ETV Bharat / bharat

ಉನ್ನಾವೋ ಅತ್ಯಾಚಾರ​ ಸಂತ್ರಸ್ತೆ ತಾಯಿಯ 'ಕೈ' ಹಿಡಿಯದ ಮತದಾರ!

author img

By

Published : Mar 10, 2022, 3:53 PM IST

ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಕಾಂಗ್ರೆಸ್​​ನಿಂದ ಟಿಕೆಟ್ ಪಡೆದುಕೊಂಡು ಸ್ಪರ್ಧಿಸಿದ್ದ ಉನ್ನಾವೋ ಅತ್ಯಾಚಾರ​ ಸಂತ್ರಸ್ತೆಯ ತಾಯಿ ಸೋಲಿನ ಸುಳಿಯಲ್ಲಿದ್ದಾರೆ.

UP Election result
UP Election result

ಉನ್ನಾವೋ(ಉತ್ತರ ಪ್ರದೇಶ): ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​​ನಿಂದ ಟಿಕೆಟ್ ಪಡೆದುಕೊಂಡಿದ್ದ ಉನ್ನಾವೋ ಅತ್ಯಾಚಾರ​ ಸಂತ್ರಸ್ತೆಯ ತಾಯಿ ಆಶಾ ಸಿಂಗ್‌ ಅವರನ್ನು ಮತದಾರ ಕೈ ಹಿಡಿಯಲಿಲ್ಲ. 10ನೇ ಸುತ್ತಿನ ಮತಎಣಿಕೆ ವೇಳೆಯಲ್ಲೂ ಕೇವಲ 438 ಮತ ಪಡೆದುಕೊಂಡಿರುವ ಅವರು ಹಿನ್ನಡೆ ಅನುಭವಿಸಿದ್ದಾರೆ.

ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿ ಪಂಕಜ್ ಗುಪ್ತಾ ಎದುರು ಕಾಂಗ್ರೆಸ್​​ ಪಕ್ಷದಿಂದ ಟಿಕೆಟ್ ಪಡೆದುಕೊಂಡಿದ್ದ ಆಶಾ ಸಿಂಗ್ ಚುನಾವಣೆಯಲ್ಲಿ ಕಣಕ್ಕಿಳಿದಿದ್ದರು. ಇವರು ಕಣದಲ್ಲಿದ್ದ ಕಾರಣ ಸಮಾಜವಾದಿ ಪಕ್ಷ ಈ ಕ್ಷೇತ್ರಕ್ಕೆ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡುವುದಿಲ್ಲ ಎಂದು ಅಖಿಲೇಶ್ ಯಾದವ್ ತಿಳಿಸಿದ್ದರು. ಆದರೆ ಕೊನೆ ಕ್ಷಣದಲ್ಲಿ ಅಭಿನವ್​ ಕುಮಾರ್​ಗೆ ಪಕ್ಷ ಟಿಕೆಟ್ ನೀಡಿತ್ತು. ಸದ್ಯ ಬಿಜೆಪಿಯ ಪಂಕಜ್ ಗುಪ್ತಾ 42,021 ಮತಗಳನ್ನು ಪಡೆದು ಮುನ್ನಡೆಯಲ್ಲಿದ್ದು, ಸಮಾಜವಾದಿ ಪಕ್ಷದ ಅಭಿನವ್​ ಕುಮಾರ್​​ 30,612 ಮತ ಪಡೆದುಕೊಂಡು ಹಿನ್ನಡೆಯಲ್ಲಿದ್ದಾರೆ. ಆದರೆ, ಆಶಾ ಸಿಂಗ್​​ ಅತಿ ಕಡಿಮೆ ಮತಗಳನ್ನು ಪಡೆದು ಸೋಲು ಕಾಣುವಂತಾಗಿದೆ.

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಪೈಕಿ ಕಾಂಗ್ರೆಸ್ ಪಕ್ಷ ಶೇ. 40ರಷ್ಟು ಮಹಿಳೆಯರಿಗೆ ಆದ್ಯತೆ ನೀಡಿತ್ತು. ಇದರಲ್ಲಿ ಉನ್ನಾವೋ ಅತ್ಯಾಚಾರ​ ಕೇಸ್​, ಸೋನಭದ್ರ ಹತ್ಯಾಕಾಂಡದ ಸಂತ್ರಸ್ತೆ ಹಾಗು ಆಶಾ ಕಾರ್ಯಕರ್ತೆ ಪೂನಂ ಪಾಂಡೆ, ಮಾಡೆಲ್‌​​​ ಅರ್ಚನಾ ಗೌತಮ್ ಕೂಡ ಇದ್ದರು.

ಇದನ್ನೂ ಓದಿ: 'ಬುಲ್ಡೋಜರ್ ಬಾಬಾ ಜಿಂದಾಬಾದ್​​'.. ಯುಪಿಯಲ್ಲಿ ಬಿಜೆಪಿ ವಿಭಿನ್ನ ಸಂಭ್ರಮಾಚರಣೆ!

2017ರಲ್ಲಿ ಬಿಜೆಪಿ ಶಾಸಕನಾಗಿದ್ದ ಕುಲ್​ದೀಪ್​ ಸಿಂಗ್​ ಸೆಂಗಾರ್​ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ. ಈ ಸುದ್ದಿ ಇಡೀ ರಾಷ್ಟ್ರಾದ್ಯಂತ ಸಂಚಲನ ಸೃಷ್ಟಿಸಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.