ಹರ್ದೋಯಿ (ಉತ್ತರ ಪ್ರದೇಶ): ಪ್ರೀತಿಯಲ್ಲಿ ಬಿದ್ದ ಮಗಳ ಕೊಲೆ ಮಾಡಿರುವ ಪಾಪಿ ತಂದೆ, ಆಕೆಯ ರುಂಡ ಕೈಯಲ್ಲಿ ಹಿಡಿದುಕೊಂಡು ಪೊಲೀಸ್ ಠಾಣೆಗೆ ಬಂದಿರುವ ಘಟನೆ ಉತ್ತರ ಪ್ರದೇಶದ ಹರ್ದೋಯಿಯಲ್ಲಿ ನಡೆದಿದೆ.
17 ವರ್ಷದ ಮಗಳು ಸೋದರಸಂಬಂಧಿ ಆದೇಶ ಎಂಬ ಯುವಕನೊಂದಿಗೆ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಳು. ಇದರ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಇಬ್ಬರ ಕೊಲೆ ಮಾಡಲು ಪಾಪಿ ತಂದೆ ಯೋಜನೆ ರೂಪಿಸಿದ್ದಾನೆ.
ಇದನ್ನೂ ಓದಿ: ಸಕ್ರಿಯ ರಾಜಕಾರಣದಿಂದ ನಿವೃತ್ತಿ ಘೋಷಿಸಿದ ಶಶಿಕಲಾ ನಟರಾಜನ್
ಮಗಳು ಮನೆಯಲ್ಲಿ ಒಬ್ಬಂಟಿಯಾಗಿರುವ ಮಾಹಿತಿ ಗೊತ್ತಾಗುತ್ತಿದ್ದಂತೆ ಬಾಗಿಲು ಮುಚ್ಚಿ ಆಕೆಯ ಶಿರಚ್ಛೇದ ಮಾಡಿದ್ದಾನೆ. ಇದಾದ ಬಳಿಕ ಕೈಯಲ್ಲಿ ಆಕೆಯ ರುಂಡ ಹಿಡಿದುಕೊಂಡು ಪೊಲೀಸ್ ಠಾಣೆಗೆ ಬರಲು ಮುಂದಾಗಿದ್ದಾನೆ. ಘಟನೆಯಿಂದ ಭಯಭೀತರಾದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಗಳ ಕತ್ತರಿಸಿದ ತಲೆ ಹಿಡಿದು ಬರುತ್ತಿದ್ದ ಆತನ ಬಂಧನ ಮಾಡಿದ್ದಾರೆ. ಉತ್ತರ ಪ್ರದೇಶದ ಹರ್ದೋಯಿ ಪಾಂಡೆ ತಾರಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಈಗಾಗಲೇ ಪಾಪಿ ತಂದೆಯ ಬಂಧನ ಮಾಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.