ETV Bharat / bharat

ಸ್ವಪಕ್ಷದ ವಿರುದ್ಧ ವಾಗ್ದಾಳಿ... ಗುಜರಾತ್​ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸ್ಥಾನದಿಂದ ಹಾರ್ದಿಕ್​ ವಜಾ!?

ಬಿಜೆಪಿ ನಾಯಕತ್ವದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ, ಸ್ವಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದ ಗುಜರಾತ್​ನ ಹಾರ್ದಿಕ್ ಪಾಟೀಲ್​ಗೆ ಇದೀಗ ಪಕ್ಷ ಬಹುದೊಡ್ಡ ಪೆಟ್ಟು ನೀಡಿದೆ ಎಂಬ ಮಾತು ಕೇಳಿ ಬರ್ತಿದೆ. ಇದಕ್ಕೆ ಪೂರಕ ರೀತಿಯಲ್ಲಿ ಹಾರ್ದಿಕ್ ಪಾಟೀಲ್​​ ಟ್ವಿಟರ್ ಕೂಡ ಕೆಲವೊಂದು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

Hardik Patel
Hardik Patel
author img

By

Published : May 2, 2022, 5:28 PM IST

ಅಹಮದಾಬಾದ್​ (ಗುಜರಾತ್​): ಬಿಜೆಪಿ ನಾಯಕತ್ವದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ, ಸ್ವಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದ ಗುಜರಾತ್​ನ ಹಾರ್ದಿಕ್ ಪಾಟೀಲ್​ಗೆ ಇದೀಗ ಪಕ್ಷ ಬಹುದೊಡ್ಡ ಪೆಟ್ಟು ನೀಡಿದೆ ಎಂಬ ಮಾತು ಕೇಳಿ ಬರ್ತಿದೆ. ಗುಜರಾತ್​ನಲ್ಲಿ ಪಾಟಿದಾರ್​ ಸಮುದಾಯದ ನಾಯಕ ಹಾಗೂ ರಾಜ್ಯ ಕಾಂಗ್ರೆಸ್​​ ಕಾರ್ಯಾಧ್ಯಕ್ಷ ಹಾರ್ದಿಕ್ ಪಾಟೀಲ್​ ಬಳಕೆ ಮಾಡ್ತಿದ್ದ ಟ್ಟಟರ್​ನಲ್ಲಿ 'ಕಾಂಗ್ರೆಸ್​ನ ಕಾರ್ಯಾಧ್ಯಕ್ಷ' ಎಂಬ ಪದ ತೆಗೆದು ಹಾಕಲಾಗಿದೆ. ಇದು ಅನೇಕ ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

Hardik Patel
ಅನೇಕ ಅನುಮಾನಗಳಿಗೆ ದಾರಿ ಮಾಡಿದ ಹಾರ್ದಿಕ್ ಟ್ವೀಟರ್ ಖಾತೆ

ಈ ವರ್ಷದ ಅಂತ್ಯದಲ್ಲಿ ಗುಜರಾತ್​ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅದಕ್ಕೂ ಮುಂಚಿತವಾಗಿ ಈ ಬೆಳವಣಿಗೆ ನಡೆದಿದೆ. ಕಳೆದ ಕೆಲ ದಿನಗಳ ಹಿಂದೆ ಬಹಿರಂಗವಾಗಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದ ಹಾರ್ದಿಕ್​, ಪಕ್ಷ ತಮ್ಮನ್ನು ಕಡೆಗಣನೆ ಮಾಡ್ತಿದೆ ಎಂದು ಹೇಳಿದ್ದರು. ಇದಾದ ಬಳಿಕ ಮಾತನಾಡಿದ್ದ ಹಾರ್ದಿಕ್, ತಾವು ಕಾಂಗ್ರೆಸ್​ ಪಕ್ಷದಲ್ಲೇ ಮುಂದುವರೆಯುವುದಾಗಿ ತಿಳಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.