ETV Bharat / bharat

ಹುಡುಗಿರ ಹೆಸ್ರಲ್ಲಿ ಇನ್​ಸ್ಟಾಗ್ರಾಂ ಅಕೌಂಟ್​... ವ್ಯಕ್ತಿಯಿಂದ 70 ಯುವತಿಯರಿಗೆ ವಂಚನೆ! - 70 ಯುವತಿಯರಿಗೆ ವಂಚನೆ

ಯುವತಿಯರ ಅಶ್ಲೀಲ ಫೋಟೋ ಸಂಗ್ರಹಿಸಿ ಅವರಿಗೆ ಮೋಸ ಮಾಡ್ತಿದ್ದ ವ್ಯಕ್ತಿಯನ್ನು ಬಂಧನ ಮಾಡುವಲ್ಲಿ ಹೈದರಾಬಾದ್​ ಪೊಲೀಸರು ಯಶಸ್ವಿಯಾಗಿದ್ದಾರೆ.

man arrested in Hyderabad
man arrested in Hyderabad
author img

By

Published : Feb 3, 2021, 8:40 PM IST

ಹೈದರಾಬಾದ್​: ಹುಡುಗಿಯರ ಹೆಸರಿನಲ್ಲಿ ನಕಲಿ ಇನ್​ಸ್ಟಾಗ್ರಾಂ ಅಕೌಂಟ್ ಓಪನ್ ಮಾಡಿ ಯುವತಿಯರನ್ನು ಫ್ರೆಂಡ್​ ಮಾಡಿಕೊಂಡು ಮೋಸ ಮಾಡ್ತಿದ್ದ ವ್ಯಕ್ತಿಯೋರ್ವನನ್ನು ಬಂಧನ ಮಾಡಲಾಗಿದೆ.

ಹೈದರಾಬಾದ್​ ಪೊಲೀಸರಿಂದ ವ್ಯಕ್ತಿಯ ಬಂಧನ

ಅಮೆಜಾನ್​ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಸುಮಂತ್​ ಮಣಿಕೊಂಡದಲ್ಲಿ ವಾಸವಾಗಿದ್ದ. ಇನ್​ಸ್ಟಾಗ್ರಾಂನಲ್ಲಿ ಹುಡುಗಿಯರ ಹೆಸರಿನಲ್ಲಿ ನಕಲಿ ಖಾತೆ ತೆರೆದು, ಅನೇಕ ಯುವತಿಯರೊಂದಿಗೆ ಚಾಟ್​ ಮಾಡಿದ್ದಾನೆ. ಅವರನ್ನು ಫ್ರೆಂಡ್ ಮಾಡಿಕೊಂಡು ಫೋಟೋ ಸಂಗ್ರಹಿಸಿದ್ದಾನೆ. ಇದಾದ ಬಳಿಕ ಅವರ ಅಶ್ಲೀಲ ಫೋಟೋ ಇಟ್ಟುಕೊಂಡು ಬೆದರಿಕೆ ಹಾಕುತ್ತಿದ್ದನಂತೆ.

ಓದಿ: ಪತ್ನಿ-ಪ್ರಿಯಕರನನ್ನು ಕೊಂದ ಪ್ರಕರಣ: ಕೂಡ್ಲಿಗಿ ಠಾಣೆಗೆ ಬಂದು ಶರಣಾದ ಆರೋಪಿ

ಸಂತ್ರಸ್ತೆಯೊಬ್ಬಳು ನೀಡಿದ ದೂರಿನ ಆಧಾರದ ಮೇಲೆ ಹೈದರಾಬಾದ್​ ಪೊಲೀಸರು ಸುಮಂತ್​ನನ್ನು ಬಂಧಿಸಿದ್ದಾರೆ. ಈಗಾಗಲೇ 70 ಯುವತಿಯರಿಗೆ ಆತ ವಂಚನೆ ಮಾಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಈತ ಮೂಲತಃ ವಿಜಯವಾಡದವನು ಎಂದು ಗುರುತಿಸಲಾಗಿದೆ. ಕಳೆದ ಕೆಲ ತಿಂಗಳಿಂದ ಇಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹುಡುಗಿಯರು ಅಪರಿಚಿತರೊಂದಿಗೆ ಚಾಟ್ ಮಾಡದಂತೆ ಹೈದರಾಬಾದ್​ ಸೈಬರ್​ ಕ್ರೈಂ ಎಸಿಪಿ ಪ್ರಸಾದ್​ ಸಲಹೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.