ETV Bharat / bharat

ಪ್ರತಿ ಮನೆಗೂ ಸಿಸಿಟಿವಿ ಕ್ಯಾಮೆರಾ: ಲಕ್ನೋ ಪೊಲೀಸರ ಹೊಸ ಅಭಿಯಾನ - ಪ್ರತಿ ಮನೆಯಲ್ಲೂ ಸಿಸಿಟಿವಿ

ಅಪರಾಧ ಚಟುವಟಿಕೆಗಳನ್ನು ತಡೆಗಟ್ಟಲು ಲಕ್ನೋದ ಪ್ರತಿಯೊಂದು ಕಟ್ಟಡಕ್ಕೂ ಸಿಸಿಟಿವಿ ಅಳವಡಿಸುವ ಅಭಿಯಾನವನ್ನು ಪೊಲೀಸ್ ಇಲಾಖೆ ಆರಂಭಿಸಿದೆ.

'Har Ghar Camera' scheme launched in Lucknow

author img

By

Published : Jun 4, 2023, 3:49 PM IST

ಲಕ್ನೋ (ಉತ್ತರ ಪ್ರದೇಶ) : ರಾಜಧಾನಿ ಲಕ್ನೋದಲ್ಲಿ ಭದ್ರತೆಯನ್ನು ಹೆಚ್ಚಿಸಲು ಲಕ್ನೋ ಪೊಲೀಸರು 'ಹರ್ ಘರ್ ಕ್ಯಾಮೆರಾ' (ಪ್ರತಿ ಮನೆಯಲ್ಲೂ ಸಿಸಿಟಿವಿ) ಎಂಬ ಯೋಜನೆಯನ್ನು ಪ್ರಾರಂಭಿಸಿದ್ದಾರೆ. ಇದರ ಅಡಿಯಲ್ಲಿ ಪೊಲೀಸ್ ಅಧಿಕಾರಿಗಳು ಪ್ರತಿ ಪ್ರದೇಶಕ್ಕೂ ಭೇಟಿ ನೀಡುತ್ತಾರೆ ಮತ್ತು ಪ್ರತಿ ಮನೆಯ ಹೊರಗೆ ಕನಿಷ್ಠ ಒಂದು ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆ ಜನರಿಗೆ ಮನವಿ ಮಾಡಲಿದ್ದಾರೆ. ಒಂದು ಬಡಾವಣೆಯ ಎಲ್ಲ ಪ್ರದೇಶವನ್ನೂ ಸಿಸಿಟಿವಿ ಕಣ್ಗಾವಲಿಗೆ ಒಳಪಡಿಸುವುದು ಇದರ ಉದ್ದೇಶವಾಗಿದೆ. ಇದಕ್ಕಾಗಿ ಪೊಲೀಸರು ಪ್ರತಿ ವಾರ್ಡ್‌ನ ಕಾರ್ಪೊರೇಟರ್‌ಗಳು ಮತ್ತು ಪ್ರಮುಖ ನಾಗರಿಕರ ಸಹಕಾರ ಕೋರಲಿದ್ದಾರೆ.

ನಗರದ ಎಲ್ಲ ಸಣ್ಣ ಮಾರ್ಗಗಳು, ಗಲ್ಲಿಗಳು ಮತ್ತು ರಸ್ತೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕೆಂಬುದು ಈ ಯೋಜನೆಯ ಉದ್ದೇಶವಾಗಿದೆ. ಪ್ರಮುಖ ವ್ಯಾಪಾರಸ್ಥರು, ವ್ಯಾಪಾರಿಗಳು ಮತ್ತು ಅಂಗಡಿಕಾರರು ತಮ್ಮ ಕಟ್ಟಡಗಳ ಹೊರಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಕೇಳಿಕೊಳ್ಳಲಾಗಿದೆ. ತಮ್ಮ ವ್ಯಾಪ್ತಿಯ ಗರಿಷ್ಠ ಪ್ರದೇಶವು ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿರುವುದನ್ನು ಖಚಿತಪಡಿಸಿಕೊಳ್ಳಲು ಸಹಾಯಕ ಪೊಲೀಸ್ ಕಮಿಷನರ್ ಶ್ರೇಣಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಗೋಮತಿ ನಗರ ಎಸಿಪಿ ಸ್ವಾತಿ ಚೌಧರಿ, ಸಿಸಿಟಿವಿಗಳನ್ನು ಎಲ್ಲರೂ ಕಡ್ಡಾಯವಾಗಿ ಅಳವಡಿಸಬೇಕು. ಅವು ಅಪರಾಧಿಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತವೆ ಹಾಗೂ ಅಪರಾಧದ ಮಾದರಿಗಳ ಡೇಟಾಬೇಸ್ ಅನ್ನು ಸಿದ್ಧಪಡಿಸುತ್ತವೆ. ಇದರಿಂದ ನಿರ್ದಿಷ್ಟ ಸ್ಥಳದಲ್ಲಿ ನಡೆಯುವ ಅಪರಾಧದ ಆಧಾರದ ಮೇಲೆ ಪೊಲೀಸರನ್ನು ನಿಯೋಜಿಸಬಹುದು. ಕ್ಯಾಮೆರಾಗಳನ್ನು ಅಳವಡಿಸುವವರಿಗೆ ಹಿರಿಯ ಪೊಲೀಸ್ ಅಧಿಕಾರಿಯಿಂದ ಬಹುಮಾನ ನೀಡಲಾಗುತ್ತದೆ ಎಂದು ಹೇಳಿದರು.

ಪ್ರಮುಖ ಕ್ರಾಸಿಂಗ್‌ಗಳು, ಸಾರ್ವಜನಿಕ ಸ್ಥಳಗಳು ಮತ್ತು ಪ್ರಮುಖ ಮಾರ್ಗಗಳಲ್ಲಿ ಅಳವಡಿಸಲಾಗುವ ಸಿಸಿಟಿವಿಗಳ ಫೀಡ್ ಅನ್ನು ಸಂಬಂಧಪಟ್ಟ ಪ್ರದೇಶದ ಪೊಲೀಸ್ ಠಾಣೆಗಳೊಂದಿಗೆ ಜೋಡಿಸಲಾಗುವುದು ಎಂದು ಅವರು ಹೇಳಿದರು. ಮಹಾನಗರ್ ಪ್ರದೇಶದ ರೆಸ್ಟೋರೆಂಟ್‌ನಲ್ಲಿ ಇತ್ತೀಚೆಗೆ ನಾಲ್ಕು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಇದಕ್ಕೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಜಂಟಿ ಪೊಲೀಸ್ ಆಯುಕ್ತರು ಪ್ರಶಂಸಾ ಪತ್ರ ನೀಡಿ ಗೌರವಿಸಿದ್ದಾರೆ.

ಸಿಸಿಟಿವಿ ಕ್ಯಾಮೆರಾಗಳಂಥ ವೀಡಿಯೊ ಕಣ್ಗಾವಲು ವ್ಯವಸ್ಥೆಗಳು ವ್ಯವಹಾರಗಳಿಗೆ ಅನೇಕ ರೀತಿಯಲ್ಲಿ ಸಹಾಯ ಮಾಡುತ್ತವೆ. ಉದ್ಯಮದ ವಿಭಾಗ, ಸ್ಥಳ ಅಥವಾ ಗಾತ್ರ ಏನೇ ಇದ್ದರೂ ಸಿಸಿಟಿವಿ ಇಂದು ಬಹಳ ಅಗತ್ಯವಾಗಿವೆ. ಸಿಸಿಟಿವಿ ಕ್ಯಾಮೆರಾಗಳು ಅತ್ಯಂತ ಕಡಿಮೆ ಖರ್ಚಿನಲ್ಲಿ ಗರಿಷ್ಠ ಭದ್ರತೆಯನ್ನು ಒದಗಿಸುತ್ತವೆ. ಕಳ್ಳತನ, ವಿಧ್ವಂಸಕತೆಯಂಥ ಚಟುವಟಿಕೆಗಳನ್ನು ದೂರವಿಡುವಲ್ಲಿ ಭದ್ರತಾ ಕ್ಯಾಮೆರಾಗಳು ಪ್ರಮುಖ ಪಾತ್ರ ವಹಿಸುತ್ತವೆ.

ಮನೆ ಮತ್ತು ಕಚೇರಿ ಆವರಣದಲ್ಲಿ ಕಣ್ಗಾವಲು ಕ್ಯಾಮೆರಾಗಳನ್ನು ಅಳವಡಿಸುವುದರಿಂದ ಸಮಾಜ ವಿರೋಧಿ ವ್ಯಕ್ತಿಗಳು ಒಳಗಡೆ ಬರದಂತೆ ತಡೆಯಬಹುದು ಮತ್ತು ಒಳಗಿರುವವರಿಗೆ ಸುರಕ್ಷತೆಯನ್ನು ಖಾತ್ರಿಗೊಳಿಸುತ್ತದೆ. ರಿಟೇಲ್ ಅಲ್ಲದ ವ್ಯವಹಾರಗಳ ಸಂದರ್ಭದಲ್ಲಿ, ಮಾಲೀಕರು ಕಂಪನಿಯ ಸ್ವತ್ತುಗಳು ಮತ್ತು ಬೌದ್ಧಿಕ ಆಸ್ತಿಯನ್ನು ಸಂರಕ್ಷಿಸಬೇಕಾಗುತ್ತದೆ. ಇಂಥ ಆಸ್ತಿಗಳನ್ನು ಸ್ವತಃ ಅಲ್ಲಿನ ನೌಕರರೇ ಕದಿಯುವುದನ್ನು ತಡೆಯಲು ಕೂಡ ಸಿಸಿಟಿವಿ ಕ್ಯಾಮೆರಾಗಳು ಸಹಾಯ ಮಾಡುತ್ತವೆ.

ಇದನ್ನೂ ಓದಿ : ಮೇ 9ರ ಗಲಭೆ: ಇಮ್ರಾನ್​ ಖಾನ್​ಗೆ ಮಿಲಿಟರಿ ನ್ಯಾಯಾಲಯದಲ್ಲಿ ವಿಚಾರಣೆ ಸಾಧ್ಯತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.