ETV Bharat / bharat

ಬಿಎನ್​ಬಿ ಕ್ರಿಪ್ಟೊದಿಂದ 100 ಮಿಲಿಯನ್ ಡಾಲರ್ ಎಗರಿಸಿದ ಹ್ಯಾಕರ್ಸ್​ - ಕ್ರಿಪ್ಟೋಕರೆನ್ಸಿ ಎಕ್ಸ್‌ಚೇಂಜ್ ಬೈನಾನ್ಸ್

ಕಂಪನಿಗೆ ಆದ ನಷ್ಟ 100 ಮಿಲಿಯನ್ ರಿಂದ 110 ಮಿಲಿಯನ್​ ಡಾಲರ್ ಮಧ್ಯದಲ್ಲಿದೆ ಎಂದು ಬೈನಾನ್ಸ್​ ಸಿಇಓ ಚಾಂಗ್​ಪೆಂಗ್ ಝಾವೊ ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು- ವಿಷಯವನ್ನು ಈಗ ನಿಯಂತ್ರಿಸಲಾಗಿದೆ. ನಿಮ್ಮ ಹಣ ಸುರಕ್ಷಿತವಾಗಿದೆ. ಅನಾನುಕೂಲವಾಗಿದ್ದಕ್ಕೆ ಕ್ಷಮೆ ಕೋರುತ್ತೇವೆ ಮತ್ತು ಮುಂದಿನ ಬೆಳವಣಿಗೆಗಳ ಬಗ್ಗೆ ನಿಮಗೆ ಮಾಹಿತಿ ನೀಡುತ್ತಿರುತ್ತೇವೆ ಎಂದು ತಿಳಿಸಿದ್ದಾರೆ.

ಬಿಎನ್​ಬಿ ಕ್ರಿಪ್ಟೊದಿಂದ 100 ಮಿಲಿಯನ್ ಡಾಲರ್ ಎಗರಿಸಿದ ಹ್ಯಾಕರ್ಸ್​
Hackers steal over $100 mn from top crypto exchange Binance
author img

By

Published : Oct 8, 2022, 1:06 PM IST

ನವದೆಹಲಿ: ಹ್ಯಾಕರ್‌ಗಳು ತನ್ನ ಪ್ಲಾಟ್‌ಫಾರ್ಮ್‌ನಿಂದ 100 ಮಿಲಿಯನ್‌ ಡಾಲರ್​ಗಿಂತಲೂ ಅಧಿಕ ಮೌಲ್ಯದ ಕ್ರಿಪ್ಟೊಕರೆನ್ಸಿ ಕದ್ದಿದ್ದಾರೆ ಎಂದು ವಿಶ್ವದ ಅತಿದೊಡ್ಡ ಕ್ರಿಪ್ಟೋಕರೆನ್ಸಿ ಎಕ್ಸ್‌ಚೇಂಜ್ ಬೈನಾನ್ಸ್ ದೃಢಪಡಿಸಿದೆ.

BNB ಚೈನ್ ಎಂದೂ ಕರೆಯಲ್ಪಡುವ ಬೈನಾನ್ಸ್​ ಬ್ಲಾಕ್​ಚೈನ್​ನಿಂದ ಆರಂಭದಲ್ಲಿ ಹ್ಯಾಕರ್ ಸುಮಾರು 568 ಮಿಲಿಯನ್ ಡಾಲರ್ ಮೌಲ್ಯದ ಒಟ್ಟು 2 ಮಿಲಿಯನ್ BNB ಟೋಕನ್‌ಗಳನ್ನು ಕದ್ದಿದ್ದಾರೆ ಎಂದು ಹೇಳಿದೆ. 100 ಮಿಲಿಯನ್ ಡಾಲರ್​ ನಷ್ಟಕ್ಕೆ ಕಾರಣವಾದ ಬಿಎನ್​​ಬಿ ಚೈನ್​​ ಅನ್ನು ಕಂಪನಿಯು ಅಮಾನತುಗೊಳಿಸಿತ್ತು. ಇದರಿಂದಾಗಿ ಉಳಿದ ಟೋಕನ್‌ಗಳನ್ನು ವರ್ಗಾಯಿಸಿಕೊಳ್ಳಲು ಸೈಬರ್ ಅಪರಾಧಿಗಳಿಗೆ ಸಾಧ್ಯವಾಗಲಿಲ್ಲ.

ಕಂಪನಿಗೆ ಆದ ನಷ್ಟ 100 ಮಿಲಿಯನ್ ರಿಂದ 110 ಮಿಲಿಯನ್​ ಡಾಲರ್ ಮಧ್ಯದಲ್ಲಿದೆ ಎಂದು ಬೈನಾನ್ಸ್​ ಸಿಇಓ ಚಾಂಗ್​ಪೆಂಗ್ ಝಾವೊ ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು- ವಿಷಯವನ್ನು ಈಗ ನಿಯಂತ್ರಿಸಲಾಗಿದೆ. ನಿಮ್ಮ ಹಣ ಸುರಕ್ಷಿತವಾಗಿದೆ. ಅನಾನುಕೂಲವಾಗಿದ್ದಕ್ಕೆ ಕ್ಷಮೆಕೋರುತ್ತೇವೆ ಮತ್ತು ಮುಂದಿನ ಬೆಳವಣಿಗೆಗಳ ಬಗ್ಗೆ ನಿಮಗೆ ಮಾಹಿತಿ ನೀಡುತ್ತಿರುತ್ತೇವೆ ಎಂದು ತಿಳಿಸಿದ್ದಾರೆ.

ಕಾಮನ್ ಲೈಬ್ರರಿಯಲ್ಲಿ ಕೆಳ ಹಂತದ ಸುರಕ್ಷತೆಯಲ್ಲಿ ಅತ್ಯಂತ ಸೂಕ್ಷ್ಮವಾಗಿ ಫೋರ್ಜರಿ ಮೂಲಕ ವಂಚನೆ ಮಾಡಲಾಗಿದೆ. ಬಿಎನ್​ಬಿ ಚೈನ್​ನಲ್ಲಿ ಇರಬಹುದಾದ ಸಂಭವನೀಯ ಪ್ರತಿಯೊಂದು ಪ್ರಮುಖ ಬಗ್ ಹುಡುಕಿ ತಿಳಿಸುವ ಸಂಶೋಧಕರಿಗೆ 1 ಮಿಲಿಯನ್ ಡಾಲರ್ ನೀಡುವುದಾಗಿ ಕಂಪನಿ ತಿಳಿಸಿದೆ.​ ಹ್ಯಾಕರ್‌ಗಳನ್ನು ಹಿಡಿಯುವವರಿಗೆ ಬಹುಮಾನ ನೀಡಲಾಗುವುದು. ಮರುಪಡೆಯಲಾದ ಹಣದ ಶೇಕಡಾ 10 ರಷ್ಟು ಬಹುಮಾನ ನೀಡಲಾಗುವುದು ಎಂದು ಕಂಪನಿ ಘೋಷಿಸಿದೆ.

ಭವಿಷ್ಯದಲ್ಲಿ ಎದುರಾಗಬಹುದಾದ ಸೈಬರ್ ದಾಳಿಗಳನ್ನು ತಡೆಗಟ್ಟಲು ಬಿಎನ್​ಬಿ ಚೈನ್ ಹೊಸ on-chain governance mechanism ಜಾರಿಗೊಳಿಸಲಿದೆ ಎಂದು ಹೇಳಿದೆ.

ಇದನ್ನೂ ಓದಿ: ಗೇಮಿಂಗ್​ ಆ್ಯಪ್ ವಂಚಕ ಅಮೀರ್​ ಖಾನ್ ಕ್ರಿಪ್ಟೊ ವ್ಯಾಲೆಟ್​​ನಲ್ಲಿ 14 ಕೋಟಿ ರೂ. ಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.