ನವದೆಹಲಿ: ರಾಜಧಾನಿ ದೆಹಲಿಯ ಸಮೀಪದಲ್ಲಿನ ಗುರುಗ್ರಾಮನ್ನಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿಯ ಗಾಲ್ಫ್ ಕೋರ್ಸ್ ರಸ್ತೆಯಲ್ಲಿಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಅಮಿತ್ ಪ್ರಕಾಶ್ ಎಂಬ ವ್ಯಕ್ತಿ ಲಿಫ್ಟ್ ಕೇಳಿದ ವ್ಯಕ್ತಿಗೆ ಬಾಡಿಗೆ ಹಣ ಹಾಗೂ ತನ್ನ ಸ್ವಂತ ಕಾರನ್ನೇ ಕೊಟ್ಟ ಬಂದಿದ್ದಾನೆ.
-
Man gets drunk, befriends a stranger who joins him in his car for drinks. Man forgets he is in his own car, gets out when stranger asks him to, takes a metro home. Stranger drives off with the car. Best story of the day. pic.twitter.com/pHwOeg3Sif
— Soutik Biswas (@soutikBBC) June 12, 2023 " class="align-text-top noRightClick twitterSection" data="
">Man gets drunk, befriends a stranger who joins him in his car for drinks. Man forgets he is in his own car, gets out when stranger asks him to, takes a metro home. Stranger drives off with the car. Best story of the day. pic.twitter.com/pHwOeg3Sif
— Soutik Biswas (@soutikBBC) June 12, 2023Man gets drunk, befriends a stranger who joins him in his car for drinks. Man forgets he is in his own car, gets out when stranger asks him to, takes a metro home. Stranger drives off with the car. Best story of the day. pic.twitter.com/pHwOeg3Sif
— Soutik Biswas (@soutikBBC) June 12, 2023
ಏನಿದು ಘಟನೆ?: ಪ್ರಕಾಶ್ ಎಂಬ ವ್ಯಕ್ತಿ ಕೆಲಸದ ಬಳಿಕ ಸಂಜೆ ಸಮಯ ತಮ್ಮ ಕಾರಿನಲ್ಲಿ ಕುಳಿತು ಮದ್ಯ ಸೇವಿಸುತ್ತಿದ್ದರು. ಇದನ್ನು ಗಮನಿಸಿದ ಅಪರಿಚಿತ ವ್ಯಕ್ತಿಯೊಬ್ಬ ಕಾರಿನ ಬಳಿ ಬಂದು ತಾನೂ ಕಾರಲ್ಲಿ ಕುಳಿತು ಮದ್ಯ ಸೇವಿಸಿಸಬಹುದಾ ಎಂದು ಕೇಳಿಕೊಂಡಿದ್ದಾನೆ. ಅಮಲಿನಲ್ಲಿದ್ದ ಅಮಿತ್ ಇದಕ್ಕೆ ಒಪ್ಪಿದ್ದಾರೆ. ನಂತರ ಇಬ್ಬರು ಕಾರಲ್ಲಿ ಕುಳಿತು ಮದ್ಯ ಸೇವಿಸಿದ್ದಾರೆ.
ಬಳಿಕ ಅಪರಿಚಿತ ವ್ಯಕ್ತಿ ಸುಭಾಷ್ ಚೌಕ್ ಮೆಟ್ರೋ ವರೆಗೂ ಕಾರಲ್ಲಿ ಡ್ರಾಪ್ ಮಾಡುವಂತೆ ಅಮಿತ್ಗೆ ಕೇಳಿದ್ದಾರೆ. ಇದಕ್ಕೆ ಒಪ್ಪಿದ ಅಮೀತ್ ಕಾರಲ್ಲಿ ಮೆಟ್ರೊ ನಿಲ್ದಾಣಕ್ಕೆ ಡ್ರಾಪ್ ಮಾಡಲು ಹೋಗಿದ್ದಾರೆ. ಬಳಿಕ ಅಪರಿಚಿತ ವ್ಯಕ್ತಿ ನೀವು ಹೇಳಿದ ಸ್ಥಳ ಬಂದಿದೆ ಎಂದು ಹೇಳಿ ಅಮಿತ್ರನ್ನು ಕಾರಿನಿಂದ ಕೆಳಗಿಳಿಯಲು ಹೇಳಿದ್ದಾರೆ.
-
This comic sequence is going to figure in Rohit Shetty's golmaal (whatever the sequence number now is 100 or 102), hope, the man gets the royalty. :) :)
— Manish Rao (@immanishrao) June 12, 2023 " class="align-text-top noRightClick twitterSection" data="
">This comic sequence is going to figure in Rohit Shetty's golmaal (whatever the sequence number now is 100 or 102), hope, the man gets the royalty. :) :)
— Manish Rao (@immanishrao) June 12, 2023This comic sequence is going to figure in Rohit Shetty's golmaal (whatever the sequence number now is 100 or 102), hope, the man gets the royalty. :) :)
— Manish Rao (@immanishrao) June 12, 2023
ಇನ್ನೂ ನಶೆಯಲ್ಲಿದ್ದ ಅಮಿತ್ ತನ್ನದೇ ಕಾರು ಎಂಬುದನ್ನು ಮರೆತು ಕಾರಿಂದ ಕೆಳಗಿಳಿದು ಲಿಫ್ಟ್ ಕೊಟ್ಟಿದ್ದಕ್ಕೆ ಅಪರಿಚಿತ ವ್ಯಕ್ತಿಗೆ ಧನ್ಯವಾದವನ್ನೂ ಕೂಡಾ ಹೇಳಿ, ಹಣವನ್ನೂ ನೀಡಿ ಮೆಟ್ರೋದಲ್ಲಿ ಮನೆಗೆ ತೆರಳಿದ್ದಾರೆ. ಇಷ್ಟೆಲ್ಲ ಆದ ನಂತರ ಬೆಳಗ್ಗೆ ಪ್ರಜ್ಞೆ ಬಂದಿದೆ. ಆಗ ಆತನಿಗೆ ತನ್ನ ಕಾರು, ಲ್ಯಾಪ್ ಟಾಪ್, ಮೊಬೈಲ್ ಫೋನ್ ಹಾಗೂ 18 ಸಾವಿರ ನಗದು ಕಾಣೆಯಾಗಿರುವುದು ಗೊತ್ತಾಗಿದೆ. ನಡೆದದ್ದು ಎಲ್ಲ ನೆನಪಾದಾಗ ಸೆಕ್ಟರ್ 65 ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.
-
Typical comedy scene from a Kader Khan/Govinda movie.
— Prashant Jain (@hulkafulka) June 12, 2023 " class="align-text-top noRightClick twitterSection" data="
">Typical comedy scene from a Kader Khan/Govinda movie.
— Prashant Jain (@hulkafulka) June 12, 2023Typical comedy scene from a Kader Khan/Govinda movie.
— Prashant Jain (@hulkafulka) June 12, 2023
ದೂರಿನಲ್ಲಿ ಏನಿದೆ?: ದೂರಿನಲ್ಲಿ, 'ನಾನು ಕೆಲಸ ಮುಗಿಸಿ ಗಾಲ್ಫ್ ಕೋರ್ಸ್ ರಸ್ತೆಯಲ್ಲಿರುವ ಲೇಕ್‌ಫಾರೆಸ್ಟ್ ವೈನ್ ಶಾಪ್‌ನಲ್ಲಿರುವ ಬಿವೈಒಬಿ ಕಿಯೋಸ್ಕ್‌ಗೆ ತೆರಳಿದ್ದೆ. ಮೊದಲು ಕಡಿದು ನಂತರ ಮತ್ತೊಮ್ಮೆ ಕುಡಿಯಲೆಂದೇ ಅಮಲಿನಲ್ಲಿ ನಾನು ಬಾಟಲ್ ಒಂದಕ್ಕೆ 20 ಸಾವಿರ ರೂ. ನೀಡದ್ದೆ, ಆದರೆ ಅಂಗಡಿಯವನು ಮೋಸ ಮಾಡದೇ ನನಗೆ 18,000 ರೂ.ನಗದನ್ನು ಹಿಂದಿರುಗಿಸಿದ್ದಾರೆ. ಆ ನಂತರ ನಾನು ಕಾರಿನಲ್ಲಿ ಬಂದು ಮತ್ತೆ ಕುಡಿಯಲು ಪ್ರಾರಂಭಿಸಿದೆ. ಸ್ವಲ್ಪ ಸಮಯದ ನಂತರ ಅಪರಿಚಿತ ವ್ಯಕ್ತಿಯೊಬ್ಬರು ನನ್ನೊಂದಿಗೆ ಕುಡಿಯಲು ಅನುಮತಿ ಕೇಳಿದರು. ಹಾಗಾಗಿ ನಾನು ಕುಡಿಯಲು ಅನುಮತಿ ನೀಡಿದ್ದೇನೆ. ವಿಪರೀತ ಮದ್ಯ ಸೇವಿಸಿದ ಬಳಿಕ ಅಪರಿಚಿತನ ಜೊತೆ ಸುಭಾಷ್ ಚೌಕ್‌ಗೆ ಹೋಗಿದ್ದೆ. ಅಲ್ಲಿಗೆ ಹೋದ ಮೇಲೆ ಸ್ವಂತ ಕಾರಿನಲ್ಲಿದ್ದೇನೆ ಎಂಬುದೇ ಮರೆತು ಹೋಗಿತ್ತು. ಅಪರಿಚಿತರ ಒತ್ತಾಯಕ್ಕೆ ಮಣಿದು ಕಾರಿನಿಂದ ಇಳಿದಿದ್ದೇನೆ. ಅಲ್ಲಿಂದ ಮೆಟ್ರೋ ಮೂಲಕ ಮನೆ ತಲುಪಿದ್ದೇನೆ‘‘ ಎಂದು ಅಮಿತ್ ಪೊಲೀಸರಿಗೆ ದೂರಿನಲ್ಲಿ ತಿಳಿಸಿದ್ದಾರೆ.
ಪೊಲೀಸರು ಅಪರಿಚಿತ ಆರೋಪಿತನ ವಿರುದ್ಧ ಕಳ್ಳತನಕ್ಕೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 379 ರ ಅಡಿ ಪ್ರಕರಣ ದಾಖಲಿಸಿದ್ದಾರೆ. ಈ ಘಟನೆ ಟ್ವಿಟರ್ನಲ್ಲೂ ಬಾರಿ ವೈರಲ್ ಆಗಿದೆ. ಘಟನೆಯ ಕುರಿತು ಜನರು ತಮಾಷೆಯಾಗಿ ಟ್ವೀಟ್ ಮಾಡಲು ಪ್ರಾರಂಭಿಸಿದದ್ದಾರೆ. 'ಖಾದರ್ ಖಾನ್ ಎನ್ನುವವರು, ಗೋವಿಂದ ಚಿತ್ರದ ಹಾಸ್ಯ ದೃಶ್ಯದಂತಿದೆ' ಎಂದು ಟ್ವೀಟ್ ಮಾಡಿದ್ದರೆ, ಇನ್ನೊಬ್ಬ ಬಳಕೆದಾರರು ತಮಾಷೆಯಾಗಿ, 'ಇದು ರೋಹಿತ್ ಶೆಟ್ಟಿ ಅವರ ಗೋಲ್‌ಮಾಲ್ ಕಾಮಿಕ್ ಸೀಕ್ವೆನ್ಸ್ ಆಗಿದೆ ಎಂದು ಬರೆದಿದ್ದಾರೆ.
ಇದನ್ನೂ ಓದಿ: ಎಣ್ಣೆ ಏಟಿನಲ್ಲಿ ಆಪರೇಷನ್ ಮಾಡಲು ಬಂದ ಡಾಕ್ಟರ್: ಆಕ್ರೋಶಗೊಂಡ ರೋಗಿಗಳು..!