ETV Bharat / bharat

ಮಾಜಿ ಕ್ರಿಕೆಟಿಗ ಭಜ್ಜಿ, ದೆಹಲಿ ಶಾಸಕ ಚಡ್ಡಾ ಸೇರಿ ಐವರು ರಾಜ್ಯಸಭೆಗೆ ಅವಿರೋಧ ಆಯ್ಕೆ

ಪಂಜಾಬ್​ನಿಂದ ರಾಜ್ಯಸಭೆಗೆ 7 ಸದಸ್ಯರನ್ನು ಆಯ್ಕೆ ಮಾಡಬಹುದಾಗಿದೆ. ಈ ಹಿಂದೆ ಪಂಜಾಬ್​ನಿಂದ ಆಯ್ಕೆಯಾಗಿದ್ದ ಕಾಂಗ್ರೆಸ್ ಮತ್ತು ​ಶಿರೋಮಣಿ ಅಕಾಲಿ ದಳದ ತಲಾ ಇಬ್ಬರು ಹಾಗೂ ಬಿಜೆಪಿಯ ಒಬ್ಬ ಸದಸ್ಯರು ನಿವೃತ್ತಿ ಹೊಂದುತ್ತಿದ್ದಾರೆ. ಈ ಸ್ಥಾನಗಳಿಗೆ ಹರ್ಭಜನ್ ಸಿಂಗ್, ದೆಹಲಿ ಶಾಸಕ ರಾಘವ್ ಚಡ್ಡಾ ಸೇರಿ ಐವರು ಆಯ್ಕೆಯಾಗಿದ್ದಾರೆ.

Rajya Sabha
Rajya Sabha
author img

By

Published : Mar 24, 2022, 8:08 PM IST

ಚಂಡೀಗಢ್​: ಪಂಜಾಬ್​ನ ಆಮ್​ ಆದ್ಮಿ ಪಕ್ಷದ ಸರ್ಕಾರದಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಎಲ್ಲ ಐವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್, ದೆಹಲಿ ಶಾಸಕ ರಾಘವ್ ಚಡ್ಡಾ, ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿಯ ಕುಲಪತಿ ಅಶೋಕ್ ಮಿತ್ತಲ್, ಡಾ.ಸಂದೀಪ್ ಪಾಠಕ್ ಹಾಗೂ ಸಂಜೀವ್ ಅರೋರಾ ಸೇರಿ ಎಲ್ಲರೂ ಸಂಸತ್ತಿನ ಮೆಲ್ಮನೆಗೆ ಪ್ರವೇಶಿಸಿದಂತಾಗಿದೆ. ​

ಈ ಹಿಂದೆ ಪಂಜಾಬ್​ನಿಂದ ಆಯ್ಕೆಯಾಗಿದ್ದ ಐವರು ರಾಜ್ಯಸಭಾ ಸದಸ್ಯರ ಅವಧಿಯು ಏ.9ರಂದು ಮುಕ್ತಾಯವಾಗಲಿದೆ. ಈ ಮಧ್ಯೆ ಇತ್ತೀಚಿಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ 117 ಸ್ಥಾನಗಳ ಪೈಕಿ 92 ಸ್ಥಾನಗಳಲ್ಲಿ ಆಪ್ ಗೆಲುವು ಸಾಧಿಸುವುದರೊಂದಿಗೆ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿದೆ. ಹೀಗಾಗಿ ಪಂಜಾಬ್​ನಿಂದ ತೆರವಾಗುತ್ತಿರುವ ಐದು ಸ್ಥಾನಗಳಿಗೆ ಆಪ್​ ಸರ್ಕಾರ ಹರ್ಭಜನ್ ಸಿಂಗ್ ಸೇರಿ ಐವರನ್ನು ನಾಮನಿರ್ದೇಶನ ಮಾಡಿತ್ತು.

ಮಾ.31ರಂದು ನಡೆಯುವ ರಾಜ್ಯಸಭೆ ಚುನಾವಣೆಗೆ 21ರಂದು ಐವರು ಸದಸ್ಯರು ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಹಿಂಪಡೆಯಲು ಗುರುವಾರ (ಮಾ.24) ಕೊನೆಯ ದಿನವಾಗಿತ್ತು. ಆದರೆ, ಯಾರೂ ಕೂಡ ನಾಮಪತ್ರ ಹಿಂಪಡೆಯದೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಪಂಜಾಬ್​ ವಿಧಾನಸಭೆಯ ಕಾರ್ಯದರ್ಶಿ ಸುರೀಂದರ್​ ಪಾಲ್​ ತಿಳಿಸಿದ್ದಾರೆ.

ಪಂಜಾಬ್​ನಿಂದ ರಾಜ್ಯಸಭೆಗೆ 7 ಸದಸ್ಯರನ್ನು ಆಯ್ಕೆ ಮಾಡಬಹುದಾಗಿದೆ. ಈ ಹಿಂದೆ ಪಂಜಾಬ್​ನಿಂದ ಆಯ್ಕೆಯಾಗಿದ್ದ ಕಾಂಗ್ರೆಸ್ ಮತ್ತು ​ಶಿರೋಮಣಿ ಅಕಾಲಿ ದಳದ ತಲಾ ಇಬ್ಬರು ಹಾಗೂ ಬಿಜೆಪಿಯ ಒಬ್ಬ ಸದಸ್ಯರು ನಿವೃತ್ತಿ ಹೊಂದುತ್ತಿದ್ದಾರೆ. ಕಾಂಗ್ರೆಸ್​ನ ಪ್ರತಾಪ್​ ಸಿಂಗ್​ ಬಜ್ವಾ, ಸಮ್ಶೇರ ಸಿಂಗ್​ ದುಲ್ಲೋ, ಶಿರೋಮಣಿ ಅಕಾಲಿ ದಳದ ಸುಖ್​ದೇವ್​ ಸಿಂಗ್​ ಧಿಂಡ್ಸಾ, ನರೇಶ್ ಗುಜ್ರಾಲ್, ಬಿಜೆಪಿಯ ಶ್ವೈತ್ ಮಲಿಕ್ ಅವಧಿ ಏ.9ಕ್ಕೆ ಅಂತ್ಯವಾಗಲಿದೆ.

ಇತ್ತ, ಇನ್ನಿಬ್ಬರು ಸದಸ್ಯರಾದ ಶಿರೋಮಣಿ ಅಕಾಲಿ ದಳದ ಬಲ್ವೀಂದರ್​ ಸಿಂಗ್​ ಹಾಗೂ ಕಾಂಗ್ರೆಸ್​ನ ಅಂಬಿಕಾ ಸೋನಿ ಸಹ ಪಂಜಾಬ್​ನಿಂದ ಆಯ್ಕೆಯಾಗಿದ್ದು, ಇವರ ಅಧಿಕಾರಾವಧಿ ಕೂಡ ಜು.4ಕ್ಕೆ ಮುಕ್ತಾಯವಾಗಲಿದೆ. ಆಗ ತೆರವಾಗುವ ಸ್ಥಾನಗಳಿಗೆ ಇದೇ ವರ್ಷ ಚುನಾವಣೆ ನಡೆಯಲಿದೆ. ಈ ಸ್ಥಾನಗಳನ್ನೂ ಆಪ್​ ಗೆಲ್ಲುವ ಸಾಧ್ಯತೆ ಇದೆ.

ಇದನ್ನೂಓದಿ: ಪ್ರಧಾನಿ ಮೋದಿ ಭೇಟಿ ಮಾಡಿದ ಭಗವಂತ್ ಮಾನ್: ₹50,000 ಕೋಟಿ ಪ್ಯಾಕೇಜ್‌ ಬೇಡಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.