ETV Bharat / bharat

ಜಿಮ್​ನಲ್ಲಿ ಹಿಜಾಬ್​ ಹಾಕಿಕೊಂಡೇ ವ್ಯಾಯಾಮ ಮಾಡುತ್ತಿರುವ ನಾರಿಯರು!

ಮಹಾರಾಷ್ಟ್ರದ ಮುಂಬೈನ ಮುಸ್ಲಿಂ ಬಹುಸಂಖ್ಯಾತ ಪ್ರದೇಶವಾದ ಖಡಕ್‌ನಲ್ಲಿ ಮೂವರು ಮಹಿಳೆಯರು ಒಟ್ಟಾಗಿ ಬಜೆಟ್ ಸ್ನೇಹಿ ಜಿಮ್ ಸೆಂಟರ್ ನಡೆಸುತ್ತಿದ್ದು, ಫಿಟ್‌ನೆಸ್ ಜೊತೆಗೆ ಹಿಜಾಬ್​ ಸಂಪ್ರದಾಯಕ್ಕೆ ಬದ್ಧವಾಗಿರಲು ಸಹಾಯ ಮಾಡುವುದು ಇವರ ಉದ್ದೇಶವಾಗಿದೆ.

Gym Centre for Hijab Clad Women in Mumbai  Gym in Mumbai for women empowerment  Gym in Muslim majority area of Mumbai  ಜಿಮ್​ನಲ್ಲಿ ಹಿಜಾಬ್​ ಹಾಕಿಕೊಂಡೇ ವ್ಯಾಯಾಮ  ಮುಸ್ಲಿಂ ಬಹುಸಂಖ್ಯಾತ ಪ್ರದೇಶ  ಬಜೆಟ್ ಸ್ನೇಹಿ ಜಿಮ್ ಸೆಂಟರ್  ಹಿಜಾಬ್​ ಧರಿಸಿ ವ್ಯಾಯಾಮ  ಮಹಿಳೆಯರ ತಂಡ ಜಿಮ್​ ಓಪನ್  ಹಿಜಾಬ್​ ಸಂಪ್ರದಾಯಕ್ಕೆ ಬದ್ದ
ಹಿಜಾಬ್​ ಹಾಕಿಕೊಂಡೇ ವ್ಯಾಯಾಮ
author img

By

Published : Oct 1, 2022, 12:33 PM IST

Updated : Oct 1, 2022, 12:41 PM IST

ಮುಂಬೈ(ಮಹಾರಾಷ್ಟ್ರ: ಹಿಜಾಬ್​ ಧರಿಸಿ ವ್ಯಾಯಾಮ ಮಾಡಲು ಇಚ್ಛಿಸುವವರಿಗೆ ಇಲ್ಲೊಂದು ಮಹಿಳೆಯರ ತಂಡ ಜಿಮ್​ ಓಪನ್​ ಮಾಡಿದೆ. ಇಲ್ಲಿ ಮಹಿಳೆಯರಿಗೆ ವ್ಯಾಯಾಮದ ಜೊತೆನೇ ಹಿಜಾಬ್​ ಸಂಪ್ರದಾಯಕ್ಕೆ ಬದ್ಧವಾಗಿರಲು ಸಹಾಯವನ್ನೂ ಮಾಡುತ್ತಿದ್ದಾರೆ.

ಹೌದು, ಇಲ್ಲಿನ ಮುಸ್ಲಿಂ ಪ್ರದೇಶವಾದ ಖಡಕ್‌ನಲ್ಲಿ ಮೂವರು ಮಹಿಳೆಯರು ಒಟ್ಟಾಗಿ ಸೇರಿ ಬಜೆಟ್ ಸ್ನೇಹಿ ಜಿಮ್ ಕೇಂದ್ರವನ್ನು ನಡೆಸುತ್ತಿದ್ದಾರೆ. ಈ ಪ್ರದೇಶದ ಮಹಿಳೆಯರಿಗೆ ತಮ್ಮ ಫಿಟ್‌ನೆಸ್ ಅಗತ್ಯಗಳನ್ನು ಪೂರೈಸುವುದರ ಜೊತೆಗೆ ಹಿಜಾಬ್​ ಸಂಪ್ರದಾಯಕ್ಕೆ ಬದ್ಧವಾಗಿರಲು ಸಹಾಯ ಮಾಡುವುದು ಈ ಯುವತಿಯರ ಉದ್ದೇಶವಾಗಿದೆ.

Gym Centre for Hijab Clad Women in Mumbai  Gym in Mumbai for women empowerment  Gym in Muslim majority area of Mumbai  ಜಿಮ್​ನಲ್ಲಿ ಹಿಜಾಬ್​ ಹಾಕಿಕೊಂಡೇ ವ್ಯಾಯಾಮ  ಮುಸ್ಲಿಂ ಬಹುಸಂಖ್ಯಾತ ಪ್ರದೇಶ  ಬಜೆಟ್ ಸ್ನೇಹಿ ಜಿಮ್ ಸೆಂಟರ್  ಹಿಜಾಬ್​ ಧರಿಸಿ ವ್ಯಾಯಾಮ  ಮಹಿಳೆಯರ ತಂಡ ಜಿಮ್​ ಓಪನ್  ಹಿಜಾಬ್​ ಸಂಪ್ರದಾಯಕ್ಕೆ ಬದ್ದ
ಹಿಜಾಬ್​ ಹಾಕಿಕೊಂಡೇ ವ್ಯಾಯಾಮ

ಸಮೀರಾ, ತಸ್ನೀಮ್ ಮತ್ತು ಕಲ್ಯಾಣಿ ಸೇರಿದಂತೆ ಮೂವರು ಮಹಿಳೆಯರು ಜಿಮ್​ ಕೇಂದ್ರವನ್ನು ನಡೆಸುತ್ತಿದ್ದಾರೆ. ಜನನಿಬಿಡ ಪ್ರದೇಶದಲ್ಲಿ ಗೃಹಿಣಿಯರ ಫಿಟ್‌ನೆಸ್ ಮತ್ತು ಸುಧಾರಣೆಗಾಗಿ ಈ ಜಿಮ್ ತೆರೆಯುವ ಹಿಂದಿನ ಉದ್ದೇಶವಾಗಿದೆ. ಮುಸ್ಲಿಂ ಹೆಚ್ಚಾಗಿರುವ ಪ್ರದೇಶವಾಗಿರುವುದರಿಂದ ಮಹಿಳೆಯರು ಖಾಸಗಿಯಾಗಿರಲು ಬಯಸುತ್ತಾರೆ. ಈ ಜಿಮ್​ ಮಹಿಳೆಯರಿಗೆ ಬಜೆಟ್​ ಸ್ನೇಹಿವಾಗಿದ್ದು, ಈಗ ಈ ಜಿಮ್​ನ ಸದಸ್ಯರ ಸಂಖ್ಯೆ 100 ಕ್ಕಿಂತ ಹೆಚ್ಚಾಗಿದೆ ಎಂಬುದು ಜಿಮ್​ ಮಾಲೀಕರ ಮಾತಾಗಿದೆ.

ಮಹಿಳಾ ಸಬಲೀಕರಣಕ್ಕಾಗಿ ಕೆಲಸ ಮಾಡುವ ಅನೇಕ ಸರ್ಕಾರೇತರ ಸಂಸ್ಥೆಗಳೊಂದಿಗೆ ಸಮೀರಾ ಸಂಪರ್ಕ ಹೊಂದಿದ್ದಾರೆ. ಕೆಲವರು ಹಿಜಾಬ್​ ತೆಗೆಯಲು ಇಚ್ಛಿಸುವುದಿಲ್ಲ. ಇನ್ನೂ ಕೆಲ ಮುಸ್ಲಿಂ ಮಹಿಳೆಯರು ಹಿಜಾಬ್​ ಧರಿಸಿಕೊಂಡು ಜಿಮ್​ ಮಾಡಲು ಇಚ್ಛಿಸುತ್ತಾರೆ. ಅವರು ಇಲ್ಲಿ ಯಾವುದೇ ಭಯವಿಲ್ಲದೇ ಹಿಜಾಬ್​ ಧರಿಸಿಯೇ ವ್ಯಾಯಾಮ ಮಾಡಬಹುದಾಗಿದೆ. ಅಷ್ಟೇ ಅಲ್ಲ, ಇಲ್ಲಿ ಜಿಮ್​ ಮಾಡುವ ಮಹಿಳೆಯರಿಗೆ ಕಡಿಮೆ ಶುಲ್ಕ ವಿಧಿಸಲಾಗಿದೆ. ಹೀಗಾಗಿ ನಗರದ ಮಹಿಳೆಯರು ಸಹ ವ್ಯಾಯಾಮ ಮಾಡಲು ಇಚ್ಛಿಸುತ್ತಾರೆ ಎಂದು ಸಮೀರಾ ಹೇಳುತ್ತಾರೆ.

ಮುಂಬೈನ ಈ ನಗರದ ಮುಸ್ಲಿಂ ಪ್ರದೇಶಗಳು ಬಡತನದ ತೆಕ್ಕೆಯಲ್ಲಿ ಸಿಲುಕಿಕೊಂಡಿವೆ. ಇವರು ವೈದ್ಯಕೀಯ ಸೌಲಭ್ಯಗಳು ಮತ್ತು ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ ಎನ್ನಲಾಗ್ತಿದೆ.

ಓದಿ: ಜಿಮ್​ನಲ್ಲಿ ಬಳಸುವ ಪ್ರೋಟೀನ್​ ಪೌಡರ್​ ಬಗ್ಗೆ ಪ್ರತಿಧ್ವನಿ: ಕ್ರಮಕ್ಕೆ ಶಾಸಕ ಒತ್ತಾಯ, ಸಮಗ್ರ ತನಿಖೆ ಎಂದ ಸಚಿವರು

Last Updated : Oct 1, 2022, 12:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.