೆ ಹೆಮ್ಮೆ ಹೊಂದಿದ್ದಾರೆ. ನಾನು ಇದೀಗ ದೇಶದ ಅದೆಷ್ಟೊ ಹೆಣ್ಣು ಮಕ್ಕಳಿಗೆ ಸ್ಫೂರ್ತಿಯಾಗಿದ್ದೇನೆ'.

-ಹರ್ಷಿಣಿ ಕನ್ಹೆಕರ್​, ಭಾರತದ ಮೊದಲ ಮಹಿಳಾ ಫೈರ್​ ಫೈಟರ್​.

ಇದನ್ನೂ ಓದಿ: ಕೊನೆಗೂ ಸ್ವಂತ ನೆಲೆ ಕಂಡುಕೊಂಡ ಕೋಸ್ಟ್ ಗಾರ್ಡ್: ಕರಾವಳಿಯಲ್ಲಿ ಹೆಚ್ಚಿದ ಭದ್ರತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.