ETV Bharat / bharat

ಹರಿಯಾಣ ಹಿಂಸಾಚಾರ: ಹಿಂಸಾತ್ಮಕ ಚಟುವಟಿಕೆಗಳಿಂದ ದೂರವಿರಲು ಅಮೆರಿಕದ​ ಸರ್ಕಾರದ ಮನವಿ

ಹರಿಯಾಣದಲ್ಲಿ ನಡೆಯುತ್ತಿರುವ ಘರ್ಷಣೆಯನ್ನು ಶಾಂತಗೊಳಿಸುವಂತೆ ಅಮೆರಿಕ​ ಸರ್ಕಾರ ಮನವಿ ಮಾಡಿದೆ.

ಹರಿಯಾಣ ಹಿಂಸಾಚಾರ
ಹರಿಯಾಣ ಹಿಂಸಾಚಾರ
author img

By

Published : Aug 3, 2023, 10:16 AM IST

ಗುರುಗ್ರಾಮ್​​ (ಹರಿಯಾಣ)​: ನುಹ್‌ನಲ್ಲಿ ಸೋಮವಾರ ಆರಂಭವಾದ ಎರಡು ಗುಂಪುಗಳ ನಡುವಿನ ಘರ್ಷಣೆ ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಗುರುಗ್ರಾಮ್ ಮತ್ತು ನೆರೆಯ ಪ್ರದೇಶಗಳಲ್ಲಿ ಶಾಂತಿ ಮತ್ತು ಸಾರ್ವಜನಿಕ ಸುವ್ಯವಸ್ಥೆ ಕಾಪಾಡುವ ಸಲುವಾಗಿ, ಸರ್ಕಾರ ಶನಿವಾರದವರೆಗೆ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದೆ. ಏತನ್ಮಧ್ಯೆ, ಅಮೆರಿಕದ ಜೋ ಬೈಡನ್​​ ಸರ್ಕಾರ ಶಾಂತಿಗಾಗಿ ಕರೆ ನೀಡಿದ್ದು, ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸುವಂತೆ ಮನವಿ ಮಾಡಿದೆ.

  • " class="align-text-top noRightClick twitterSection" data="">

ಅಮೆರಿಕ ಸರ್ಕಾರದ ವಕ್ತಾರ ಮ್ಯಾಥ್ಯೂ ಮಿಲ್ಲರ್, "ಹಿಂಸಾತ್ಮಕ ಘರ್ಷಣೆಗಳಿಗೆ ಸಂಬಂಧಿಸಿದಂತೆ, ನಾವು ಯಾವಾಗಲೂ ಶಾಂತಿಗಾಗಿ ಮತ್ತು ಪಕ್ಷಗಳು ಹಿಂಸಾತ್ಮಕ ಚಟುವಟಿಕೆಗಳಿಂದ ದೂರ ಇರುವಂತೆ ಮನವಿ ಮಾಡುತ್ತೇವೆ" ಎಂದು ಹೇಳಿದ್ದಾರೆ. ಹಾಗೆಯೇ ಗುರುಗ್ರಾಮ್ ಹಿಂಸಾಚಾರದಲ್ಲಿ ಅಮೆರಿಕದ ಪ್ರವಾಸಿಗರಿಗೆ ಯಾವುದೇ ಅಪಾಯ ಸಂಭವಿಸಿಲ್ಲ ಎಂಬ ಬಗ್ಗೆಯೂ ಅವರು ಮಾಹಿತಿ ನೀಡಿದರು.

ಇಂಟರ್​ನೆಟ್​​ ಸೇವೆ ಸ್ಥಗಿತ: ಸೋಮವಾರ ರಾಜ್ಯದ ನುಹ್‌ನಲ್ಲಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆ ವಾಟ್ಸ್​ಆ್ಯಪ್​ , ಫೇಸ್‌ಬುಕ್, ಟ್ವಿಟರ್ ಮುಂತಾದ ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಮೂಲಕ ಘರ್ಷಣೆ ಬಗ್ಗೆ ತಪ್ಪು ಮಾಹಿತಿ ಮತ್ತು ವದಂತಿಗಳನ್ನು ಹರಡುವುದನ್ನು ತಡೆಗಟ್ಟಲು ಇಂಟರ್ನೆಟ್ ಅಮಾನತುಗೊಳಿಸಲಾಗಿದೆ.

ಪ್ರಸ್ತುತ, ನುಹ್, ಫರಿದಾಬಾದ್, ಪಲ್ವಾಲ್ ಮತ್ತು ಗುರುಗ್ರಾಮ್, ಸೋಹ್ನಾ, ಪಟೌಡಿ ಮತ್ತು ಮಾನೇಸರ್‌ನ ಮೂರು ಉಪವಿಭಾಗಗಳಲ್ಲಿ ಆಗಸ್ಟ್ 5 ರವರೆಗೆ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲು ರಾಜ್ಯ ಸರ್ಕಾರ ಬುಧವಾರ ನಿರ್ಧರಿಸಿದೆ. ಈ ಜಿಲ್ಲೆಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಕೂಡ ಹೆಚ್ಚಿಸಲಾಗಿದೆ.

  • Pl ease do not listen to rumours. Please do not give credence to reports on social media.

    We request you to immediately call 112 in case u need any help at all and we assure you - Gurugram Police shall be there for you.

    — Gurugram Police (@gurgaonpolice) August 1, 2023 " class="align-text-top noRightClick twitterSection" data=" ">

ಆರು ಜನ ಸಾವು: ಎರಡು ಗುಂಪಗಳ ಘರ್ಷಣೆಯಲ್ಲಿ ಇದುವರೆಗೆ 6 ಜನ ಸಾವನ್ನಪ್ಪಿದ್ದಾರೆ. ಇವರಲ್ಲಿ ಇಬ್ಬರು ಗೃಹರಕ್ಷಕರು ಹಾಗೂ ನಾಲ್ವರು ನಾಗರಿಕರು ಎಂದು ಗುರುತಿಸಲಾಗಿದೆ. ಸುಮಾರು 20ಕ್ಕೂ ಹೆಚ್ಚು ಪೊಲೀಸರು ಸೇರಿದಂತೆ ಹಲವಾರು ಜನರು ಘಟನೆಯಲ್ಲಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಸೆಕ್ಷನ್ 144 ಜಾರಿ: ನುಹ್ ಸೇರಿದಂತೆ ಹರಿಯಾಣದ 8 ​​ಜಿಲ್ಲೆಗಳಾದ ನುಹ್, ಪಲ್ವಾಲ್, ಫರಿದಾಬಾದ್, ರೆವಾರಿ, ಗುರುಗ್ರಾಮ್, ಮಹೇಂದ್ರಗಢ, ಸೋನಿಪತ್ ಮತ್ತು ಪಾಣಿಪತ್​ನಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಈ ಜಿಲ್ಲೆಗಳಲ್ಲಿ ಶಿಕ್ಷಣ ಸಂಸ್ಥೆಗಳು, ಕೋಚಿಂಗ್ ಸೆಂಟರ್‌ಗಳನ್ನೂ ಮುಚ್ಚಲಾಗಿದೆ.

116 ಜನರ ಬಂಧನ: ಘಟನೆ ಸಂಭವಿಸಿದ ಬಳಿಕ ಈವರೆಗೂ ಒಟ್ಟು 116 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಶಾಂತಿ ಮತ್ತು ಸಹೋದರತ್ವ ಕಾಪಾಡುವಂತೆ ಸಿಎಂ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಬಿಗಿ ಬಂದೋಬಸ್ತ್​​: ಹಿಂಸಾಚಾರ ನಿಯಂತ್ರಿಸಲು 30 ತುಕಡಿಗಳು ಪೊಲೀಸ್​ ಮತ್ತು 20 ಅರೆಸೇನಾ ಪಡೆಗಳನ್ನು ಕೇಂದ್ರದಿಂದ ಕರೆಸಲಾಗಿದೆ. ಈ ಪೈಕಿ ನುಹ್‌ನಲ್ಲಿ 14 ತುಕಡಿಗಳು, 3 ಪಲ್ವಾಲ್‌ಗೆ, 2 ಫರಿದಾಬಾದ್‌ಗೆ ಮತ್ತು ಒಂದನ್ನು ಗುರುಗ್ರಾಮ್‌ನಲ್ಲಿ ನಿಯೋಜಿಸಲಾಗಿದೆ.

ಇದನ್ನೂ ಓದಿ: ಹರಿಯಾಣ ಹಿಂಸಾಚಾರದಲ್ಲಿ ಇಬ್ಬರು ಗೃಹರಕ್ಷಕ ದಳದ ಸಿಬ್ಬಂದಿ ಸಾವು: ಶಾಲಾ - ಕಾಲೇಜು ಬಂದ್, ಇಂಟರ್ನೆಟ್ ಸೇವೆ ಸ್ಥಗಿತ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.