ಡೆಹ್ರಾಡೂನ್(ಉತ್ತರಾಖಂಡ): ಹತ್ತಾರು ಸಾವಿರ ರೂಪಾಯಿ ಖರ್ಚು ಮಾಡಿ ಬೈಕ್, ಕಾರುಗಳಿಗೆ ಫ್ಯಾನ್ಸಿ ಸಂಖ್ಯೆಯ ನಂಬರ್ ಪ್ಲೇಟ್ ಬರೆಸುವುದು ಇತ್ತೀಚಿನ ದಿನಗಳಲ್ಲಿ ಸರ್ವೆ ಸಾಮಾನ್ಯ. ಆದರೆ, ಉತ್ತರಾಖಂಡದಲ್ಲಿ ವ್ಯಕ್ತಿಯೋರ್ವ ತನ್ನ ಕಾರಿನ ಮೇಲೆ ಹಿಂದಿಯಲ್ಲಿ 'ಪಪ್ಪಾ'(पापा) ಎಂದು ಬರೆಯಿಸಿದ್ದಾನೆ. ಇದನ್ನ ನೋಡಿರುವ ಪೊಲೀಸರು ಆತನಿಗೆ ದಂಡ ಹಾಕಿದ್ದಾರೆ. ಜೊತೆಗೆ ಆ ಫೋಟೋ ಟ್ವಿಟರ್ ಅಕೌಂಟ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
-
पापा कहते हैं बड़ा नाम करेगा,
— Uttarakhand Police (@uttarakhandcops) July 12, 2022 " class="align-text-top noRightClick twitterSection" data="
गाड़ी के प्लेट पर पापा लिखेगा,
मगर ये तो कोई न जाने,
कि ऐसी प्लेट पर होता है चालान..
ट्वीट पर शिकायत प्राप्त करने के बाद #UttarakhandPolice ने गाड़ी मालिक को यातायात ऑफिस बुलाकर नम्बर प्लेट बदलवाई और चालान किया। pic.twitter.com/oL4E3jJFAV
">पापा कहते हैं बड़ा नाम करेगा,
— Uttarakhand Police (@uttarakhandcops) July 12, 2022
गाड़ी के प्लेट पर पापा लिखेगा,
मगर ये तो कोई न जाने,
कि ऐसी प्लेट पर होता है चालान..
ट्वीट पर शिकायत प्राप्त करने के बाद #UttarakhandPolice ने गाड़ी मालिक को यातायात ऑफिस बुलाकर नम्बर प्लेट बदलवाई और चालान किया। pic.twitter.com/oL4E3jJFAVपापा कहते हैं बड़ा नाम करेगा,
— Uttarakhand Police (@uttarakhandcops) July 12, 2022
गाड़ी के प्लेट पर पापा लिखेगा,
मगर ये तो कोई न जाने,
कि ऐसी प्लेट पर होता है चालान..
ट्वीट पर शिकायत प्राप्त करने के बाद #UttarakhandPolice ने गाड़ी मालिक को यातायात ऑफिस बुलाकर नम्बर प्लेट बदलवाई और चालान किया। pic.twitter.com/oL4E3jJFAV
ಕಾರಿನ ನಂಬರ್ 4141 ಆಗಿದ್ದು, ಅದನ್ನ ಫ್ಯಾನ್ಸಿ ಸ್ಟೈಲ್ನಲ್ಲಿ ಪಪ್ಪಾ(पापा) ಎಂದು ಹಿಂದಿಯಲ್ಲಿ ಮುದ್ರಿಸಲಾಗಿತ್ತು. ಇದು ಪೊಲೀಸರ ಕಣ್ಣಿಗೆ ಬೀಳುತ್ತಿದ್ದಂತೆ ದಂಡ ಕಟ್ಟಿಸಿಕೊಂಡಿದ್ದಾರೆ. ಜೊತೆಗೆ ನಂಬರ್ ಪ್ಲೇಟ್ ಚೇಂಜ್ ಮಾಡುವಂತೆ ಬುದ್ದಿವಾದ ಹೇಳಿದ್ದಾರೆ.
ಉತ್ತರಾಖಂಡ ಪೊಲೀಸರ ಪ್ರಕಾರ, ಇದು ಸಂಚಾರಿ ನಿಯಮದ ಉಲ್ಲಂಘನೆಯಾಗಿದ್ದು, ಹೀಗಾಗಿ, ನಂಬರ್ ಪ್ಲೇಟ್ ಹಾಕಿಸಿರುವ ವ್ಯಕ್ತಿಯನ್ನ ಟ್ರಾಫಿಕ್ ಕಚೇರಿಗೆ ಕರೆಯಿಸಿ, ದಂಡ ಕಟ್ಟಿಸಿಕೊಳ್ಳಲಾಗಿದೆ. ನಂಬರ್ ಪ್ಲೇಟ್ ಬದಲಾವಣೆ ಮಾಡುವಂತೆ ತಿಳಿಸಿದ್ದು, ಇದರ ಬೆನ್ನಲ್ಲೇ ಚೇಂಜ್ ಮಾಡಲಾಗಿದೆ.
ಈ ನಂಬರ್ ಪ್ಲೇಟ್ ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಶೇರ್ ಮಾಡಿಕೊಂಡಿರುವ ಉತ್ತರಾಖಂಡ ಪೊಲೀಸರು, 'ಮಕ್ಕಳು ದೊಡ್ಡ ಹೆಸರು ಮಾಡುವಂತೆ ತಂದೆ ಹೇಳುತ್ತಾರೆ, ಆದರೆ, ಮಗ ತಂದೆಯ ಹೆಸರು ಕಾರಿನ ಪ್ಲೇಟ್ ಮೇಲೆ ಬರೆಯುತ್ತಾನೆ ಎಂದು ಬರೆದುಕೊಂಡಿದ್ದಾರೆ. ಇಂತಹ ನಂಬರ್ ಪ್ಲೇಟ್ ಕಂಡು ಬಂದರೆ ದಂಡ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ.