ನವದೆಹಲಿ: ಹೊಸ ವರ್ಷ ಸ್ವಾಗತಕ್ಕೆ ಇಡೀ ಜಗತ್ತು ಸಜ್ಜಾಗಿದೆ. 2023ಕ್ಕೆ ಬೈ ಹೇಳಿ, 2024ಅನ್ನು ಬರಮಾಡಿಕೊಳ್ಳಲು ಜನತೆ ಕಾತರದಿಂದ ಕಾಯುತ್ತಿದ್ದಾರೆ. ನ್ಯೂಜಿಲೆಂಡ್‌ನ ಆಕ್ಲೆಂಡ್ ನೂತನ ವರ್ಷ 2024ಅನ್ನು ಈಗಾಗಲೇ ಸ್ವಾಗತಿಸಿದೆ. ಈಗಾಗಲೇ ವರ್ಣರಂಚಿತ ಪಟಾಕಿಗಳೊಂದಿಗೆ ಆ ದೇಶದ ಜನತೆ ಹೊಸ ವರ್ಷಕ್ಕೆ ಕಾಲಿಟ್ಟಿದ್ದಾರೆ.
-
#WATCH | New Zealand's Auckland welcomes the new year 2024 with fireworks
— ANI (@ANI) December 31, 2023 " class="align-text-top noRightClick twitterSection" data="
(Source: Reuters) pic.twitter.com/faBWL0b7Eh
">#WATCH | New Zealand's Auckland welcomes the new year 2024 with fireworks
— ANI (@ANI) December 31, 2023
(Source: Reuters) pic.twitter.com/faBWL0b7Eh#WATCH | New Zealand's Auckland welcomes the new year 2024 with fireworks
— ANI (@ANI) December 31, 2023
(Source: Reuters) pic.twitter.com/faBWL0b7Eh
ರಾಷ್ಟ್ರ ರಾಜಧಾನಿ ದೆಹಲಿ, ರಾಜ್ಯ ರಾಜಧಾನಿ ಬೆಂಗಳೂರು ಸೇರಿ ಇಡೀ ದೇಶ ಕೂಡ ಹೊಸ ವರ್ಷಾಚರಣೆಯ ಸಿದ್ಧತೆಯಲ್ಲಿದೆ. ಬೆಂಗಳೂರಿನ ಎಂ. ಜಿ. ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಕಲರ್‌ಫುಲ್ ಪಾರ್ಟಿ ಮಾಡಲು ಜನ ಆಗಮಿಸಿದ್ದಾರೆ. ಮಹಾರಾಷ್ಟ್ರ ರಾಜಧಾನಿ ಮುಂಬೈನ ಗೇಟ್‌ವೇ ಆಫ್ ಇಂಡಿಯಾದಲ್ಲೂ ಜನಸಾಗರ ಸೇರಿದೆ. ರಾಷ್ಟ್ರಪತಿ ಭವನವನ್ನು ವರ್ಣರಂಜಿತ ದೀಪಗಳಿಂದ ಅಲಂಕರಿಸಲಾಗಿದೆ.
-
#WATCH | Maharashtra: People throng Mumbai's Gateway of India ahead of New Year pic.twitter.com/gB22u7zXQK
— ANI (@ANI) December 31, 2023 " class="align-text-top noRightClick twitterSection" data="
">#WATCH | Maharashtra: People throng Mumbai's Gateway of India ahead of New Year pic.twitter.com/gB22u7zXQK
— ANI (@ANI) December 31, 2023#WATCH | Maharashtra: People throng Mumbai's Gateway of India ahead of New Year pic.twitter.com/gB22u7zXQK
— ANI (@ANI) December 31, 2023
ಅದರಲ್ಲೂ, ಇಂದು ವಾರಾಂತ್ಯದ ರಜೆ ಇರುವುದರಿಂದ ಜನತೆ ತಮ್ಮ ನೆಚ್ಚಿನ ತಾಣಗಳಿಗೆ ತೆರಳಿ ಸಂಭ್ರಮಿಸುತ್ತಿದ್ದಾರೆ. ತಮಿಳುನಾಡಿನ ಉದಗೈಯಲ್ಲಿ ಹೊಸ ವರ್ಷವನ್ನು ಆಚರಿಸಲು ಕೇರಳ, ಕರ್ನಾಟಕ, ಆಂಧ್ರಪ್ರದೇಶ ಮತ್ತು ಇತರ ರಾಜ್ಯಗಳಿಂದ ಪ್ರವಾಸಿಗರು ಆಗಮಿಸಿದ್ದು, ಬೋಟಿಂಗ್ನಲ್ಲಿ ಕಾಲ ಕಳೆಯುತ್ತಿದ್ದಾರೆ. ಇದೇ ವೇಳೆ, ಪ್ರಮುಖ ನಗರಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.
-
#WATCH | Tamil Nadu: Tourists from Kerala, Karnataka, Andhra Pradesh and other states throng Udhagai to celebrate the New Year. pic.twitter.com/5tCfgFWg54
— ANI (@ANI) December 31, 2023 " class="align-text-top noRightClick twitterSection" data="
">#WATCH | Tamil Nadu: Tourists from Kerala, Karnataka, Andhra Pradesh and other states throng Udhagai to celebrate the New Year. pic.twitter.com/5tCfgFWg54
— ANI (@ANI) December 31, 2023#WATCH | Tamil Nadu: Tourists from Kerala, Karnataka, Andhra Pradesh and other states throng Udhagai to celebrate the New Year. pic.twitter.com/5tCfgFWg54
— ANI (@ANI) December 31, 2023
ಶಿಮ್ಲಾದ ಮಾಲ್ ರೋಡ್‌ನಲ್ಲಿ ಹಿಮಾಚಲ ಪ್ರದೇಶ ಸಿಎಂ ಸುಖ್ವಿಂದರ್ ಸಿಂಗ್ ಸುಖು ಅವರು ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರು. ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಲಾಲ್ ಚೌಕ್‌ನಲ್ಲಿ ಹೊಸ ವರ್ಷದ ನಿಮಿತ್ತ ಜನತೆ ನೃತ್ಯ ಮತ್ತು ಹಾಡುಗಳಲ್ಲಿ ತೊಡಗಿದ್ದರು.
-
#WATCH | Himachal Pradesh CM Sukvinder Singh Sukhu participates in the New Year’s Eve celebration at Mall Road, Shimla. pic.twitter.com/wMng1r6e1s
— ANI (@ANI) December 31, 2023 " class="align-text-top noRightClick twitterSection" data="
">#WATCH | Himachal Pradesh CM Sukvinder Singh Sukhu participates in the New Year’s Eve celebration at Mall Road, Shimla. pic.twitter.com/wMng1r6e1s
— ANI (@ANI) December 31, 2023#WATCH | Himachal Pradesh CM Sukvinder Singh Sukhu participates in the New Year’s Eve celebration at Mall Road, Shimla. pic.twitter.com/wMng1r6e1s
— ANI (@ANI) December 31, 2023
ಶುಭ ಕೋರಿದ ರಾಷ್ಟ್ರಪತಿ: ದೇಶದಲ್ಲಿ ಹೊಸ ವರ್ಷದ ಮುನ್ನಾ ದಿನವಾದ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ದೇಶದ ನಾಗರಿಕರಿಗೆ ಶುಭಾಶಯ ಕೋರಿದ್ದಾರೆ. ''2024 ವರ್ಷವು ಎಲ್ಲರಿಗೂ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ. ನಮ್ಮ ದೇಶದ ಪ್ರಗತಿಗೆ ನಾವು ಕೊಡುಗೆ ನೀಡುವುದನ್ನು ಮುಂದುವರಿಸೋಣ. ಹೊಸ ವರ್ಷವನ್ನು ಸ್ವಾಗತಿಸೋಣ ಮತ್ತು ಸಮೃದ್ಧ ಸಮಾಜ ಮತ್ತು ರಾಷ್ಟ್ರವನ್ನು ನಿರ್ಮಿಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳೋಣ'' ಎಂದು ರಾಷ್ಟ್ರಪತಿ ಕರೆ ನೀಡಿದ್ದಾರೆ.
ಅಲ್ಲದೇ, ''ಹೊಸ ವರ್ಷದ ಸಂತೋಷದಾಯಕ ಸಂದರ್ಭದಲ್ಲಿ, ನಾನು ಭಾರತ ಮತ್ತು ವಿದೇಶಗಳಲ್ಲಿ ವಾಸಿಸುವ ಎಲ್ಲಾ ಭಾರತೀಯರಿಗೆ ನನ್ನ ಆತ್ಮೀಯ ಶುಭಾಶಯಗಳನ್ನು ಮತ್ತು ಶುಭಾಶಯಗಳನ್ನು ತಿಳಿಸುತ್ತೇನೆ'' ಎಂದು ಮುರ್ಮು ಹೇಳಿದ್ದಾರೆ. ಮತ್ತೊಂದೆಡೆ, ಕರ್ನಾಟಕ ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಸಹ ಜನತೆಗೆ ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿದ್ದಾರೆ.
''ಹೊಸ ವರ್ಷದ ಮುಂಜಾನೆಯು ನಮ್ಮ ಮಹಾನ್ ರಾಷ್ಟ್ರದ ಎಲ್ಲ ಅದ್ಭುತ ಜನರಿಗೆ ಸಂತೋಷ, ಸಮೃದ್ಧಿ ಮತ್ತು ಏಕತೆಯನ್ನು ತರಲಿ. ಮುಂಬರುವ ಅವಕಾಶಗಳನ್ನು ಅಳವಡಿಸಿಕೊಳ್ಳೋಣ ಮತ್ತು ಉಜ್ವಲ, ಹೆಚ್ಚು ಭರವಸೆಯ ಭವಿಷ್ಯವನ್ನು ಒಟ್ಟಿಗೆ ನಿರ್ಮಿಸೋಣ'' ಎಂದು ರಾಜ್ಯಪಾಲರು ಶುಭ ಕೋರಿದ್ದಾರೆ.
-
#WATCH | Delhi: Rashtrapati Bhavan, North and South Block illuminated with colourful lights and decorated beautifully on New Year's Eve. pic.twitter.com/niAd7ZZVCn
— ANI (@ANI) December 31, 2023 " class="align-text-top noRightClick twitterSection" data="
">#WATCH | Delhi: Rashtrapati Bhavan, North and South Block illuminated with colourful lights and decorated beautifully on New Year's Eve. pic.twitter.com/niAd7ZZVCn
— ANI (@ANI) December 31, 2023#WATCH | Delhi: Rashtrapati Bhavan, North and South Block illuminated with colourful lights and decorated beautifully on New Year's Eve. pic.twitter.com/niAd7ZZVCn
— ANI (@ANI) December 31, 2023
ಯಾವ ರಾಷ್ಟ್ರದಲ್ಲಿ ಯಾವಾಗ ಹೊಸ ವರ್ಷ?: ಜಗತ್ತಿನ ವಿವಿಧ ರಾಷ್ಟ್ರಗಳು ಬೇರೆ-ಬೇರೆ ಸಮಯದಲ್ಲಿ ಹೊಸ ವರ್ಷವನ್ನು ಸ್ವಾಗತಿಸುತ್ತವೆ. ಆಕ್ಲೆಂಡ್ನಲ್ಲಿ ಅಲ್ಲಿನ ಕಾಲಮಾನದ ಪ್ರಕಾರ, ಡಿಸೆಂಬರ್ 31ರ ಬೆಳಗ್ಗೆ 11ಕ್ಕೆ ಹೊಸ ವರ್ಷಾಚರಣೆ ಶುರುವಾಗುತ್ತದೆ. ಈ ವೇಳೆ, ಭಾರತದಲ್ಲಿ ಸಂಜೆ 4.30 ಆಗಿರುತ್ತದೆ. ಹೀಗಾಗಿ ಆಕ್ಲೆಂಡ್ ಜನತೆ ಈಗಾಗಲೇ ಹೊಸ ವರ್ಷಕ್ಕೆ ಕಾಲಿಟ್ಟಿದ್ದಾರೆ.
ಅದೇ ರೀತಿಯಾಗಿ ಆಸ್ಟ್ರೇಲಿಯಾದಲ್ಲೂ ಹೊಸ ವರ್ಷದ ಸಂಭ್ರಮ ಶುರುವಾಗಿದೆ. ಮಧ್ಯಾಹ್ನ 1 ಗಂಟೆಗೆ ಸಿಡ್ನಿಯಲ್ಲಿ ಬೆರಗುಗೊಳಿಸುವ ಪಟಾಕಿಗಳ ಸದ್ದು ಮತ್ತು ದೀಪಾಲಂಕಾರಗಳ ಮೂಲಕ 2024ರ ಹೊಸ ವರ್ಷವನ್ನು ಬರಮಾಡಿಕೊಳ್ಳಲಾಗಿದೆ. ಭಾರತದ ಕಾಲಮಾನದ ಪ್ರಕಾರ ಸಂಜೆ 6.30 ಆಗಿರುತ್ತದೆ. ಜಪಾನ್, ದಕ್ಷಿಣ ಮತ್ತು ಉತ್ತರ ಕೊರಿಯಾದಲ್ಲಿ ಮಧ್ಯಾಹ್ನ ಅಲ್ಲಿನ ಕಾಲಮಾನದಂತೆ 3 ಗಂಟೆ, ಚೀನಾ, ಮಲೇಷಿಯಾ, ಸಿಂಗಾಪುರ, ಹಾಂಗ್ ಕಾಂಗ್, ಫಿಲಿಪೈನ್ಸ್ನಲ್ಲಿ ಸಂಜೆ 4 ಗಂಟೆಗೆ ಹೊಸ ವರ್ಷಾಚರಣೆ ಮಾಡಲಾಗಿದೆ.
ಇದನ್ನೂ ಓದಿ: ಹೊಸ ವರ್ಷಾಚರಣೆಗೆ ಬೆಂಗಳೂರು ರೆಡಿ: ನಗರದ ಹಲವೆಡೆ ಭದ್ರತೆ ಬಿಗಿ